ಉಯಿಘರ್ ಬಲವಂತದ ದುಡಿಮೆಯ ಉತ್ಪನ್ನಗಳಿಗೆ ಬ್ರಿಟನ್ ನಿಷೇಧ

Update: 2021-01-11 17:03 GMT

ಲಂಡನ್, ಜ. 11: ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿ ಬಲವಂತದ ದುಡಿಮೆಯ ಮೂಲಕ ಉತ್ಪಾದಿಸಲಾಗಿದೆ ಎನ್ನಲಾದ ವಸ್ತುಗಳ ಆಮದನ್ನು ನಿಷೇಧಿಸಲು ಬ್ರಿಟನ್ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.

ಈ ಕ್ರಮವು ಬ್ರಿಟನ್ ಮತ್ತು ಚೀನಾಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹದಗೆಡಿಸುವ ಸಾಧ್ಯತೆಗಳಿವೆ.

ದಮನಕ್ಕೆ ಬಳಸಬಹುದಾದ ವಸ್ತುಗಳು ಅಥವಾ ತಂತ್ರಜ್ಞಾನವನ್ನು ರಫ್ತು ಮಾಡುವುದನ್ನು ನಿಷೇಧಿಸಲು ಅವಕಾಶ ನೀಡುವ ಪ್ರಸ್ತಾವಗಳನ್ನೂ ವಿದೇಶ ಕಾರ್ಯದರ್ಶಿ ಡೋಮಿನಿಕ್ ರಾಬ್ ಸಂಸದರಿಗೆ ಕಳುಹಿಸಿಕೊಟ್ಟಿದ್ದಾರೆ ಎಂದು ‘ದ ಸನ್’ ಮತ್ತು ‘ಗಾರ್ಡಿಯನ್’ ಪತ್ರಿಕೆಗಳು ವರದಿ ಮಾಡಿವೆ.

ಕ್ಸಿನ್‌ಜಿಯಾಂಗ್ ಪ್ರಾಂತದಲ್ಲಿನ ಉಯಿಘರ್ ಮುಸ್ಲಿಮರನ್ನು ಚೀನಾ ನಡೆಸಿಕೊಳ್ಳುತ್ತಿರುವ ರೀತಿಯನ್ನು ಬ್ರಿಟನ್ ಟೀಕಿಸಿದೆ. ಹತ್ತಿ ಉತ್ಪಾದನೆಯಲ್ಲಿ ಉಯಿಘರ್ ಮುಸ್ಲಿಮರನ್ನು ಬಲವಂತವಾಗಿ ದುಡಿಸಿಕೊಳ್ಳಲಾಗುತ್ತಿದೆ ಎಂದಿರುವ ಬ್ರಿಟನ್ ‘‘ಇದು ಆತಂತಕಕಾರಿಯಾಗಿದೆ’’ ಎಂದಿದೆ.

ಈ ಆರೋಪವನ್ನು ಚೀನಾ ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News