ಆ ಮಹಾ ಪ್ರವಾಹ

Update: 2021-01-15 06:05 GMT

ನೀರು ರಭಸವಾಗಿ ಏರುತ್ತಿತ್ತು. ಹಿತ್ತಿಲ ಗೋಡೆಯನ್ನು ಹಾದು ನೀರು ಒಳಗೆ ನುಗ್ಗ ತೊಡಗಿತು. ಆಲಿಯಬ್ಬನವರ ಮನೆಯವರು ಎದುರಿನ ಇಸ್ಮಾಯೀಲ್ ಬ್ಯಾರಿಯವರ ಮನೆಯಲ್ಲಿ ಆಶ್ರಯ ಪಡೆದರು. ಅಮ್ಮ ಮತ್ತು ಅನು ಅಲ್ಲಿಯೇ ಬಾಕಿಯಾದರು. ಹಿತ್ತಿಲಲ್ಲಿ ನೀರೇ ನೀರು. ಗದ್ದೆ, ಹಿತ್ತಿಲು ಎಲ್ಲಾ ಒಂದೇ ಆಗಿತ್ತು. ನಮ್ಮ ಬಾವಿ ನೀರೊಳಗೆ ಮುಳುಗಿ ಹೋಯಿತು. ಬಾವಿಯ ಕುರುಹೇ ಕಾಣುತ್ತಿರಲಿಲ್ಲ. ಒಳಗೆ ಹೋಗಿ ಮನೆಯ ಕಿಟಕಿಯಿಂದಾಗಿ ಮನೆಯ ಹಿಂಭಾಗಕ್ಕೆ ನೋಡಿದಾಗ ನೀರಲ್ಲದೆ ಬೇರೇನೂ ಕಾಣುತ್ತಿರಲಿಲ್ಲ. ಕಿಟಕಿಯ ಕೆಳಗೆ ಬಗ್ಗಿ ನೋಡುವಾಗ ನೀರು ಗೋಡೆಗೆ ಸ್ಪರ್ಶಿಸಿ ಮೇಲೆ ಮೇಲೆ ಏರುತ್ತಿತ್ತು. ಪಪ್ಪ, ಮಕ್ಕಳಿಗೆ ಆತಂಕ ಹೆಚ್ಚಾಗತೊಡಗಿತು.

ಮಂಗಳೂರು ತಾಲೂಕಿನ ಸೋಮೇಶ್ವರ ಉಚ್ಚಿಲದಲ್ಲಿ ಜನಿಸಿ, ರಮಣೀಯ ಪ್ರಕೃತಿಯ ಮಡಿಲಲ್ಲಿ ಬೆಳೆದ ನಿರುಪಮಾ ಅವರು, ವಿವಾಹಾನಂತರ ಮುಂಬೈ ಸೇರಿದರು. ಇಂಗ್ಲಿಷ್ ಎಂ.ಎ. ಡಿಗ್ರಿ ಪಡೆದು, ಊರಿಗೆ ಹಿಂದಿರುಗಿದ ಬಳಿಕ ಹಲವು ವರ್ಷಕಾಲ ಗಡಿನಾಡಲ್ಲೂ, ಸೋಮೇಶ್ವರ ಉಚ್ಚಿಲದಲ್ಲೂ ಶಿಕ್ಷಕಿಯಾಗಿದ್ದು, ವರ್ಷದ ಹಿಂದೆ ನಿವೃತ್ತರಾಗಿ ತಮ್ಮ ಒಲವಾದ ಬರವಣಿಗೆಯಲ್ಲಿ ತೊಡಗಿ ಕೊಂಡವರು.ಉತ್ತಮ ಕವಿ, ಲೇಖಕಿಯಾದ ನಿರುಪಮಾರ ಬರಹಗಳು ಅವಧಿ ಅಂತರ್ಜಾಲದಲ್ಲೂ ಪ್ರಕಟವಾಗುತ್ತಿವೆ.


ನಾನು ಈಗ ಬರೆಯುತ್ತಿರುವ ಮಹಾ ಪ್ರವಾಹದ ಬಗ್ಗೆ ಅರಿಯಬೇಕಾದರೆ ನಮ್ಮ ಮನೆ ಇದ್ದ ಹಿತ್ತಿಲಿನ ಮೇರೆಗಳು ಹಾಗೂ ಸನ್ನಿವೇಶಗಳ ಬಗ್ಗೆ ತಿಳಿಯುವುದು ಬಹಳ ಮುಖ್ಯ. ನಾವು ಹುಟ್ಟಿ ಬೆಳೆದ ಬಾಲ್ಯದ ನಮ್ಮ ಮನೆಯ ಹಿತ್ತಿಲಿನ ಮೂರು ದಿಕ್ಕುಗಳೂ ಗದ್ದೆಗಳಿಂದ ಆವೃತವಾಗಿತ್ತು.

ಹೆದ್ದಾರಿಯ ಹತ್ತಿರ ಇರುವ ಮನೆ. ಮನೆಯ ಎದುರಿಗೆ ಪೂರ್ವ ದಿಕ್ಕಿನಲ್ಲಿ ಹಾದು ಹೋಗುವ ಎತ್ತರದಲ್ಲಿರುವ ಹೆದ್ದಾರಿಗೆ ಹತ್ತಬೇಕಾದರೆ ಒಂದು ಗದ್ದೆಯನ್ನು ದಾಟಿ ಹೋಗಬೇಕು.ಮನೆಯ ಎಡ ಭಾಗದಲ್ಲಿ ದಕ್ಷಿಣಕ್ಕೆ ಗದ್ದೆಗಳನ್ನು ದಾಟಿದರೆ ಒಂದು ಚಿಕ್ಕ ಹೊಳೆ.ನಮ್ಮ ಊರಿನ ಹೆಸರಿನಿಂದಲೇ ಕರೆಯಿಸಿ ಕೊಳ್ಳುವ ಉಚ್ಚಿಲ ಹೊಳೆ. ಆ ಹೊಳೆಗೆ ಹೆದ್ದಾರಿಯಲ್ಲಿ ಒಂದು ಸೇತುವೆ. ಅದಕ್ಕೆ ಸಮಾನಾಂತರವಾಗಿ ರೈಲು ಮಾರ್ಗದಲ್ಲಿ ಒಂದು ಸೇತುವೆ. ಆ ರೈಲು ಮಾರ್ಗ ಮನೆಯ ಹಿಂಭಾಗದಲ್ಲಿ ಹಾದು ಹೋಗುತ್ತದೆ.

 ಮನೆಯಿಂದ ರೈಲು ಮಾರ್ಗಕ್ಕೆ ಸುಮಾರು 200 ಮೀಟರ್‌ನಷ್ಟು ದೂರ. ಅದರ ಮಧ್ಯೆ ಗದ್ದೆಗಳು.ಎತ್ತರದ ದಿನ್ನೆಯಲ್ಲಿದೆ ರೈಲು ಮಾರ್ಗ. ಗದ್ದೆಗಳ ಮಧ್ಯೆ ಒಂದು ಚಿಕ್ಕ ತೋಡು. ನಾವು ಅದನ್ನು ಕೈತೋಡು ಎಂದು ಕರೆಯುತ್ತಿದ್ದೆವು. ಅದರ ನೀರು ಉತ್ತರದಿಂದ ದಕ್ಷಿಣಕ್ಕೆ ಹೊಳೆಯ ಕಡೆಗೆ ಹರಿಯುತ್ತಿತ್ತು.ಮಳೆಗಾಲದಲ್ಲಿ ಎಡೆ ಬಿಡದೆ ಮಳೆ ಸುರಿದರೆ ಅದು ತುಂಬಿ ಹರಿಯುತ್ತಿತ್ತು. ಕೈತೋಡು ದಾಟಿದರೆ ಗದ್ದೆಗಳ ಮಧ್ಯದಲ್ಲಿ ಎಡಕ್ಕೆ ಕುದುರು ಮನೆ. ಅವರಿಗೆ ರೈಲು ಮಾರ್ಗ ಸಮೀಪ. ಏಕೆಂದರೆ ಒಂದು ತಗ್ಗಿನ ಗದ್ದೆಯನ್ನು ದಾಟಿ ಪುನಃ ಎತ್ತರದ ಗದ್ದೆಯನ್ನು ದಾಟಿದರೆ ಮುಗಿಯಿತು, ರೈಲು ಮಾರ್ಗವನ್ನು ತಲುಪುತ್ತಾರೆ. ಕೈತೋಡು ಅವರ ಹಿತ್ತಿಲಿನ ಪೂರ್ವದಲ್ಲಿ ಹರಿಯುತ್ತದೆ. ಅಲ್ಲಿಂದ ಇನ್ನೊಂದು ಹಿತ್ತಿಲಿಗೆ ಸಂಪರ್ಕಿಸಲು ತೆಂಗಿನ ಮರದ ಕಾಂಡದಿಂದ ಮಾಡಿದ ಪಾಲ (ಕೈ ಸಂಕ). ಮಳೆಗಾಲದ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ನಾವು ಹೆದರುತ್ತಾ ಆ ಸಂಕವನ್ನು ದಾಟಿ ಹೋಗುತ್ತಿದ್ದೆವು. ನಮ್ಮ ಹಿತ್ತಿಲಿನ ಉತ್ತರದಲ್ಲಿ ಹಿತ್ತಿಲುಗಳೂ, ಮನೆಗಳೂ ಇವೆ.

ರೈಲು ಮಾರ್ಗದಲ್ಲಿ ನಡೆದುಕೊಂಡು ಹೋದರೆ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿದೆ ನಮ್ಮ ಉಚ್ಚಿಲ ಶಾಲೆ. ಮಳೆಗಾಲದಲ್ಲಿ ನೀರು ತುಂಬಿರುವಾಗ ಕೈತೋಡು ದಾಟಿಸಲು ಅಮ್ಮ ನಮ್ಮಿಂದಿಗೆ ಬರುತ್ತಿದ್ದರು. ನಮ್ಮ ಶಾಲೆಯ ಚೀಲವನ್ನು ಅಮ್ಮ ಎತ್ತಿಕೊಳ್ಳುತ್ತಿದ್ದರು. ತೋಡು ದಾಟುವಾಗ ನೀರೊಳ್ಳೆಗಳು ಅತ್ತಿತ್ತ ಚಲಿಸುವುದು ಕಾಣುತ್ತಿದ್ದವು. ನಮ್ಮ ನಾಯಿಗಳೂ ನಮ್ಮನ್ನು ಬೀಳ್ಕೊಡಲು ಓ ಅಲ್ಲಿಯವರೆಗೆ ಬರುತ್ತಿದ್ದವು. ಸಿಂಗ ನಮ್ಮಿಟ್ಟಿಗೆ ಈಜಿ ದಾಟಿದರೆ, ನೀರು ಮುಟ್ಟಿಸಿಕೊಳ್ಳಲು ಕಿರಿಕಿರಿ ಎನಿಸುವ ಟೈಗರ್ ಒಂದೇ ನೆಗೆತಕ್ಕೆ ತೋಡನ್ನು ದಾಟಿ ಅಲ್ಲಿಂದ ಓಡಿ ಎತ್ತರದ ಬದುವಿನಲ್ಲಿ ನಿಂತು ನಮ್ಮ ದಾರಿ ಕಾಯುತ್ತಿದ್ದ. ಕುದುರು ಮನೆಯಿಂದ ಪ್ರೇಮಕ್ಕ ಮತ್ತು ರೇವತಿ ನೀರಿನಲ್ಲಿ ನಡೆದುಕೊಂಡು ಬಂದು ನಮ್ಮನ್ನು ಸೇರುತ್ತಿದ್ದರು. ಅಲ್ಲಿಂದ ಅಮ್ಮ ಹಿಂದಿರುಗಿ ಹೋಗುತ್ತಿದ್ದರು. ಸಿಂಗ ಅಮ್ಮ ನೊಟ್ಟಿಗೆ ಹಿಂದಿರುಗಿದರೆ ಟೈಗರ್ ನಮ್ಮಿಂದಿಗೆ ಬಂದು ಬೇರೆ ನಾಯಿಗಳೊಂದಿಗೆ ಜಗಳ ಮಾಡಿ ನಮ್ಮನ್ನು ತೊಂದರೆಗೆ ಸಿಲುಕಿಸಿ ಮತ್ತೆ ಹಿಂದಿರುಗುತ್ತಿದ್ದ. ನಾವು ನಾಲ್ವರು ಅಕ್ಕ ತಂಗಿಯರು ಮತ್ತು ಪ್ರೇಮಕ್ಕ, ರೇವತಿ ಮುಂದುವರಿದು ಕೇದಗೆಯ ಪೊದೆಯೊಳಗಿನಿಂದ ಹಾದು ಮೇಲೆ ಹತ್ತಿ ರೈಲು ಹಳಿಯ ಪಕ್ಕದಲ್ಲಿ ನಡೆದು ಶಾಲೆ ತಲುಪುತ್ತಿದ್ದೆವು. ನೆರೆ ಇಳಿಯದಿದ್ದರೆ ಅಮ್ಮ ಕುದುರು ಮನೆಗೆ ಊಟ ತಂದು ನಮ್ಮ ದಾರಿ ಕಾಯುತ್ತಿದ್ದರು. ಹಳೆಯ ರೈಲು ಗೇಟ್ ಹತ್ತಿರ ಇರುವ ಸಂಬಂಧಿಕರ ಮನೆಗೆ ಊಟ ತಂದು ಕಾದದ್ದೂ ಇದೆ. ನಾವು ಊಟ ಮುಗಿಸಿ ಅಲ್ಲಿಂದಲೇ ಶಾಲೆಗೆ ಹಿಂದಿರುಗುತ್ತಿದ್ದೆವು. ಕೆಲವೊಮ್ಮೆ ಮಧ್ಯಾಹ್ನ ನಾವು ನೆರೆ ಇಳಿದಿರಬಹುದೆಂದು ಯಾವತ್ತಿನಂತೆ ರೈಲು ಮಾರ್ಗದಲ್ಲಿ ಬಂದು ಮೇಲೆ ನಿಂತು ನೋಡಿದರೆ ಕೆಳಗೆ ನೀರೇ ನೀರು. ನಾವು ಅಲ್ಲಿಂದಲೇ ಹಿಂದಿರುಗಿ ಬೇರೆ ದಾರಿಯಲ್ಲಿ ನಡೆದು ಹೆದ್ದಾರಿಗೆ ತಲುಪಿ ಅಲ್ಲಿಂದ ಒಳದಾರಿಯಲ್ಲಿ ನಡೆದು ಮನೆಗೆ ಮುಟ್ಟಿ ಊಟ ಮಾಡಿ ಪುನಃ ಶಾಲೆಗೆ ಓಡುತ್ತಿದ್ದೆವು. ಅಂತಹ ಸಂದರ್ಭಗಳಲ್ಲಿ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಮಳೆಗಾಲದಲ್ಲಿ ಶಾಲಾ-ಕಾಲೇಜುಗಳಿಗೆ ಹೋಗುವ ದಿನಗಳು ಕಷ್ಟಕರವಾಗಿದ್ದವು.


ಉಚ್ಚಿಲ ಹೊಳೆ ಹರಿದು ಬರುವುದು ಕೊಲ್ಯದ ಪೂರ್ವದ ಒಳ ಪ್ರದೇಶದಲ್ಲಿ. ಅಲ್ಲಿರುವ ಪುಟ್ಟ ಗುಡ್ಡಗಳ ಮಧ್ಯೆ ಉಗಮಿಸಿ ಗದ್ದೆಗಳ ಮಧ್ಯದಲ್ಲಿ ತೋಡುಗಳಾಗಿ ಕ್ರಮಿಸಿ ಮಾಡೂರು ಮೂಲಕ ಹಾದು ಆಚೆ ಉಚ್ಚಿಲದ ಅಕ್ಕರೆ ಪ್ರದೇಶದಲ್ಲಿ ಹರಿಯುತ್ತಾ ಗದ್ದೆ ಜಾತ್ರೆ ನಡೆಯುವ ಗದ್ದೆಗಳ ಪಕ್ಕದಲ್ಲಿ ಮುಂದುವರಿದು ಹೆದ್ದಾರಿಯ ಹಾಗೂ ರೈಲು ಮಾರ್ಗದ ಸೇತುವೆಗಳ ಅಡಿಯಿಂದ ಸಾಗಿ ಪಶ್ಚಿಮದಲ್ಲಿರುವ ಅರಬಿ ಸಮುದ್ರವನ್ನು ಸೇರುವಾಗ ತಲಪಾಡಿ ಹೊಳೆಯೊಂದಿಗೆ ಒಂದಾಗಿ ಸೇರುತ್ತದೆ.ಬಟ್ಟಪ್ಪಾಡಿಗಿಂತ ಮುಂದೆ ತಲಪಾಡಿ ಗಡಿ ಪ್ರದೇಶದಲ್ಲಿ ವಿಶಾಲವಾದ ಅಳಿವೆ ಬಾಗಿಲು.

ನಿಸರ್ಗದತ್ತ ಸುಂದರವಾದ ಪ್ರದೇಶ. ಈ ಅಳಿವೆ ಬಾಗಿಲಲ್ಲಿ ಕೆಲವು ಸಲ ಹೊಯ್ಗೆ ಶೇಖರವಾಗಿ ನೀರಿನ ಹರಿಯುವಿಕೆಗೆ ತಡೆ ಉಂಟಾಗುತ್ತದೆ. ಸಮುದ್ರಕ್ಕೆ ಸೇರಬೇಕಾಗಿದ್ದ ನೀರು ಅಲ್ಲಲ್ಲಿ ಶೇಖರವಾಗಿ ಉಚ್ಚಿಲ ಹೊಳೆಯ ಹಾಗೂ ತಲಪಾಡಿ ಹೊಳೆಯ ದಡದಲ್ಲಿರುವವರಿಗೆ ನೆರೆಯ ಭೀತಿಯನ್ನು ಉಂಟು ಮಾಡುತ್ತದೆ. ಮಳೆ ಇಲ್ಲದೆ ನೆರೆ. ಯಾರಾದರೂ ಕೆಲವರು ಹೋಗಿ ಹೊಯ್ಗೆಯನ್ನು ಅಗೆದು ಅಳಿವೆಯ ಬಾಯಿಯನ್ನು ತೆರೆದು ನೀರಿನ ಹರಿಯುವಿಕೆಗೆ ದಾರಿ ಮಾಡುತ್ತಿದ್ದರು. ಸ್ವಲ್ಪ ಸಮಯದಲ್ಲಿ ತುಂಬಿದ ಗದ್ದೆಗಳಿಂದ ನೀರು ಇಳಿದು ದಡದಲ್ಲಿ ವಾಸಿಸುವವರು ಭಯ ತೊರೆದು ಸಮಾಧಾನದ ನಿಟ್ಟುಸಿರು ಬಿಡುತ್ತಿದ್ದರು. ನೆರೆಯ ಭೀತಿ ನಮಗೆ ಯಾವತ್ತೂ ಇದ್ದದ್ದೇ. ನಮ್ಮ ಹಿತ್ತಿಲಿನ ಅರ್ಧದಷ್ಟು ಭಾಗ ತಗ್ಗು ಪ್ರದೇಶ. ಹಿತ್ತಿಲಿನ ಒಳಗೆ ಅಲ್ಲಿಕಂಡೆ ಹೂವಿನ ಕೊಳಗಳು. ಉತ್ತರದ ಮನೆ, ಬಾವಿ ಇರುವ ಜಾಗ ಸ್ವಲ್ಪ ಎತ್ತರದಲ್ಲಿ ಇತ್ತು. ನಾವು ಚಿಕ್ಕವರಿರುವಾಗ ನಮ್ಮ ಪಪ್ಪಮ್ಮ ಬದುಕಿರುವಾಗ ಒಮ್ಮೆ ರಾತ್ರಿ ಹೊತ್ತಿನಲ್ಲಿ ಬಂದ ನೆರೆಯ ನೀರು ಮನೆಯ ಅಂಗಳಕ್ಕೆ ಏರಿ ಬಂದಿತ್ತು. ಅಪಾಯದ ಮುನ್ಸೂಚನೆ ದೊರೆತ ನಾವು ಉತ್ತರ ದಿಕ್ಕಿನಿಂದಾಗಿ ಹೋಗಿ ಹೆದ್ದಾರಿ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದೆವು. ನಂತರ 1971ರಲ್ಲಿ ಅಷ್ಟಮಿಯ ದಿವಸ ಬಂದ ದೊಡ್ಡ ನೆರೆ. ಆಗ ದೊಡ್ಡಪ್ಪನವರ ಕುಟುಂಬವು ನಮ್ಮಿಟ್ಟಿಗೆ ಇತ್ತು. ಆಗಲೂ ನಾವು ಸುರಕ್ಷಿತ ಸ್ಥಳಕ್ಕೆ ಹೋಗಿದ್ದೆವು. ಆ ನೆರೆಯಲ್ಲಿ ನಮ್ಮ ಮನೆಯಿಂದ ಪ್ರತ್ಯೇಕವಾಗಿದ್ದ ಬಚ್ಚಲು ಮನೆ ಕುಸಿದು ಬಿದ್ದಿತ್ತು. ನಂತರದ ದಿನಗಳಲ್ಲಿ ಮನೆಗೆ ತಾಗಿದಂತೆ ಬಚ್ಚಲು ಕೋಣೆ, ಹೊಸ ಅಡಿಗೆ ಕೋಣೆ ಮತ್ತು ಒಂದು ಹೆಚ್ಚಿನ ಕೋಣೆ ಸೇರಿಸಿ ಕಟ್ಟಿ ಮನೆಯನ್ನು ವಿಸ್ತೃತಗೊಳಿಸಲಾಗಿತ್ತು. ನಾನೀಗ ಬರೆಯಲು ಹೊರಟಿರುವ ಆ ಮಹಾ ಪ್ರವಾಹ ಉಕ್ಕಿ ಹರಿದದ್ದು, 1977, ಜುಲೈ 23ನೇ ತಾರೀಕು. ಎರಡು ದಿನಗಳಿಂದ ಮಳೆ ಎಡೆ ಬಿಡದೆ ಸುರಿಯುತ್ತಿತ್ತು. ನಮ್ಮ ಹಿತ್ತಿಲನ್ನು ಸುತ್ತುವರಿದಿರುವ ಗದ್ದೆಗಳು ಜಲಾವೃತವಾಗಿದ್ದವು. ನಾವು ನಾಲ್ವರು ಅಕ್ಕ ತಂಗಿಯರು ಕಾಲೇಜಿಗೆಂದು ಹೊರಟು ನಿಂತಿದ್ದೆವು. ನಮ್ಮ ಹಿತ್ತಿಲಿನ ಉತ್ತರ ಭಾಗದಿಂದ ಹೋಗುವುದೊಂದೇ ನಮಗಿದ್ದ ದಾರಿ. ರೈಲು ಮಾರ್ಗದಲ್ಲಿ ನಡೆದು ಉಳ್ಳಾಲ ರೈಲು ಸ್ಟೇಷನ್‌ಗೆ ತಲುಪಬೇಕಿತ್ತು. ಅಲ್ಲಿಂದ ಪುನಃ ನಡೆದು ಬೆಸೆಂಟ್‌ಕಾಲೇಜು ತಲುಪಬೇಕಿತ್ತು. ನಾವು ಅದೇ ಮಾರ್ಗವಾಗಿ ಚೆಟ್ಟಿ ಹಿತ್ತಿಲಲ್ಲಿ ಇರುವ ಆಲಿಯಬ್ಬನವರ ಮನೆಯನ್ನು ದಾಟಿ ಐಸಕುಂಞಿಯವರ ಅಂಗಳದಲ್ಲಿ ನಡೆದು ಪಡ್ಪು ಓಣಿಗೆ ಇಳಿದೆವು. ಅಲ್ಲಿಂದ ಎಡಕ್ಕೆ ತಿರುಗಿ ನಡೆದರೆ ಪುನಃ ಗದ್ದೆಗಳು. ಗದ್ದೆಗೆ ಇಳಿಯದೆ ಉತ್ತರದ ಕಡೆಗೆ ನಡೆದರೆ ಮೊಯ್ದಿನ್ ಬ್ಯಾರಿಯವರ ಹಿತ್ತಿಲು. ಎತ್ತರದಲ್ಲಿರುವ ಆ ಹಿತ್ತಿಲಿಗೆ ಹತ್ತಿದರೆ ಎಡಕ್ಕೆ ಕುದುರು ಮನೆ. ಮಧ್ಯದಲ್ಲಿ ಕೈತೋಡು ನೆರೆಯ ನೀರನ್ನು ಹೊತ್ತುಕೊಂಡು ರಭಸದಿಂದ ಹರಿಯುತ್ತಿತ್ತು. ಕೈಯಲ್ಲಿ ಕೊಡೆ, ಪುಸ್ತಕಗಳು. ಇನ್ನೊಂದು ಕೈಯಲ್ಲಿ ಸೀರೆಯನ್ನು ಹಿಡಿದುಕೊಂಡು ಹೆದರುತ್ತಾ ತೆಂಗಿನ ಮರದ ಕಾಂಡದ ಪಾಲವನ್ನು ದಾಟಿದೆವು. ತಗ್ಗಿನಲ್ಲಿರುವ ಕುದುರು ಹಿತ್ತಿಲಲ್ಲಿ ಸಾಧಾರಣ ಮಟ್ಟಿಗೆ ನೀರು ತುಂಬಿ ಕೊಂಡಿತ್ತು. ತಡಮೆ ದಾಟಿ ಗದ್ದೆಗೆ ಇಳಿದೆವು. ಬದುವಿನಲ್ಲಿ ನೀರು. ಸೀರೆಯನ್ನು ತೋಯಿಸಿಕೊಂಡು ಹೇಗೂ ಗದ್ದೆ ದಾಟಿದೆವು. ನಂತರ ಎತ್ತರದ ಗದ್ದೆಗೆ ಹತ್ತಿ ನಡೆದು ಕೇದಗೆಯ ಪೊದೆಯೊಳಗಿಂದಾಗಿ ಮುಂದುವರಿದು ರೈಲು ಮಾರ್ಗಕ್ಕೆ ಹತ್ತಿದೆವು. ಹಳಿಗಳ ಬದಿಯಲ್ಲಿ ನಡೆಯುತ್ತಾ ಮುಂದುವರಿದೆವು. ಪಳ್ಳಿ ಹಿತ್ತಿಲಿನ ಪರಿಸರದಿಂದ ಬರುವ ಗೆಳತಿಯರು ನಮ್ಮನ್ನು ಸೇರಿಕೊಂಡರು. ಅಲ್ಲಿಂದ ಮುಂದುವರಿದು ರೈಲ್ವೇ ಗೇಟ್ ಹತ್ತಿರ, ಉಚ್ಚಿಲ ಶಾಲೆಯ ಹತ್ತಿರದ ಗೆಳತಿಯರೊಡನೆ ಸೇರಿಕೊಂಡು ನಡೆದು ರೈಲು ನಿಲ್ದಾಣ ತಲುಪಿದೆವು. ರೈಲು ಹತ್ತಿ ಮಂಗಳೂರು ಸೇರಿ ಪುನಃ ನಡೆದು ಕಾಲೇಜಿಗೆ ತಲುಪಿದೆವು. ಆದರೆ ಅಷ್ಟು ಕಷ್ಟಪಟ್ಟು ಹೋದದ್ದು ನಿರರ್ಥಕವಾಯಿತು. ಮಳೆಯ ಕಾರಣದಿಂದ ಕಾಲೇಜಿಗೆ ರಜೆ ಸಾರಲಾಗಿತ್ತು. ಊರಿನಿಂದ ನಮ್ಮಿಂದಿಗೆ ಬರುವ ನಮ್ಮ ಗೆಳತಿಯರು ಮತ್ತು ನಾವು ಬಸ್ಸಿನಲ್ಲಿ ಹಿಂದಿರುಗುವುದು ಎಂದು ನಿರ್ಧರಿಸಿ ಬಸ್ಸು ನಿಲ್ದಾಣಕ್ಕೆ ಪುನಃ ನಡೆದು ಬಂದು ತಲಪಾಡಿ ಬಸ್ಸು ಹತ್ತಿ ಪಯಣಿಸಿ ನಾವು ನಮ್ಮ ಮನೆಯ ಎದುರಿಗೆ ಇಳಿದೆವು. ಗೆಳತಿಯರು ಈ ಮೊದಲೇ ಸಂಕೊಲಿಗೆ ಸ್ಟಾಪ್, ಉಚ್ಚಿಲ ಸ್ಟಾಪಲ್ಲಿ ಇಳಿದು ಹೋಗಿದ್ದರು.

ಅಮ್ಮ ಮಲಗಿದ್ದ ಪಪ್ಪನ ಹತ್ತಿರ ಹೋಗಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ‘ಈಗಲೇ ಹೋದರೆ ನಮಗೆ ಆಲಿಯಬ್ಬನವರ ಹಿತ್ತಿಲಿನಿಂದಾಗಿ ಆಚೆ ಹೋಗಬಹುದು. ನೀರು ತುಂಬಿದರೆ ಏನು ಮಾಡಲಿಕ್ಕೂ ಸಾಧ್ಯವಿಲ್ಲ, ಏಳಿ’ ಎಂದು ಪಪ್ಪನನ್ನು ಒತ್ತಾಯಿಸತೊಡಗಿದರು. ಪಪ್ಪ ‘ಇಲ್ಲ, ಹಾಗೇನು ಆಗಲಿಕ್ಕಿಲ್ಲ. ನಾನು ಮನೆ ಬಿಟ್ಟು ಎಲ್ಲಿಗೂ ಬರುವುದಿಲ್ಲ’ ಎಂದು ಪಟ್ಟು ಹಿಡಿದು ಕೂತರು. ಇನ್ನೇನು ಮಾಡುವುದು? ಅಮ್ಮ ಮತ್ತು ದೇವಕಿ ಅಕ್ಕ ಗೋಣಿಗಳಲ್ಲಿ ಸಾಮಾನು ತುಂಬಿಸತೊಡಗಿದರು. ನಾವು ಕೂಡಾ ಅವರಿಗೆ ಕೈಕೂಡಿಸಿದೆವು. ಹೊರಗೆ ಬಂದು ನೋಡಿದರೆ ನೀರು ತಡಮೆಯಿಂದ ಒಳಗೆ ನುಗ್ಗುತ್ತಿದೆ. ನೀರು ಅಂಗಳಕ್ಕೆ ಏರುತ್ತಿತ್ತು.

 ಮನೆಯ ಎದುರಿಗೆ ಇರುವ ಗದ್ದೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿತ್ತು. ‘ಹೇಗೂ ಮನೆಗೆ ಹೋಗುವುದಲ್ಲ’ ಎಂದು ಯೋಚಿಸಿ ಬಟ್ಟೆಯನ್ನು ತೋಯಿಸಿಕೊಂಡು ಗದ್ದೆ ದಾಟಿ ಮನೆಯ ತಡಮೆ ಹತ್ತಿದೆವು. ಮನೆಗೆ ಬಂದು ಒದ್ದೆಯಾಗಿದ್ದ ನಮ್ಮ ಬಟ್ಟೆಗಳನ್ನು ಬದಲಾಯಿಸಿದೆವು. ಮುಂಬೈಯಲ್ಲಿ ಉದ್ಯೋಗದಲ್ಲಿದ್ದ ನಮ್ಮ ಪಪ್ಪ ಊರಿಗೆ ಬಂದಿದ್ದರು. ಕಳೆದ ಎರಡು ದಿನಗಳಿಂದ ಅವರು ಜ್ವರದ ಬಾಧೆಯಿಂದ ಮಲಗಿದ್ದರು. ಹಿಂದಿನ ದಿವಸ ಅಮ್ಮ ಡಾಕ್ಟರ್ ಹತ್ತಿರ ಕರೆದುಕೊಂಡು ಹೋಗಿ ಮದ್ದು ಕೊಡಿಸಿದ್ದುದರಿಂದ ಆ ದಿವಸ ಸ್ವಲ್ಪ ಗೆಲುವಾಗಿದ್ದರು. ಅಮ್ಮ ಅಡುಗೆ ಕೋಣೆಯಲ್ಲಿ ಮಧ್ಯಾಹ್ನದ ಅಡುಗೆಯ ತಯಾರಿಯಲ್ಲಿದ್ದರು.ಆಗ ಸಮಯ ಸುಮಾರು ಹತ್ತೂವರೆ ಆಗಿರಬಹುದು.ಮಳೆ ಇನ್ನೂ ಸುರಿಯುತ್ತಿತ್ತು. ಜಗಲಿಯಿಂದಾಗಿ ಹೋಗಿ ಮನೆಯ ದಕ್ಷಿಣ ದಿಕ್ಕಿನ ಹಿತ್ತಿಲಿಗೆ ನೋಡುವಾಗ ಕೆಳ ಹಿತ್ತಿಲಲ್ಲಿ ನೀರು ತುಂಬಿ ಮೇಲಿನ ಹಿತ್ತಿಲ ಕಡೆಗೆ ನಿಧಾನವಾಗಿ ಏರುತ್ತಿತ್ತು. ಜೋರಾಗಿ ಮಳೆ ಬಂದರೆ ಮನೆಯ ಹತ್ತಿರದವರೆಗೆ ನೀರು ಬರುವುದು ಸಾಮಾನ್ಯವಾಗಿತ್ತು.

    ಅದರಲ್ಲಿ ಅಪಾಯದ ಮುನ್ಸೂಚನೆಯೇನೂ ಕಂಡು ಬರಲಿಲ್ಲ. ಅಷ್ಟರಲ್ಲಿ ಅಮ್ಮನಿಗೆ ಕೆಲಸದಲ್ಲಿ ಸಹಾಯಕಿಯಾಗಿದ್ದು ಗೆಳತಿಯಂತಿದ್ದ ದೇವಕಿ ಅಕ್ಕ ಉತ್ತರದಲ್ಲಿರುವ ಆಲಿಯಬ್ಬನವರ ಹಿತ್ತಿಲಿಂದಾಗಿ ನೀರಿನಲ್ಲಿ ಕಾಲೆಳೆದುಕೊಂಡು ಆತಂಕಗೊಂಡವರಂತೆ ಬಂದರು. ಅಕ್ಕರೆಯಲ್ಲಿ ಕಟ್ಟೆ ಒಡೆದು, ನೀರು ಮುನ್ನುಗ್ಗಿ ಬರುತ್ತಿದೆಯೆಂಬ ಸಮಾಚಾರವನ್ನು ಅಮ್ಮನಿಗೆ ಹೇಳಿದರು. ಪರಿಸ್ಥಿತಿ ಗಂಭೀರವಾಗಿದೆ ಎಂದು ನಮಗೆ ಅನಿಸಿತು. ಅಮ್ಮ ಮಲಗಿದ್ದ ಪಪ್ಪನ ಹತ್ತಿರ ಹೋಗಿ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ‘ಈಗಲೇ ಹೋದರೆ ನಮಗೆ ಆಲಿಯಬ್ಬನವರ ಹಿತ್ತಿಲಿನಿಂದಾಗಿ ಆಚೆ ಹೋಗಬಹುದು. ನೀರು ತುಂಬಿದರೆ ಏನು ಮಾಡಲಿಕ್ಕೂ ಸಾಧ್ಯವಿಲ್ಲ, ಏಳಿ’ ಎಂದು ಪಪ್ಪನನ್ನು ಒತ್ತಾಯಿಸತೊಡಗಿದರು. ಪಪ್ಪ ‘ಇಲ್ಲ, ಹಾಗೇನು ಆಗಲಿಕ್ಕಿಲ್ಲ. ನಾನು ಮನೆ ಬಿಟ್ಟು ಎಲ್ಲಿಗೂ ಬರುವುದಿಲ್ಲ’ ಎಂದು ಪಟ್ಟು ಹಿಡಿದು ಕೂತರು. ಇನ್ನೇನು ಮಾಡುವುದು? ಅಮ್ಮ ಮತ್ತು ದೇವಕಿ ಅಕ್ಕ ಗೋಣಿಗಳಲ್ಲಿ ಸಾಮಾನು ತುಂಬಿಸತೊಡಗಿದರು. ನಾವು ಕೂಡಾ ಅವರಿಗೆ ಕೈಕೂಡಿಸಿದೆವು. ಹೊರಗೆ ಬಂದು ನೋಡಿದರೆ ನೀರು ತಡಮೆಯಿಂದ ಒಳಗೆ ನುಗ್ಗುತ್ತಿದೆ. ನೀರು ಅಂಗಳಕ್ಕೆ ಏರುತ್ತಿತ್ತು.ಸಾಮಾನುಗಳನ್ನು ದೇವಕಿ ಅಕ್ಕನವರ ಮನೆಯಲ್ಲಿ ಇಡುವುದು ಎಂದು ನಿರ್ಧರಿಸಿ ಅಮ್ಮ ಮತ್ತು ದೇವಕಿ ಅಕ್ಕ ಅವುಗಳನ್ನು ಎತ್ತಿಕೊಂಡು ಹೊರಟರು. ಅನುವೂ ಅವರೊಂದಿಗೆ ಕೆಲವು ಸಾಮಾನುಗಳನ್ನು ಹಿಡಿದುಕೊಂಡು ಹೊರಟಳು. ಅವರು ನೀರಿನಲ್ಲಿ ಕಾಲೆಳೆದುಕೊಂಡು ನೆರೆಯ ಆಲಿಯಬ್ಬನವರ ಹಿತ್ತಿಲಿನಿಂದಾಗಿ ಹೋಗಿ ಎತ್ತರದಲ್ಲಿರುವ ಇಸ್ಮಾಯೀಲ್ ಬ್ಯಾರಿಯವರ ಹಿತ್ತಿಲಿಗೆ ಹತ್ತಿ ಅದನ್ನು ಹಾದು ಹೆದ್ದಾರಿಯಲ್ಲಿ ಸುಮಾರು ಐವತ್ತು ಹೆಜ್ಜೆಗಳಷ್ಟು ದೂರದಲ್ಲಿರುವ ದೇವಕಿ ಅಕ್ಕನವರ ಮನೆಯಲ್ಲಿ ಸಾಮಾನುಗಳನ್ನು ಇರಿಸಲು ಹೋದರು. ಅವರು ಸಾಮಾನುಗಳನ್ನು ಕೊಂಡೊಯ್ಯುವುದನ್ನು ನೋಡಿ ಆಲಿಯಬ್ಬನವರೂ ಸಹಾಯಕ್ಕೆ ಬಂದರು. ಅವರೂ ಬಂದು ಸಾಮಾನಿನ ಗೋಣಿಯನ್ನು ಎತ್ತಿಕೊಂಡು ಹೋಗಿ ದೇವಕಿ ಅಕ್ಕನವರಲ್ಲಿಗೆ ಮುಟ್ಟಿಸಿ ಬಂದರು.

ನೀರು ರಭಸವಾಗಿ ಏರುತ್ತಿತ್ತು. ಹಿತ್ತಿಲ ಗೋಡೆಯನ್ನು ಹಾದು ನೀರು ಒಳಗೆ ನುಗ್ಗ ತೊಡಗಿತು. ಆಲಿಯಬ್ಬನವರ ಮನೆಯವರು ಎದುರಿನ ಇಸ್ಮಾಯೀಲ್ ಬ್ಯಾರಿಯವರ ಮನೆಯಲ್ಲಿ ಅಶ್ರಯ ಪಡೆದರು. ಅಮ್ಮ ಮತ್ತು ಅನು ಅಲ್ಲಿಯೇ ಬಾಕಿಯಾದರು. ಹಿತ್ತಿಲಲ್ಲಿ ನೀರೇ ನೀರು. ಗದ್ದೆ, ಹಿತ್ತಿಲು ಎಲ್ಲಾ ಒಂದೇ ಅಗಿತ್ತು. ನಮ್ಮ ಬಾವಿ ನೀರೊಳಗೆ ಮುಳುಗಿ ಹೋಯಿತು. ಬಾವಿಯ ಕುರುಹೇ ಕಾಣುತ್ತಿರಲಿಲ್ಲ. ಒಳಗೆ ಹೋಗಿ ಮನೆಯ ಕಿಟಕಿಯಿಂದಾಗಿ ಮನೆಯ ಹಿಂಭಾಗಕ್ಕೆ ನೋಡಿದಾಗ ನೀರಲ್ಲದೆ ಬೇರೇನೂ ಕಾಣುತ್ತಿರಲಿಲ್ಲ. ಕಿಟಕಿಯ ಕೆಳಗೆ ಬಗ್ಗಿ ನೋಡುವಾಗ ನೀರು ಗೋಡೆಗೆ ಸ್ಪರ್ಶಿಸಿ ಮೇಲೆ ಮೇಲೆ ಏರುತ್ತಿತ್ತು. ಪಪ್ಪ, ಮಕ್ಕಳಿಗೆ ಅತಂಕ ಹೆಚ್ಚಾಗ ತೊಡಗಿತು. ಆಲಿಯಬ್ಬನವರು ಇನ್ನೊಮ್ಮೆ ಬಂದರು. ಈ ಸಲ ಈಜಿಕೊಂಡು ಬಂದರು. ಬಂದು ಪಪ್ಪನ ಹತ್ತಿರ ಹೇಳಿದರು ‘‘ಕುದುರು ಮನೆಯ ಹತ್ತಿರ ತಲೆಬಾಡಿಯವರ ದೋಣಿ ಬಂದಿದೆ. ಸಾಮಾನು ಖಾಲಿ ಮಾಡುತ್ತಿದ್ದಾರೆ. ಅವರು ಇಲ್ಲಿಗೂ ಬರಬಹುದು.’’

ನಾವು ಸಾಮಾನುಗಳನ್ನು ತೆಗೆದುಕೊಂಡು ಬೇಗ ಹೊರಗೋಡಿ ಬಂದೆವು. ಯುವಕರು ನಮ್ಮ ಕೈಯಿಂದ ಸಾಮಾನು ತೆಗೆದುಕೊಂಡು ದೋಣಿಯಲ್ಲಿ ಇರಿಸಿದರು. ಪಪ್ಪ ನಾರಾಯಣ ಮಾವನನ್ನು ಆಧರಿಸಿ ಹಿಡಿದು ದೋಣಿಯಲ್ಲಿ ಕುಳಿತರು. ಸುಜಿ ನಾಯಿಯನ್ನು ಎತ್ತಿಕೊಂಡು ದೋಣಿಯಲ್ಲಿ ಕುಳಿತಳು. ಕೊನೆಯಲ್ಲಿ ನಾನು ಮತ್ತು ಸುಕ ಹತ್ತಿ ಕುಳಿತೆವು.ಮನೆಯ ಬಾಗಿಲು ತೆರೆದಿಡುವುದು ಎಂದು ನಿರ್ಧರಿಸಿ ಆಲಿಯಬ್ಬನವರ ಭರವಸೆಯಲ್ಲಿ ಮನೆಯನ್ನು ಬಿಟ್ಟು ಬಂದೆವು. ದೋಣಿ ಸಾಗಿತು. ಹಿತ್ತಿಲ ಗೋಡೆಯನ್ನು ಹಾದು ಗದ್ದೆಯ ಮೇಲಿನಿಂದ ಸಾಗುತ್ತಿತ್ತು. ದೋಣಿಯಲ್ಲಿದ್ದ ಒಂದು ಕಟ್ಟು ಸರ್ರನೆ ಜಾರಿ ನೀರಿಗೆ ಬಿದ್ದು ಕಣ್ಣ ರೆಪ್ಪೆ ಮಿಟುಕಿಸುವಷ್ಟರಲ್ಲಿ ನೀರಿನ ಒಳಗೆ ಮುಳುಗಿ ಹೋಯಿತು.

ಇಲ್ಲಿಯ ಪರಿಸ್ಥಿತಿ ಬಗ್ಗೆ ಅವರಿಗೆ ಈಗಾಗಲೇ ಸಮಾಚಾರ ಸಿಕ್ಕಿರಬಹುದು. ದೋಣಿ ಬಂದರೆ ನೀವೆಲ್ಲಾ ಹೋಗಿ. ನಾನು ಇಲ್ಲಿರುತ್ತೇನೆ. ನಮ್ಮ ಮನೆ ಮತ್ತು ನಿಮ್ಮ ಮನೆಯನ್ನು ನೋಡಿಕೊಳ್ಳುತ್ತೇನೆ ಎಂದರು. ನೀರು ಏರುತ್ತಿದ್ದಂತೆ ನಮ್ಮ ಆತಂಕ ಹೆಚ್ಚಾಗ ತೊಡಗಿತು. ನಮ್ಮ ನಾಯಿಯೂ ಸುತ್ತಲೂ ತುಂಬಿದ ನೀರನ್ನು ಕಂಡು ಆತಂಕಗೊಂಡಂತೆ ಕುಂಯ್ ಗುಟ್ಟುತ್ತಾ ನಮ್ಮ ಹಿಂದೆ ಮುಂದೆ ನಡೆಯತೊಡಗಿತು. ಇನ್ನೊಂದು ನಾಯಿ ರಾಜು ಬೆಳಗ್ಗಿನಿಂದ ನಾಪತ್ತೆಯಾಗಿತ್ತು. ನಾವು ಕೆಲವು ಪುಸ್ತಕಗಳನ್ನು ಒಂದು ಗೋಣಿಯಲ್ಲಿ ಹಾಕಿ ಕಟ್ಟಿಟ್ಟೆವು. ನೆಲದಲ್ಲಿದ್ದ ಕೆಲವು ಸಾಮಾನುಗಳನ್ನು ಎತ್ತಿ ಮೇಜಿನ ಮೇಲಿಟ್ಟೆವು. ಕೆಲವನ್ನು ಗೋಡೆಯಲ್ಲಿರುವ ಎತ್ತರದ ಪಡಿಯಲ್ಲಿ ಇಟ್ಟೆವು. ಇನ್ನೂ ಕೆಲವು ಸಾಮಾನುಗಳನ್ನು ಗೋಣಿಯಲ್ಲಿ ಕಟ್ಟಿಟ್ಟೆವು. ಮನೆಯ ಎದುರುಗಡೆ ಹೆದ್ದಾರಿಯಲ್ಲಿ ವಾಹನಗಳು ಸಾಲಾಗಿ ನಿಲ್ಲತೊಡಗಿದವು. ಆಲಿಯಬ್ಬನವರು ಹೇಳಿದರು ಅಲ್ಲಿ ನಡುಮನೆಯಿಂದ ತಂತ್ರಿಯವರ ಮನೆಯವರೆಗೆ ಇರುವ ಹೆದ್ದಾರಿಯ ಭಾಗದಲ್ಲಿ ನೀರು ರಸ್ತೆಯ ಮೇಲಿನಿಂದ ಹಾದು ಹರಿಯುತ್ತಿದ್ದು ವಾಹನಗಳು ಆ ಕಡೆ ಈ ಕಡೆ ಹೋಗಲಿಕ್ಕಾಗದೆ ಅಲ್ಲೇ ನಿಂತಿವೆ.

ಅನು, ಅಮ್ಮ, ದೇವಕಿ ಅಕ್ಕ ಮತ್ತು ನಮ್ಮ ಪರಿಚಯದ ಇನ್ನೂ ಕೆಲವರು ಹೆದ್ದಾರಿಯಲ್ಲಿ ನಿಂತು ನಮ್ಮ ಮನೆಯ ಕಡೆಗೆ ಆತಂಕದಿಂದ ನೋಡುತ್ತಿದ್ದರು. ವಾಹನಗಳಿಂದ ಕೆಳಗಿಳಿದು ನಿಂತವರು ನಮ್ಮೆಡೆಗೆ ಸಹಾನುಭೂತಿಯಿಂದ ನೋಡುತ್ತಿದ್ದರು. ಪಪ್ಪನಿಗೂ ಈಗ ಚಿಂತೆ ಹೆಚ್ಚಾಗತೊಡಗಿತು. ದೋಣಿ ಬರಬಹುದೋ ಇಲ್ಲವೋ ಎಂಬ ಚಿಂತೆ ನಮ್ಮೆಲ್ಲರನ್ನು ಕಾಡತೊಡಗಿತು. ನಾವು ಒಳಗೆ ಹೋಗಿ ಕಿಟಕಿಯಿಂದ ಹೊರಗೆ ನೋಡಿದೆವು. ಕಿಟಕಿಯಿಂದ ನೀರು ಒಳಗೆ ನುಗ್ಗಲು ಕೆಲವೇ ಇಂಚುಗಳಷ್ಟು ಬಾಕಿ ಇದ್ದವು. ದೂರ ರೈಲು ಹಳಿಗಳವರೆಗೆ ನೀರು. ಕುದುರು ಮನೆ ನೀರಿನಿಂದ ಸುತ್ತುವರಿದದ್ದು ತೆಂಗಿನ ಮರಗಳ ಎಡೆಯಿಂದ ಕಾಣುತ್ತಿತ್ತು. ಅಷ್ಟರಲ್ಲಿ ಕುದುರು ಮನೆ ಹಿತ್

Writer - ನಿರುಪಮಾ ಎಸ್. ಉಚ್ಚಿಲ್

contributor

Editor - ನಿರುಪಮಾ ಎಸ್. ಉಚ್ಚಿಲ್

contributor

Similar News