ಭಾರತ ವಿರುದ್ಧ ನಾಲ್ಕನೇ ಟೆಸ್ಟ್ : ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸೀಸ್

Update: 2021-01-15 03:48 GMT

ಬ್ರಿಸ್ಬೇನ್ : ಪ್ರವಾಸಿ ಭಾರತ ತಂಡ ವಿರುದ್ಧದ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ, ಸ್ಟೀವನ್ ಸ್ಮಿತ್ ಹಾಗೂ ಲಂಬುಶೇನ್ ಅವರ ಸಮಯೋಚಿತ ಬ್ಯಾಟಿಂಗ್‌ನಿಂದಾಗಿ ಆಸ್ಟ್ರೇಲಿಯಾ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದೆ.

ಇತ್ತೀಚಿನ ವರದಿಗಳು ಬಂದಾಗ ಆಸ್ಟ್ರೇಲಿಯಾ 3 ವಿಕೆಟ್ ನಷ್ಟಕ್ಕೆ 103 ರನ್ ಗಳಿಸಿತ್ತು. ಸ್ಮಿತ್ (36) ಮತ್ತು ಲಂಬುಶೆನ್ (45) ರನ್ ಗಳಿಸಿದ್ದಾರೆ.

ಭಾರತದ ಆರಂಭಿಕ ಬೌಲರ್‌ಗಳಾದ ಮುಹಮ್ಮದ್ ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್, ಆಸ್ಟ್ರೇಲಿಯಾದ ಮೊತ್ತ 17 ರನ್‌ಗಳಾಗುವಷ್ಟರಲ್ಲಿ ಆರಂಭಿಕ ಜೋಡಿಯಾದ ಡೇವಿಡ್ ವಾರ್ನರ್ ಹಾಗೂ ಮರ್ಕ್ಯೂಸ್ ಹ್ಯಾರಿಸ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. 17 ರನ್‌ಗೆ 2 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟದಲ್ಲಿದ್ದಾಗ ಜತೆ ಸೇರಿದ ಲಂಬುಶೆನ್ ಹಾಗೂ ಸ್ಮಿತ್ ಮತ್ತಷ್ಟು ಕುಸಿತದಿಂದ ತಂಡವನ್ನು ಪಾರು ಮಾಡಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತು. ಮುಹಮ್ಮದ್ ಸಿರಾಜ್ ಆರಂಭದಲ್ಲೇ ಅತಿಥೇಯರಿಗೆ ಆಘಾತ ನೀಡಿ ಪ್ರಮುಖವಾಗಿದ್ದ ಡೇವಿಡ್ ವಾರ್ನರ್ ಅವರ ವಿಕೆಟ್ ಪಡೆದರು. ಮರು ಓವರ್‌ನಲ್ಲೇ ಶಾರ್ದೂಲ್ ಠಾಕೂರ್ ಅವರು ಹ್ಯಾರಿಸ್ ವಿಕೆಟ್ ಕಿತ್ತರು.

ಗಾಯದ ಸಮಸ್ಯೆಯಿಂದಾಗಿ ಜಸ್‌ಪ್ರೀತ್ ಬೂಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅಂತಿಮ ಹನ್ನೊಂದರ ಬಳಗದಲ್ಲಿ ಸೇರ್ಪಡೆ ಯಾಗಿಲ್ಲ. ಇವರ ಜಾಗಕ್ಕೆ ಟಿ. ನಟರಾಜನ್ ಹಾಗೂ ವಾಷಿಂಗ್ಟನ್ ಸುಂದರ್ ತಂಡ ಸೇರಿದ್ದಾರೆ. ಪ್ರವಾಸದಲ್ಲಿ ಕೆ.ಎಲ್.ರಾಹುಲ್, ಉಮೇಶ್ ಯಾದವ್, ಮುಹಮ್ಮದ್ ಶಮಿ, ಹನುಮ ವಿಹಾರಿ ಹಾಗೂ ರವೀಂದ್ರ ಜಡೇಜಾ ಅವರ ಬಳಿಕ ಗಾಯಾಳುಗಳ ಪಟ್ಟಿಗೆ ಬೂಮ್ರಾ ಹಾಗೂ ಅಶ್ವಿನ್ ಸೇರ್ಪಡೆಯಾಗಿದ್ದಾರೆ. ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ವಿಲ್ ಪುಕೋಸ್ಕಿ ಬದಲು ಮಾರ್ಕ್ಯೂಸ್ ಹ್ಯಾರಿಸ್ ಸ್ಥಾನ ಪಡೆದಿದ್ದಾರೆ.

ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ 1988ರಲ್ಲಿ ವೆಸ್ಟ್‌ಇಂಡೀಸ್ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿದ ಬಳಿಕ ಅತಿಥೇಯರು ಇದುವರೆಗೆ ಈ ಕ್ರೀಡಾಂಗಣದಲ್ಲಿ ಒಂದು ಟೆಸ್ಟ್ ಕೂಡಾ ಗೆದ್ದಿಲ್ಲ. ಅಂತೆಯೇ ಭಾರತ ಕೂಡಾ ಇಲ್ಲಿ ಗೆಲುವಿನ ರುಚಿ ಕಂಡಿಲ್ಲ. 2003ರಲ್ಲಿ ಟೆಸ್ಟ್ ಡ್ರಾ ಮಾಡಿಕೊಂಡದ್ದೇ ಭಾರತ ಅತ್ಯುತ್ತಮ ಸಾಧನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News