‘ಅವೆುರಿಕವನ್ನು ಉಳಿಸಲು’ ಜಾರ್ಜಿಯ ಮತದಾರರಿಗೆ ಟ್ರಂಪ್ ಕರೆ!

Update: 2021-01-05 16:19 GMT

ಡಾಲ್ಟನ್ (ಅವೆುರಿಕ), ಜ. 5: ಸೆನೆಟ್‌ನ ಎರಡು ಸ್ಥಾನಗಳಿಗಾಗಿ ಜಾರ್ಜಿಯ ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ರಿಪಬ್ಲಿಕನ್ ಸಂಸದರನ್ನು ಆರಿಸುವ ಮೂಲಕ ‘ಅಮೆರಿಕವನ್ನು ಉಳಿಸುವಂತೆ’ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜ್ಯದ ಮತದಾರರಿಗೆ ಸೋಮವಾರ ಮನವಿ ಮಾಡಿದ್ದಾರೆ.

 ಈ ಉಪಚುನಾವಣೆಯ ಫಲಿತಾಂಶವು ಸೆನೆಟ್‌ನ ನಿಯಂತ್ರಣವನ್ನು ನಿರ್ಧರಿಸುತ್ತದೆ ಹಾಗೂ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ರ ಆರಂಭಿಕ ಆಡಳಿತದ ಮೇಲೆ ಪರಿಣಾಮ ಬೀರಬಹುದಾಗಿದೆ.

‘‘ನಮ್ಮ ದೇಶವು ನಿಮ್ಮನ್ನು ಅವಲಂಬಿಸಿದೆ. ಇಡೀ ಜಗತ್ತು ನಾಳೆ ಜಾರ್ಜಿಯದ ಜನರನ್ನು ಗಮನಿಸುತ್ತಿರುತ್ತದೆ’’ ಎಂದು ಟ್ರಂಪ್ ಹೇಳಿದರು.

ಟ್ರಂಪ್ ಈಗಲೂ ನವೆಂಬರ್ 3ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಚುನಾವಣೆಯಲ್ಲಿ ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಾಗೂ ದೇಶದ ಮಾಜಿ ಉಪಾಧ್ಯಕ್ಷ ಜೋ ಬೈಡನ್ ವಿರುದ್ಧ ಟ್ರಂಪ್ ಸೋಲನುಭವಿಸಿದ್ದಾರೆ. ಜನವರಿ 20ರಂದು ಅಧಿಕಾರ ಹಸ್ತಾಂತರ ನಡೆಯಲಿದೆ.

ಅವರು ಡಾಲ್ಟನ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ತನ್ನ ಅಭಿಮಾನಿಗಳನ್ನು ಉದ್ದೇಶಿಸಿ ಟ್ರಂಪ್ ಮಾತನಾಡುತ್ತಿದ್ದರು.

‘‘ಅವಳಿ ಸೆನೆಟ್ ಸ್ಥಾನಗಳಿಗೆ ಮಂಗಳವಾರ ನಡೆಯುತ್ತಿರುವ ಉಪ ಚುನಾವಣೆಯು ನಾವು ಪ್ರೀತಿಸುವ ಅಮೆರಿಕವನ್ನು ರಕ್ಷಿಸಲು ನಿಮಗಿರುವ ಕೊನೆಯ ಅವಕಾಶವಾಗಿದೆ. ನೀವು ಮತ ಹಾಕಲು ಬರದಿದ್ದರೆ, ಉಗ್ರ ಪಂಥೀಯ ಡೆಮಾಕ್ರಟ್‌ಗಳು ಗೆಲ್ಲುತ್ತಾರೆ’’ ಎಂದು ಟ್ರಂಪ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News