ವಿಠಲಾಚಾರ್ಯ ಎಂಬ ಮಾಂತ್ರಿಕ

Update: 2021-01-07 08:26 GMT

ಭಾರತದಲ್ಲಿಯೇ ವಿಶಿಷ್ಟ ಸ್ಥಾನ ಗಳಿಸಿದ ಕನ್ನಡ ಮೂಲದ ನಿರ್ದೇಶಕರೊಬ್ಬರ ಜನ್ಮಶತಮಾನದ ವರ್ಷ ಸದ್ದಿಲ್ಲದೇ ಮುಗಿಯುತ್ತಿದೆ. ಬದುಕಿದ್ದ ಕಾಲದಲ್ಲಿ ಅವರ ಹೆಸರು ಬ್ರಾಂಡ್ ಆಗಿದ್ದ ವಿಶಿಷ್ಟ ವಿದ್ಯಮಾನದ ನಿರ್ದೇಶಕ ‘ಜಾನಪದ ಬ್ರಹ್ಮ’ ಎಂದು ಕರೆಸಿಕೊಂಡು ಅಲ್ಪ ಬಂಡವಾಳದಲ್ಲಿ ಅಪಾರ ಪ್ರಮಾಣದಲ್ಲಿ ಜನರನ್ನು ರಂಜಿಸುವ ಸಿನೆಮಾಗಳ ಸೂತ್ರವನ್ನು ರೂಪಿಸಿದ ಗಾರುಡಿಗ. ನಟರ ಇಮೇಜಿಗೆ ಹೊಸ ರೂಪಕೊಟ್ಟು ಅವರ ಜನಪ್ರಿಯತೆಯ ವೃದ್ಧಿಗೆ ಬೆಂಬಲವಾಗಿ ನಿಂತ ಅಪರೂಪದ ನಿರ್ದೇಶಕ..... ಅವರೇ ಬಿ. ವಿಠಲಾಚಾರ್ಯ ಅಥವಾ ಬಿ.ವಿ. ಆಚಾರ್ಯ.

ಕೆ. ಪುಟ್ಟಸ್ವಾಮಿ ಹುಟ್ಟಿದ್ದು ಕನಕಪುರ ತಾಲೂಕಿನ ವರಗೇರಹಳ್ಳಿಯಲ್ಲಿ. ಕನಕಪುರ, ಕೆ.ಜಿ.ಎಫ್. ಮುಂತಾದೆಡೆಗಳಲ್ಲಿ ಪ್ರಾಥಮಿಕ ಶಿಕ್ಷಣ. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಕೃಷಿ ಪದವಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಡಿಪ್ಲೊಮಾ ಹಾಗೂ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಿಲಿಟ್ ಪದವಿ. ಪತ್ರಕರ್ತರಾಗಿ, ಕರ್ನಾಟಕ ಸರಕಾರದ ವಾರ್ತಾ ಇಲಾಖೆ, ಅರಣ್ಯ, ಜೀವ ಪರಿಸರ, ಹಿಂದುಳಿದ ವರ್ಗಗಳ ಇಲಾಖೆ, ಯುವಜನ ಮತ್ತು ಕ್ರೀಡಾ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂತಾದೆಡೆ ಹಲವು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಜೀವ ಸಂಕುಲಗಳ ಉಗಮ, ಜೀವಜಾಲ, ಸಿನಿಮಾಯಾನ ಮುಂತಾದವು ಮುಖ್ಯ ಕೃತಿಗಳು. ಮಣಿ ಭೂಮಿಕ್, ಸಹಸ್ರಬುದ್ಧೆ, ಭೀರೇಂದ್ರ ಭಟ್ಟಾಚಾರ್ಯ, ಎಚ್.ಜಿ.ವೇಲ್ಸ್, ಜೂಲ್ಸ್ ವರ್ನ್ ಮತ್ತು ಲ್ಯ್ ವ್ಯಾಲೆಸ್ ಮುಂತಾದವರ ಕೃತಿಗಳನ್ನು ಅನುವಾದಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯ ಪರಿಸರ ಪ್ರಶಸ್ತಿ, ರಾಷ್ಟ್ರಪತಿಗಳು ಕೊಡಮಾಡುವ ಸ್ವರ್ಣ ಕಮಲ ಮುಂತಾದ ಪ್ರಶಸ್ತಿಗಳು ಸಂದಿವೆ.

ಕನ್ನಡದ ಮಾತಿನ ಚಲನಚಿತ್ರರಂಗ ಎಂಭತ್ತಾರು ವಸಂತಗಳನ್ನು ಪೂರೈಸಿದೆ. ಅದನ್ನು ಭದ್ರವಾಗಿ ನೆಲೆಯೂರಲು ಆರಂಭದಲ್ಲಿ ದುಡಿದ ಹಲವಾರು ಪ್ರಾತಃಸ್ಮರಣೀಯರು ಹುಟ್ಟಿ ನೂರು ವರ್ಷಗಳ ಮೇಲಾಗಿವೆ. ಅಲ್ಲೊಂದು ಇಲ್ಲೊಂದು ಕಲಾವಿದ-ನಿರ್ಮಾಪಕರನ್ನು ಶತಮಾನೋತ್ಸವ ಹೆಸರಿನಲ್ಲಿ ನೆನೆಸಿಕೊಳ್ಳುವುದು ಕಾಟಾಚಾರ ಎಂಬಂತೆ ನಡೆದು ಬಂದಿದೆ. ಮೊದಲ ಕನ್ನಡ ಚಲನಚಿತ್ರದ ನಾಯಕ, ನಿರ್ಮಾಪಕ ಎಂ.ವಿ. ಸುಬ್ಬಯ್ಯ ನಾಯ್ಡು, ಆರ್. ನಾಗೇಂದ್ರ ರಾವ್, ಬಿ.ಆರ್. ಪಂತುಲು, ಗುಬ್ಬಿ ವೀರಣ್ಣ, ಜಿ.ವಿ. ಅಯ್ಯರ್, ಎಚ್.ಎಲ್.ಎನ್. ಸಿಂಹ, ಕೆಂಪರಾಜ ಅರಸ್, ಹೊನ್ನಪ್ಪ ಭಾಗವತರ್, ಬಿ.ಎಸ್. ರಂಗಾ, ಹುಣಸೂರು ಕೃಷ್ಣಮೂರ್ತಿ ಮೊದಲಾದವರನ್ನು ಸಂಬಂಧಪಟ್ಟ ಕ್ಷೇತ್ರವಾಗಲಿ, ಸರಕಾರವಾಗಲಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಸೂಕ್ತವಾಗಿ ನೆನೆಯುವ ಕಾರ್ಯವನ್ನು ಮಾಡಲಿಲ್ಲ. 1921ರಲ್ಲಿ ಜನಿಸಿದ ಮತ್ತೋರ್ವ ಪ್ರಾತಃಸ್ಮರಣೀಯ ನಿರ್ಮಾಪಕ, ನಿರ್ದೇಶಕ ಡಿ. ಶಂಕರಸಿಂಗ್ ಅವರ ಜನ್ಮಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಿರುವುದಾಗಿ ಅವರ ಪುತ್ರ, ನಿರ್ಮಾಪಕ, ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಹೇಳಿಕೆ ನೀಡಿದ್ದಾರೆ. ಇದು ಸ್ವಾಗತಾರ್ಹ ಕ್ರಮ. ಆದರೆ ಶಂಕರ್‌ಸಿಂಗ್ ಅವರ ಜೊತೆಯಲ್ಲಿಯೇ ಪಾಲುದಾರರಾಗಿ ಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿ ನಂತರ ಭಾರತದಲ್ಲಿಯೇ ವಿಶಿಷ್ಟ ಸ್ಥಾನ ಗಳಿಸಿದ ಕನ್ನಡ ಮೂಲದ ನಿರ್ದೇಶಕರೊಬ್ಬರ ಜನ್ಮಶತಮಾನದ ವರ್ಷ ಸದ್ದಿಲ್ಲದೇ ಮುಗಿಯುತ್ತಿದೆ. ಬದುಕಿದ್ದ ಕಾಲದಲ್ಲಿ ಅವರ ಹೆಸರು ಬ್ರಾಂಡ್ ಆಗಿದ್ದ ವಿಶಿಷ್ಟ ವಿದ್ಯಮಾನದ ನಿರ್ದೇಶಕ ‘ಜಾನಪದ ಬ್ರಹ್ಮ’ ಎಂದು ಕರೆಸಿಕೊಂಡು ಅಲ್ಪ ಬಂಡವಾಳದಲ್ಲಿ ಅಪಾರ ಪ್ರಮಾಣದಲ್ಲಿ ಜನರನ್ನು ರಂಜಿಸುವ ಸಿನೆಮಾಗಳ ಸೂತ್ರವನ್ನು ರೂಪಿಸಿದ ಗಾರುಡಿಗ. ನಟರ ಇಮೇಜಿಗೆ ಹೊಸ ರೂಪಕೊಟ್ಟು ಅವರ ಜನಪ್ರಿಯತೆಯ ವೃದ್ಧಿಗೆ ಬೆಂಬಲವಾಗಿ ನಿಂತ ಅಪರೂಪದ ನಿರ್ದೇಶಕ..... ಅವರೇ ಬಿ. ವಿಠಲಾಚಾರ್ಯ ಅಥವಾ ಬಿ.ವಿ. ಆಚಾರ್ಯ.

ವಿಠಲಾಚಾರ್ಯ (18.01.1920-28.05.1999) ಅವರ ಬದುಕು-ಸಾಧನೆಯ ಬಗ್ಗೆ ಕನ್ನಡದಲ್ಲಿ ಆಕರಗಳ ಕೊರತೆಯಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪಾದಿಸಿದ ‘ಕನ್ನಡ ಚಲನಚಿತ್ರ ಇತಿಹಾಸ’ದಲ್ಲೂ ಅವರ ಬಗ್ಗೆ ಹೆಚ್ಚಿನ ಮಾಹಿತಿಗಳು ದೊರೆಯುವುದಿಲ್ಲ. ತಮ್ಮ ಸೌಭಾಗ್ಯಲಕ್ಷ್ಮಿ ಚಿತ್ರಕ್ಕೆ ಸೆನ್ಸಾರ್ ಅವರಿಂದ ಎದುರಿಸಿದ ತೊಂದರೆಯ ಬಗ್ಗೆ ಅವರು ನೀಡಿರುವ ಪ್ರತಿಕ್ರಿಯೆ ಹೊರತುಪಡಿಸಿದರೆ, ಬೇರೆ ಯಾವ ಉಪಯುಕ್ತ ಮಾಹಿತಿಯಾಗಿ ದೊರೆಯುವುದಿಲ್ಲ. ‘ಸಿನಿಮಾಯಾನ’ ಪುಸ್ತಕ ರಚಿಸುವ ಸಂದರ್ಭದಲ್ಲಿ ಅಲ್ಲಿ ಇಲ್ಲಿ ಹೆಕ್ಕಿ ನೀಡಿದ ಮಾಹಿತಿಯೇ ಅವರ ಬಗ್ಗೆ ದೊರೆಯುವ ದೀರ್ಘ ಮಾಹಿತಿ. ಆದರೆ ಇತ್ತೀಚೆಗೆ ಅಭಿಜಾತ ನಟ ಎನ್‌ಟಿಆರ್ ಅವರ ಜೀವನ ಚರಿತ್ರೆಯನ್ನು ಬರೆದ ಕೆ. ಚಂದ್ರಹಾಸ ಮತ್ತು ಕೆ. ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ‘ಎನ್‌ಟಿಆರ್ ಎ ಬಯಾಗ್ರಫಿ’ಯಲ್ಲಿ ವಿಠಲಾಚಾರ್ಯ ಅವರ ಬದುಕು-ಸಾಧನೆ, ಎನ್‌ಟಿಆರ್ ಅವರ ಜನಪ್ರಿಯತೆ ವೃದ್ಧಿಗೆ ನೀಡಿದ ಅವರ ಕಾಣಿಕೆ ಮತ್ತು ಅವರ ಚಿತ್ರಗಳ ವಿಶಿಷ್ಟತೆಯ ಮೇಲೆ ಬೆಳಕು ಚೆಲ್ಲಲು ‘‘ಬ್ರಹ್ಮ ಆಫ್ ಫೋಕ್‌ಲೋರ್ ಮೂವೀಸ್’’ ಎಂಬ ಶೀರ್ಷಿಕೆಯಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ. ಬಹುಶಃ ಅದು ವಿಠಲಾಚಾರ್ಯ ಅವರ ಸಾಧನೆಗೆ ಕನ್ನಡಿ ಹಿಡಿದು ಗೌರವ ಸಲ್ಲಿಸಿದ ಅಧ್ಯಾಯ.

ಬಿ. ವಿಠಲಾಚಾರ್ಯ ಅವರ ಬದುಕು ಆಸಕ್ತಿದಾಯಕವಾಗಿದೆ. ಅವರು ಜನಿಸಿದ್ದು ಉಡುಪಿ ತಾಲೂಕಿನ ಬೆಳ್ಳೆ ಎಂಬ ಗ್ರಾಮದಲ್ಲಿ. ಕಟ್ಟುನಿಟ್ಟಿನ ತಂದೆ. ಯಕ್ಷಗಾನ, ಗಾಯನದಲ್ಲಿ ಆಸಕ್ತಿಯಿದ್ದ ಬಾಲಕ. ಆತನಿಗೆ, ರಾಜ-ರಾಣಿಯರ, ಮಂತ್ರವಾದಿಗಳ, ಭ್ರಾಮಕ ಜಗತ್ತಿನ ಕತೆ ಹೇಳಿ ಗೆಳೆಯರನ್ನು ರಂಜಿಸುವುದು ಪ್ರಿಯವಾದ ಕೆಲಸವಾಗಿತ್ತು. ತನ್ನ ಮುಂದಿನ ಬದುಕನ್ನು ರೂಪಿಸಿಕೊಳ್ಳಲು ಊರು ಬಿಟ್ಟ ಬಾಲಕನ ವಯಸ್ಸು ಆಗಿನ್ನೂ ಒಂಭತ್ತು. ಆತ ಬದುಕು ಅರಸಿ ಬಂದದ್ದು ಅರಸೀಕೆರೆಗೆ. ಅಲ್ಲಿ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಬಾಲಕ ಹೊಟೇಲ್ ವ್ಯವಹಾರಗಳನ್ನು ಕಲಿಯುತ್ತಾ ಹೋದ. ತಾನು ಉಳಿಸಿದ ಹಣದಲ್ಲಿ ಹೊಟೇಲ್ ಒಂದನ್ನು ಕೊಂಡು, ಜನರನ್ನು ಆಕರ್ಷಿಸಲು ಪ್ರಯೋಗ ನಡೆಸಿದ. ಹೊಟೇಲ್‌ನ ತಿಂಡಿಗಳು ರುಚಿಕರವಾಗಿರುವಂತೆ ನೋಡಿಕೊಂಡ ಮೇಲೆ ಕೆಲವೇ ದಿನಗಳಲ್ಲಿ ಜನಪ್ರಿಯವಾಗಿ ಬೆಳಗಿನ ನಾಷ್ಟಕ್ಕೆ ಜನ ಮುತ್ತಲಾರಂಭಿಸಿದರು. ಉದ್ಯಮ ಬೆಳೆಯಿತು. ಈ ಯಶಸ್ಸಿನ ನಡುವೆಯೂ ಕತೆ, ಗಾಯನ, ಚಟುವಟಿಕೆ ನಿಲ್ಲಲಿಲ್ಲ. ಹಲವರನ್ನು ಸಂಘಟಿಸಿ ನಾಟಕ ಸಂಸ್ಥೆ ಸ್ಥಾಪಿಸಿದ. ಸಂಸ್ಥೆಯ ನಾಟಕಗಳು ಜನಪ್ರಿಯವಾದವು. ಆಗಿನ ಕಾಲದ ಉತ್ಸಾಹಿ ಯುವಕರಂತೆ ವಿಠಲಾಚಾರ್ಯ ಅವರೂ ಮಹಾತ್ಮಾ ಗಾಂಧಿಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯರಾದರು. ಹರತಾಳದಲ್ಲಿ ಭಾಗವಹಿಸಿದರು. ಒಮ್ಮೆ ಬಂಧಿತರಾಗಿ ಜೈಲು ಸೇರಿದರು.

ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ ಹೊಟೇಲ್ ಉದ್ಯಮ ಬೇಸರ ತರಿಸಿ ಅದನ್ನು ತಮ್ಮನಿಗೆ ವಹಿಸಿದರು. ಈಗ ಅವರು ಮತ್ತೋರ್ವ ಯುವಕ, ಸ್ವಾತಂತ್ರ್ಯ ಹೋರಾಟಗಾರ ಡಿ. ಶಂಕರಸಿಂಗ್ ಅವರ ಜೊತೆ ಸೇರಿ ಎರಡು ಸಂಚಾರಿ ಚಿತ್ರಮಂದಿರಗಳನ್ನು ಕೊಂಡರು. ಮಹಾತ್ಮಾ ಮತ್ತು ಜವಾಹರ್ ಟೂರಿಂಗ್ ಟಾಕೀಸ್‌ನ ವಹಿವಾಟಿನಲ್ಲಿ ಅವರಿಗೆ ಲಾಭ ತಂದುಕೊಟ್ಟಿತು. ಜೊತೆಗೆ, ಚಿತ್ರಮಂದಿರಗಳಲ್ಲಿ ಎಲ್ಲ ಬಗೆಯ ಚಿತ್ರಗಳನ್ನು ನೋಡುವ ಅಭ್ಯಾಸ ಆಚಾರ್ಯರಲ್ಲಿ ಬೆಳೆಯಿತು. ಹಾಗೆ ನೋಡುತ್ತಿರುವ ಪ್ರೇಕ್ಷಕರನ್ನು ರಂಜಿಸುವ ಚಿತ್ರಗಳ ಗುಣ ಸ್ವರೂಪ ಮತ್ತು ಪ್ರೇಕ್ಷಕರನ್ನು ಸೆಳೆಯುವ ಚಿತ್ರಗಳ ಅಂಶಗಳ ಬಗ್ಗೆ ಪ್ರಾಥಮಿಕ ಪರಿಚಯವೂ ಆಯಿತು.

1943ರಲ್ಲಿ ಮಾರಾಟಕ್ಕೆ ಬಂದ ಬೆಂಗಳೂರಿನ ಪ್ರಭಾತ್ ಚಿತ್ರಮಂದಿರವನ್ನು ಕೊಳ್ಳಲು ಶಂಕರಸಿಂಗ್ ಮತ್ತು ವಿಠಲಾಚಾರ್ಯ ಅವರು ಅರಸೀಕೆರೆಯಿಂದ ರೈಲಿನಲ್ಲಿ ಹೊರಟಾಗ, ಅಲ್ಲಿ ಭೇಟಿಯಾದ ನಿರ್ದೇಶಕ ಸಿ.ವಿ. ರಾಜು ಅವರ ಪ್ರೇರಣೆಯಿಂದ ಚಿತ್ರಮಂದಿರ ಕೊಳ್ಳುವ ನಿರ್ಧಾರ ಕೈಬಿಟ್ಟು ಚಿತ್ರ ನಿರ್ಮಾಣಕ್ಕೆ ಇಳಿಯುತ್ತಾರೆ. ಮಹಾತ್ಮಾ ಪಿಕ್ಚರ್ಸ್ ಲಾಂಛನದಡಿ ಅವರು ತಯಾರಿಸಿದ ಕೃಷ್ಣಲೀಲಾ (1947) ಅಪಾರ ನಷ್ಟ ತಂದೊಡ್ಡಿತು. ಆದರೆ ಚಿತ್ರ ನಿರ್ಮಾಣವನ್ನೇ ವೃತ್ತಿಯಾಗಿ ಸ್ವೀಕರಿಸಿದ ಸಿಂಗ್-ಆಚಾರ್ಯ ಜೋಡಿ ಮೈಸೂರಲ್ಲೇ ನೆಲೆಯಾಯಿತು. ನವಜ್ಯೋತಿ ಸ್ಟುಡಿಯೋ ಖಾಯಂ ಚಿತ್ರ ನಿರ್ಮಾಣ ಕೇಂದ್ರವಾಯಿತು. ಅವರು ತಯಾರಿಸಿದ ಎರಡನೆಯ ಚಿತ್ರ ಭಕ್ತ ರಾಮದಾಸ (1948) ನೆಲ ಕಚ್ಚಿತು.

 ಎರಡು ಚಿತ್ರಗಳ ಸೋಲಿನಿಂದ ಎದೆಗುಂದದೆ ವಿಠಲಾಚಾರ್ಯ ಅವರ ಸಲಹೆಯಂತೆ ತಯಾರಿಸಿದ ಜಾನಪದ ಧಾಟಿಯ ‘ನಾಗಕನ್ನಿಕಾ’ ಪ್ರೇಕ್ಷಕರ ಮನಸೂರೆಗೊಂಡಿತು. ಹೊಟೇಲ್ ಉದ್ಯಮದಿಂದ ಜನರ ರುಚಿ ಮತ್ತು ಚಿತ್ರನಿರ್ಮಾಣದಿಂದ ಅಭಿರುಚಿಯ ಪರಿಚಯ ಪಡೆದ ವಿಠಲಾಚಾರ್ಯ ಅವರಿಗೆ ಪ್ರೇಕ್ಷಕರ ನಾಡಿಬಡಿತದ ಜೊತೆಗೆ ಎದೆಬಡಿತವನ್ನೂ ಆಲಿಸಬಲ್ಲ ಕುಶಲತೆ ದಕ್ಕಿತು. ನಾಗಕನ್ನಿಕಾ ಚಿತ್ರದ ನಂತರ ವಿಠಲಾಚಾರ್ಯ ಅವರು ಜಾನಪದ ಕಥೆಯೊಂದನ್ನು ಹೆಣೆದು, ಬರೆದ ಚಿತ್ರಕತೆಗೆ ಶಂಕರ್‌ಸಿಂಗ್ ನಿರ್ದೇಶನ ನೀಡಿದರು. ಹಾಗೆ ತಯಾರಾದ ‘ಜಗನ್ಮೋಹಿನಿ’ ಕನ್ನಡದಲ್ಲಿ ಗಳಿಕೆಯ ದಾಖಲೆ ಬರೆಯಿತು. ದಾವಣಗೆರೆ ಮತ್ತು ಉತ್ತರ ಕರ್ನಾಟಕದ ಕೇಂದ್ರವೊಂದರಲ್ಲಿ ಬೆಳ್ಳಿಹಬ್ಬ ಪ್ರದರ್ಶನ ಕಂಡಿತು. ಅಲ್ಲಿಂದ ಮುಂದೆ ಮಹಾತ್ಮಾ ಪಿಕ್ಚರ್ಸ್ ಲಾಂಛನದಲ್ಲಿ ಶಂಕರಸಿಂಗ್ ಮತ್ತು ವಿಠಲಾಚಾರ್ಯ ಅವರು ಸರದಿಯಲ್ಲಿ ಚಿತ್ರಗಳನ್ನು ನಿರ್ದೇಶಿಸಿದರು.


ಇತ್ತೀಚೆಗೆ ಅಭಿಜಾತ ನಟ ಎನ್‌ಟಿಆರ್ ಅವರ ಜೀವನ ಚರಿತ್ರೆಯನ್ನು ಬರೆದ ಕೆ. ಚಂದ್ರಹಾಸ ಮತ್ತು ಕೆ. ಲಕ್ಷ್ಮೀನಾರಾಯಣ ಅವರು ತಮ್ಮ ಕೃತಿ ‘ಎನ್‌ಟಿಆರ್ ಎ ಬಯಾಗ್ರಫಿ’ಯಲ್ಲಿ ವಿಠಲಾಚಾರ್ಯ ಅವರ ಬದುಕು-ಸಾಧನೆ, ಎನ್‌ಟಿಆರ್ ಅವರ ಜನಪ್ರಿಯತೆ ವೃದ್ಧಿಗೆ ನೀಡಿದ ಅವರ ಕಾಣಿಕೆ ಮತ್ತು ಅವರ ಚಿತ್ರಗಳ ವಿಶಿಷ್ಟತೆಯ ಮೇಲೆ ಬೆಳಕು ಚೆಲ್ಲಲು ‘‘ಬ್ರಹ್ಮ ಆಫ್ ಫೋಕ್‌ಲೋರ್ ಮೂವೀಸ್’’ ಎಂಬ ಶೀರ್ಷಿಕೆಯಲ್ಲಿ ಒಂದು ಅಧ್ಯಾಯವನ್ನೇ ಮೀಸಲಿಟ್ಟಿದ್ದಾರೆ. ಬಹುಶಃ ಅದು ವಿಠಲಾಚಾರ್ಯ ಅವರ ಸಾಧನೆಗೆ ಕನ್ನಡಿ ಹಿಡಿದು ಗೌರವ ಸಲ್ಲಿಸಿದ ಅಧ್ಯಾಯ.

ವಿಠಲಾಚಾರ್ಯ ಅವರು ಮೊದಲಬಾರಿಗೆ ‘ಶ್ರೀನಿವಾಸ ಕಲ್ಯಾಣ’ (1952) ಚಿತ್ರ ನಿರ್ದೇಶಿಸಿದರು. 1963ರಲ್ಲಿ ಸೌಭಾಗ್ಯಲಕ್ಷ್ಮಿ ಸಾಮಾಜಿಕ ಚಿತ್ರ ನಿರ್ದೇಶಿಸಿ ಸಂಗೀತ ನಿರ್ದೇಶಕ ಜೋಡಿ ರಾಜನ್ ನಾಗೇಂದ್ರ ಅವರನ್ನು ಪರಿಚಯಿಸಿದರು. ಮಹಾತ್ಮಾ ಪಿಕ್ಚರ್ಸ್ ನಿರ್ಮಿಸಿದ ‘ಚಂಚಲಕುಮಾರಿ’ (1953) ಚಿತ್ರದ ಸಮಯದಲ್ಲಿ ಪಾಲುದಾರಿಕೆ ಬೇರ್ಪಟ್ಟಿತು. ವಿಠಲಾಚಾರ್ಯ ಅವರು ವಿಠಲ್ ಪ್ರೊಡಕ್ಷನ್ಸ್ ಸಂಸ್ಥೆ ಹುಟ್ಟು ಹಾಕಿ ಕನ್ಯಾದಾನ ಮತ್ತು ರಾಜಲಕ್ಷ್ಮಿ(1954), ಮುತ್ತೈದೆ ಭಾಗ್ಯ (1956), ಮನೆಗೆ ಬಂದ ಮಹಾಲಕ್ಷ್ಮಿ (1959) ನಿರ್ದೇಶಿಸಿದರು. ಇವರ ಒಂದು ಚಿತ್ರದಲ್ಲಿ ಪತ್ರಕರ್ತರ ಭಾವನೆಗಳಿಗೆ ಅಪಮಾನಿಸುವ ದೃಶ್ಯವಿದೆಯೆಂದು ನೊಂದ ಕೆಲವರು ನಿರ್ದೇಶಕನ ವಿರುದ್ಧ ಪ್ರಕರಣ ದಾಖಲಿಸಿದರು. ನ್ಯಾಯಾಲಯದಲ್ಲಿ ಪ್ರಕರಣ ಗೆದ್ದ ನಂತರ ಕನ್ನಡ ಚಿತ್ರರಂಗದ ಸಹವಾಸ ಬೇಡವೆನಿಸಿತ್ತು. ಕನ್ಯಾದಾನ ಚಿತ್ರದ ಸಮಯದಲ್ಲಿಯೇ ಮೈಸೂರು ತೊರೆದು ಮದರಾಸು ಸೇರಿದ್ದ ವಿಠಲಾಚಾರ್ಯ ಅವರು ತಮ್ಮ ಅಭಿರುಚಿಗೆ ತೆಲುಗು ಚಿತ್ರರಂಗವೇ ಸೂಕ್ತ ಎಂದು ಭಾವಿಸಿದ್ದರು. ಜ್ಯೋತಿಷ್ಯ ಶಾಸ್ತ್ರದಲ್ಲೂ ನಂಬಿಕೆಯಿದ್ದ ಅವರಿಗೆ ತಾವು ತಮ್ಮ ಜಾತಕದ ಪ್ರಕಾರ ಅನ್ಯಭಾಷೆಯ ಚಿತ್ರಗಳಲ್ಲಿ ಯಶಸ್ಸು ಕಾಣುವ ಬಗ್ಗೆ ನಂಬಿಕೆ ಇರಿಸಿಕೊಂಡಿದ್ದರು. ಆದ್ದರಿಂದ ತಮ್ಮ ಅದೃಷ್ಟ ಪರೀಕ್ಷೆಗೆ ತೆಲುಗು ಚಿತ್ರರಂಗವನ್ನು ಆಶ್ರಯಿಸಿದರು.

ವದ್ದಾಂಟಿ ಪೆಳ್ಳಿ (1956), ಅಣ್ಣಾ ಚೆಲ್ಲಲು (1958), ಪೆಳ್ಳಿ ಮೀದ ಪೆಳ್ಳಿ (1958), ಕನಕದುರ್ಗ ಪೂಜಾ ಮಹಿಮಾ (1960), ವರಲಕ್ಷ್ಮಿ ವ್ರತಾ (1961), ಮದನ ಕಾಮರಾಜು ಕಥಾ (1962)- ಹೀಗೆ ಪುರಾಣ, ಜಾನಪದ ಕತೆಗಳನ್ನೇ ಹೆಚ್ಚಾಗಿ ಆಧರಿಸಿದ ಚಿತ್ರಗಳನ್ನು ತೆಲುಗಿನಲ್ಲಿ ನಿರ್ಮಿಸಿದರೂ ಪ್ರವರ್ಧಮಾನಕ್ಕೆ ಬರಲಿಲ್ಲ. ಆದರೆ ನಷ್ಟವನ್ನೂ ಅನುಭವಿಸಲಿಲ್ಲ. ಅವರ ಅದೃಷ್ಟ ಮತ್ತೊಂದು ತಾರೆಯ ಸಮಾಗಮಕ್ಕೆ ಕಾಯುತ್ತಿತ್ತೆಂದು ಕಾಣುತ್ತದೆ.

ತೆಲುಗು ಚಿತ್ರರಂಗದ ಅಭಿಜಾತ ನಟ ಎನ್.ಟಿ. ರಾಮರಾವ್ ಅವರ ಜೊತೆ ಬೆಸೆದ ವಿಠಲಾಚಾರ್ಯ ಅವರ ವೃತ್ತಿ ಬದುಕಿನ ಪ್ರಸ್ತಾಪವಿಲ್ಲದೆ ಅವರ ಜೀವನ ಚಿತ್ರ ಪೂರ್ತಿಯಾಗುವುದಿಲ್ಲ. 1963 ರಿಂದ 1973ರ ಹತ್ತು ವರ್ಷಗಳ ಅವಧಿಯಲ್ಲಿ ಅವರು ಎನ್‌ಟಿಆರ್ ನಾಯಕರಾಗಿದ್ದ ಹದಿಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಅದು ಎನ್‌ಟಿಆರ್ ಪೌರಾಣಿಕ ಮತ್ತು ಹಲವು ಸಾಮಾಜಿಕ ಚಿತ್ರಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದ ಕಾಲ. ಆ ಜನಪ್ರಿಯತೆಗೆ ವೇಗವರ್ಧಕವಾಗಿ ಬಂದವರು ವಿಠಲಾಚಾರ್ಯ. ಎನ್‌ಟಿಆರ್ ಅವರ ತೆರೆಯ ಮೇಲಿನ ಬಿಂಬವನ್ನು ತಮ್ಮ ಜಾನಪದ ಚಿತ್ರಗಳ ನಾಯಕನ ಪಾತ್ರದ ಮೂಲಕ ಸಾಮಾಜಿಕ ಹೋರಾಟಗಾರ, ಬಡವರ ರಕ್ಷಕ, ಪ್ರಭುತ್ವದ ದಮನವನ್ನು ವಿರೋಧಿಸುವ ಕೆಳಸ್ತರದಿಂದ ಬಂದ ಪ್ರಬಲ ಬಂಡಾಯಗಾರನ ಬಿಂಬವಾಗಿ ರೂಪಿಸಿದವು. ಈ ‘ಆಪದ್ಬಾಂಧವ’ ಇಮೇಜು ಮುಂದೆ ಎನ್‌ಟಿಆರ್ ಅವರು ರಾಜಕೀಯ ರಂಗವನ್ನು ಪ್ರವೇಶಿಸಿದಾಗ ನೆರವಿಗೆ ಬಂದದ್ದನ್ನು ಮರೆಯುವಂತಿಲ್ಲ.

 ಆಚಾರ್ಯ ಅವರು ನಿರ್ದೇಶಿಸಿದ ಹದಿಮೂರು ಚಿತ್ರಗಳಲ್ಲಿ ಕೊನೆಯ ಸಾಮಾಜಿಕ ಚಿತ್ರ ಪಲ್ಲೆಟೂಂ ಚಿನ್ನೋಡು (1973) ಚಿತ್ರವನ್ನು ಹೊರತುಪಡಿಸಿದರೆ ಉಳಿದವೆಲ್ಲ ಜಾನಪದ ಧಾಟಿಯ ಚಿತ್ರಗಳು. ವಿಶೇಷವೇನೆಂದರೆ ಎನ್‌ಟಿಆರ್ ನಾಯಕರಾಗಿದ್ದರೂ, ಅಲ್ಪ ಬಜೆಟ್‌ನಲ್ಲಿ ತಯಾರಾದ ಆದರೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಚಿತ್ರಗಳು. ಎನ್‌ಟಿಆರ್ ಅವರ ಜೊತೆ ನಿರ್ಮಿಸಿ ನಿರ್ದೇಶಿಸಿದ ಮೊದಲ ಚಿತ್ರ ಬಂದಿಪೋಟು(1963). ನಂತರ ಅಗ್ಗಿ ಪಿಡುಗು (1964), ಮಂಗಮ್ಮ ಶಪಥಂ (1965), ಅಗ್ಗಿ ಬರಾಟ ಮತ್ತು ಪಿಡುಗು ರಾಮಡು (1966), ಗೋಪಾಲುಡು ಭೂಪಾಲುಡು ಮತ್ತು ಚಿಕ್ಕಡು ದೊರಕಡು (1967), ಕದಲಡು ವದಲಡು ಮತ್ತು ಗಂಡಿಕೋಟ ರಹಸ್ಯಂ (1968), ಅಲಿಬಾಬ 40 ದೊಂಗಲು, ವಿಜಯಂ ಮನದೆ, ಲಕ್ಷ್ಮಿ ಕಟಾಕ್ಷಲು, ವಿಜಯಂ ಮನದೆ (1970) ಹಾಗೂ ರಾಜಕೋಟ ರಹಸ್ಯಂ (1971) ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸಿದವು. ಅದಕ್ಕಿಂತಲೂ ಮುಖ್ಯವಾಗಿ ಈ ಪಟ್ಟಿಯ ಎಲ್ಲ ಚಿತ್ರಗಳಲ್ಲಿಯೂ, ಬಡವರ ಬಂಧುವಾಗಿ ಅವರ ನೆರವಿಗೆ ನಿಂತು, ಸಮಾಜಕ್ಕೆ ಕಂಟಕರಾದ ದುಷ್ಟರನ್ನು ಸದೆಬಡಿದು, ಅರಸೊತ್ತಿಗೆಯ ಅಹಂಕಾರದಿಂದ ಮೊೆವ ಹೆಣ್ಣು-ಗಂಡುಗಳನ್ನು ಮಣಿಸಿ, ದುಷ್ಟರಿಗೆ ಪಾಠ ಕಲಿಸಿ ಲೋಕ ಕಲ್ಯಾಣಕ್ಕೆ ಅರ್ಪಿಸಿಕೊಳ್ಳುವ ನಾಯಕನ ಪಾತ್ರಗಳು, ವರ್ತನೆಗಳು ಪ್ರೇಕ್ಷಕರ ಭಾವಭಿತ್ತಿಯಲ್ಲಿ ದಟ್ಟವಾದ ವರ್ಣಗಳಿಂದ ಬಿಂಬವಾಗಿ ಶಾಶ್ವತ ಸ್ಥಾನ ಪಡೆದವು. ನಾಯಕನ ಸಾಹಸಗಳಲ್ಲಿ ತಮ್ಮನ್ನು ಗುರುತಿಸಿಕೊಂಡ ಪ್ರೇಕ್ಷಕರು ಎನ್‌ಟಿಆರ್ ಅವರ ಕತ್ತಿವರಸೆ, ಕುಸ್ತಿಯ ದೃಶ್ಯಗಳು, ನಾಯಕಿಯ ಜೊತೆಯಲ್ಲಿನ ಪ್ರಣಯ ಸನ್ನಿವೇಶಗಳು, ಕುಟುಂಬದ ಸದಸ್ಯರಾಗಿ ವಹಿಸುವ ಜವಾಬ್ದಾರಿ ವರ್ತನೆಗಳು ಪ್ರೇಕ್ಷಕರು ಆರಾಧಿಸುವಷ್ಟು ಪ್ರಭಾವಶಾಲಿಯಾಗಿದ್ದವು. ವಿಠಲಾಚಾರ್ಯ ಅವರ ಚಿತ್ರಗಳು ಬೇರೆ ಯಾವುದೇ ಪ್ರಚಾರ ಸಾಧನಗಳಿಗಿಂತಲೂ ಹೆಚ್ಚಾಗಿ ಎನ್‌ಟಿಆರ್ ಅವರನ್ನು ಜನರ ಬಳಿಗೆ ಕೊಂಡೊಯ್ದವು. ಎನ್‌ಟಿಆರ್ ಅವರಿಗೆ ಸೃಷ್ಟಿಸಿದ ವಿಠಲಾಚಾರ್ಯ ಅವರ ನಾಯಕನ ಇಮೇಜು ಜನರ ದೃಷ್ಟಿಯಲ್ಲಿ ಹೆಚ್ಚಿಗೆ ಬೆಳೆದು, ಆಗಲೇ ಹೇಳಿದಂತೆ ಎನ್‌ಟಿಆರ್ ಅವರ ರಾಜಕೀಯ ವೃತ್ತಿ ಬದುಕಿಗೆ ಬೆಂಬಲವಾಗಿ ಬಂತು. ಎನ್‌ಟಿಆರ್ ಅವರ ಈ ಬಿಂಬ ಎಷ್ಟು ಗಟ್ಟಿಯಾಗಿತ್ತೆಂದರೆ, ರಾಜರು-ಪ್ರಜೆಗಳು, ಕತ್ತಿವರಸೆ, ಕುಸ್ತಿ, ಮಂತ್ರ ತಂತ್ರಗಾರಿಕೆಯಿಂದ ಮುಕ್ತವಾಗಿದ್ದ ಎನ್‌ಟಿಆರ್ ಅವರ ಜೊತೆಗಿನ ಕೊನೆಯ ಸಾಮಾಜಿಕ ‘ಪಲ್ಲೆಟೂರಿ ಚಿನ್ನೋಡು’ ಚಿತ್ರಕ್ಕೆ ಪ್ರೇಕ್ಷಕರು ಬೆನ್ನು ತಿರುಗಿಸಿದರು. ಚಿತ್ರ ವಿಫಲವಾಯಿತು.

ತೆಲುಗು ಚಿತ್ರರಂಗದ ಅಭಿಜಾತ ನಟ ಎನ್.ಟಿ. ರಾಮರಾವ್ ಅವರ ಜೊತೆ ಬೆಸೆದ ವಿಠಲಾಚಾರ್ಯ ಅವರ ವೃತ್ತಿ ಬದುಕಿನ ಪ್ರಸ್ತಾಪವಿಲ್ಲದೆ ಅವರ ಜೀವನ ಚಿತ್ರ ಪೂರ್ತಿಯಾಗುವುದಿಲ್ಲ. 1963 ರಿಂದ 1973ರ ಹತ್ತು ವರ್ಷಗಳ ಅವಧಿಯಲ್ಲಿ ಅವರು ಎನ್‌ಟಿಆರ್ ನಾಯಕರಾಗಿದ್ದ ಹದಿಮೂರು ಚಿತ್ರಗಳನ್ನು ನಿರ್ದೇಶಿಸಿದ್ದರು. ಅದು ಎನ್‌ಟಿಆರ್ ಪೌರಾಣಿಕ ಮತ್ತು ಹಲವು ಸಾಮಾಜಿಕ ಚಿತ್ರಗಳ ಮೂಲಕ ಜನಪ್ರಿಯತೆಯ ಉತ್ತುಂಗಕ್ಕೇರುತ್ತಿದ್ದ ಕಾಲ. ಆ ಜನಪ್ರಿಯತೆಗೆ ವೇಗವರ್ಧಕವಾಗಿ ಬಂದವರು ವಿಠಲಾಚಾರ್ಯ. ಎನ್‌ಟಿಆರ್ ಅವರ ತೆರೆಯ ಮೇಲಿನ ಬಿಂಬವನ್ನು ತಮ್ಮ ಜಾನಪದ ಚಿತ್ರಗಳ ನಾಯಕನ ಪಾತ್ರದ ಮೂಲಕ ಸಾಮಾಜಿಕ ಹೋರಾಟಗಾರ, ಬಡವರ ರಕ್ಷಕ, ಪ್ರಭುತ್ವದ ದಮನವನ್ನು ವಿರೋಧಿಸುವ ಕೆಳಸ್ತರದಿಂದ ಬಂದ ಪ್ರಬಲ ಬಂಡಾಯಗಾರನ ಬಿಂಬವಾಗಿ ರೂಪಿಸಿದವು. ಈ ‘ಆಪದ್ಬಾಂಧವ’ ಇಮೇಜು ಮುಂದೆ ಎನ್‌ಟಿಆರ್ ಅವರು ರಾಜಕೀಯ ರಂಗವನ್ನು ಪ್ರವೇಶಿಸಿದಾಗ ನೆರವಿಗೆ ಬಂದದ್ದನ್ನು ಮರೆಯುವಂತಿಲ್ಲ.

  ತಮ್ಮ ಪಾಲುದಾರರ ಜೊತೆ ಸಂಬಂಧ ಕಡಿದುಕೊಂಡು, ಸ್ವತಂತ್ರವಾಗಿ ಕನ್ನಡ ಚಿತ್ರ ನಿರ್ಮಿಸಿ ಅನುಭವ ಪಡೆದು, ಮದರಾಸಿಗೆ ಬಂದ ನಂತರವೂ ವಿಠಲಾಚಾರ್ಯ ಅವರು ಮದರಾಸಿನಲ್ಲಿರುವಾಗ ಕೊನೆಯ ಬಾರಿಗೆ ಕನ್ನಡದಲ್ಲಿ ವೀರಕೇಸರಿ ಮತ್ತು ತೆಲುಗಿನಲ್ಲಿ ಬಂದಿಪೋಟು ಚಿತ್ರವನ್ನು ನಿರ್ದೇಶಿಸಿದರು. ಈ ದ್ವಿಭಾಷಾ ಚಿತ್ರ ಜಾನಪದ ಚಿತ್ರಗಳಿಗೆ ಒಂದು ಮಾದರಿಯನ್ನು ಹಾಕಿಕೊಟ್ಟಿತು. ಅಲೆಕ್ಸಾಂಡರ್ ಡೂಮಾನ ಜೋರೋ ಮತ್ತು ಶೇಕ್ಸ್‌ಪಿಯರ್‌ನ ದಿ ಟೇಮಿಂಗ್ ಆಫ್ ದಿ ಶ್ರೂ ಕೃತಿಗಳ ಪಾತ್ರಗಳನ್ನು ಬೆಸೆದು ತಯಾರಿಸಿದ ಚಿತ್ರಕತೆ. ಒಂದು ಕಡೆ ಮುಸುಕು ಧರಿಸಿ, ತನ್ನ ಮುಖ ಚಹರೆಯನ್ನು ಮರೆಮಾಚಿ ಪ್ರಭುತ್ವಕ್ಕೆ ಚಳ್ಳೆಹಣ್ಣು ತಿನ್ನಿಸುವ ಜೋರೋ; ಮತ್ತೊಂದೆಡೆ ಗಯ್ಯೊಳಿ ಹೆಣ್ಣನ್ನು ಮಣಿಸಿ ತನ್ನ ದಾರಿಗೆ ತರುವ ಟೇಮಿಂಗ್ ಆಫ್ ದಿ ಶ್ರೂ ನಾಟಕದ ಪೆಟ್ರಷಿಯೋ. ಈ ಸಂಕರ ಪಾತ್ರವು ಪ್ರೇಕ್ಷಕರನ್ನು ಇನ್ನಿಲ್ಲದಂತೆ ಸೆಳೆದದ್ದು ಮಾತ್ರವಲ್ಲ, ಸಾಹಸ ಚಿತ್ರಗಳಿಗೆ ಒಂದು ಮಾದರಿಯನ್ನು ಒದಗಿಸಿತು. ಮುಂದೆ ಈ ಚಿತ್ರದ ಎಳೆಯನ್ನೇ ಅನುಸರಿಸಿ ಸಾಲುಸಾಲು ಚಿತ್ರಗಳು ಬಂದವು. ಮಹಾರಥಿಯವರ ಚಿತ್ರಕಥಾ ರಚನೆಯ ಚಿತ್ರದಲ್ಲಿ ಕನ್ನಡದಲ್ಲಿ ರಾಜ್ ಮತ್ತು ತೆಲುಗಿನಲ್ಲಿ ಎನ್‌ಟಿಆರ್ ನಾಯಕನ ಪಾತ್ರಕ್ಕೆ ಜೀವ ತುಂಬಿದರು. ಜೊತೆಗೆ ಚಿತ್ತಾಕರ್ಷಕ ಹಾಡುಗಳು ಮತ್ತು ಮೈನವಿರೇಳಿಸುವ ಸಾಹಸಗಳು ಹಾಗೂ ಭಾಗಶಃ ವರ್ಣದಲ್ಲಿ ಸರ್ಕಸ್ ದೃಶ್ಯಗಳು ಪ್ರೇಕ್ಷಕರನ್ನು ಹುಚ್ಚೆಬ್ಬಿಸಿದ್ದವು. ಈಗಲೂ ‘ಮೆಲ್ಲುಸಿರೇ ಸವಿಗಾನ’ ಒಂದು ನವಿರಾದ ಪ್ರಣಯ ದೃಶ್ಯಕ್ಕೆ ‘ಸ್ವಾಭಿಮಾನದ ನಲ್ಲೆ’ -ಹಾಡು ಒಂದು ಹೆಣ್ಣನ್ನು ಕೆಣಕುವ, ಛೇಡಿಸುವ ಸನ್ನಿವೇಶಕ್ಕೆ ಮಾದರಿಯೆಂಬಷ್ಟು ಖ್ಯಾತಿ ಪಡೆದಿದೆ.

ಕನ್ನಡ ಚಿತ್ರರಂಗದ ಸಂಬಂಧದಿಂದ ದೂರವಾದ ಬಿ. ವಿಠಲಾಚಾರ್ಯ ಅವರು ಎನ್‌ಟಿಆರ್ ಅವರ ಜೊತೆ ಕೈಜೋಡಿಸಿದರು. ಆಗ ತೆರೆಯ ಮೇಲೆ ಅರಳಿದ್ದು ವಿನೂತನ ಮಾಂತ್ರಿಕ ಜಗತ್ತು. ರಸಪೂರ್ಣ ಮನರಂಜನೆಯ ಲೋಕ. ಎನ�

Writer - ಡಾ. ಕೆ. ಪುಟ್ಟಸ್ವಾಮಿ

contributor

Editor - ಡಾ. ಕೆ. ಪುಟ್ಟಸ್ವಾಮಿ

contributor

Similar News