ದಿಲ್ಲಿ, ಹರ್ಯಾಣಕ್ಕೆ ಗೆಲುವು

Update: 2021-01-14 05:54 GMT

 ಹೊಸದಿಲ್ಲಿ, ಜ.13: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ದೇಶಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಬುಧವಾರ ದಿಲ್ಲ ತಂಡ ಸತತ ಎರಡನೇ ಜಯ ಗಳಿಸಿದೆ. ಇದೇ ವೇಳೆ ಪುದುಚೇರಿ ತಂಡವನ್ನು ಹರ್ಯಾಣ 6 ವಿಕೆಟ್ ಅಂತರದಲ್ಲಿ ಮಣಿಸಿದೆ

 ಮೂರು ದಿನಗಳಲ್ಲಿ ಎರಡನೇ ಸುಲಭ ಜಯದೊಂದಿಗೆ ಶಿಖರ್ ಧವನ್ ನೇತೃತ್ವದ ದಿಲ್ಲಿ ತಂಡ ಈ ೞಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ. ಉತ್ತಮ ನಿವ್ವಳ ರನ್ ರೇಟ್‌ನ್ನು ನ್ನು ಹೊಂದಿದೆ. ಅನುಭವಿ ಇಶಾಂತ್ ಶರ್ಮಾ (17 ಕ್ಕೆ 2), ಸಿಮಾರ್ಜೀತ್ ಸಿಂಗ್ (21 ಕ್ಕೆ2) ಮತ್ತು 4ಪ್ರದೀಪ್ ಸಾಂಗ್ವಾನ್ (33 ಕ್ಕೆ3) ಆಂಧ್ರ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದರು. ಆಂಧ್ರ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 124 ರನ್ ಗಳಿಸಿತು. ಅಶ್ವಿನ್ ಹೆಬ್ಬಾರ್ (32) ಆಂಧ್ರ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

  125 ರನ್‌ಗಳ ಗುರಿ ದಿಲ್ಲಿಗೆ ದೊಡ್ಡ ಸವಾಲಾಗಿರಲಿಲ್ಲ. ಅನುಜ್ ರಾವತ್ ಮತ್ತು ಹಿಮ್ಮತ್ ಸಿಂಗ್ ಔಟಾಗದೆ 32 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು. ಇನ್ನೊಂದು ಪಂದ್ಯದಲ್ಲಿ ಪಾಂಡಿಚೇ ರಿ ತಂಡವನ್ನು ಹರ್ಯಾಣ 6 ವಿಕೆಟ್‌ಗಳ ಅಂತರದಿಂದ ಮಣಿಸಿತು. ಪಾಂಡಿಚೇರಿ ಶೆಲ್ಡಾನ್ ಜಾಕ್ಸನ್ 82 ರನ್ ಮತ್ತು ಪಾರಸ್ ಡೊಗ್ರಾ ಗಳಿಸಿದ 32 ರನ್‌ಗಳ ನೆರವಿನಲ್ಲಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಹರ್ಯಾಣ ತಂಡ 4 ವಿಕೆಟ್ ನಷ್ಟದಲ್ಲಿ 149 ರನ್ ಗಳಿಸಿದೆ. ಹಿಮಾಂಶು ರಾಣಾ 58 ರನ್ ಮತ್ತು ಶಿವಮ್ ಚೌಹಾನ್ 45 ರನ್ ಗಳಿಸಿದರು.

   ಸಂಕ್ಷಿಪ್ತ ಸ್ಕೋರ್ ಆಂಧ್ರಪ್ರದೇಶ 124/9 (ಅಶ್ವಿನ್ ಹೆಬ್ಬರ್ 32; ಪ್ರದೀಪ್ ಸಾಂಗ್ವಾನ್33ಕ್ಕೆ 3; ಇಶಾಂತ್ ಶರ್ಮಾ 17ಕ್ಕೆ 2, ಸಿಮಾರ್ಜೀತ್ ಸಿಂಗ್ 21ಕ್ಕೆ 2), ದಿಲ್ಲಿ 128/4 (ಅನುಜ್ ರಾವತ್ 33; ಹಿಮ್ಮತ್ ಸಿಂಗ್ ಔಟಾಗದೆ 32 ; ಎಂ ಹರಿಶಂಕರ್ ರೆಡ್ಡಿ 40ಕ್ಕೆ 2).

 ಪಾಂಡಿಚೇರಿ 148/4 (ಶೆಡ್ಲಾನ್ ಜಾಕ್ಸನ್ 82, ಪ್ಯಾರಾಸ್ ಡೋಗ್ರಾ 32; ಅರುಣ್ ಚಪ್ರಾನ 19ಕ್ಕೆ 2) ಹರ್ಯಾಣ 149/4 (ಹಿಮಾಂಶು ರಾಣಾ 58, ಶಿವಂ ಚೌಹಾನ್ 45; ಪಂಕಜ್ ಸಿಂಗ್ 31ಕ್ಕೆ 2).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News