ನಾರ್ವೆ: ಕೋವಿಡ್ ಲಸಿಕೆ ಪಡೆದ 23 ಮಂದಿ ಸಾವು

Update: 2021-01-16 16:08 GMT

 ಓಸ್ಲೊ (ನಾರ್ವೆ), ಜ. 16: ನಾರ್ವೆ ದೇಶದಲ್ಲಿ ಮೊದಲ ಹಂತದ ಕೊರೋನ ವೈರಸ್ ಲಸಿಕೆಗಳನ್ನು ಪಡೆದ ಸ್ವಲ್ಪ ಹೊತ್ತಿನಲ್ಲೇ 23 ವಯೋವೃದ್ಧರು ಮೃತಪಟ್ಟಿದ್ದಾರೆ. ಆದರೆ, ಅವರ ಸಾವು ಮತ್ತು ಅವರಿಗೆ ನೀಡಲಾಗಿರುವ ಫೈಝರ್-ಬಯೋಎನ್‌ಟೆಕ್ ಲಸಿಕೆ ನಡುವೆ ಸಂಬಂಧವಿದೆಯೇ ಎನ್ನುವುದು ಖಚಿತಗೊಂಡಿಲ್ಲ.

ಆದರೆ, ಮೃತಪಟ್ಟ 23 ಮಂದಿಯ ಪೈಕಿ 13 ಮಂದಿ, ಭೇದಿ, ವಾಕರಿಕೆ ಮತ್ತು ಜ್ವರದಂಥ ‘ಎಮ್-ಆರ್‌ಎನ್‌ಎ’ ತಂತ್ರಜ್ಞಾನ ಆಧಾರಿತ ಲಸಿಕೆಗಳ ಸಾಮಾನ್ಯ ಅಡ್ಡಪರಿಣಾಮಗಳನ್ನು ತೋರಿಸಿದ್ದಾರೆ ಎಂದು ಪರಿಣತರು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ, 80 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಲಸಿಕೆ ನೀಡದಂತೆ ನಾರ್ವೆ ಸಾರ್ವಜನಿಕ ಆರೋಗ್ಯ ಇಲಾಖೆ ಸೂಚಿಸಿದೆ. ಕಡಿಮೆ ಜೀವಿತಾವಧಿ ಹೊಂದಿರುವವರ ಮೇಲೆ ಲಸಿಕೆಯು ಹೆಚ್ಚಿನ ಪರಿಣಾಮ ಬೀರಲಾರದು ಎಂದು ಅದು ಹೇಳಿದೆ.

‘‘ಅತ್ಯಂತ ದುರ್ಬಲ ದೇಹ ಹೊಂದಿದವರ ಮೇಲೆ ಲಸಿಕೆಯ ಲಘು ಅಡ್ಡಪರಿಣಾಮಗಳೂ ಗಂಭೀರ ಪರಿಣಾಮಗಳನ್ನುಂಟು ಮಾಡಬಹುದು’’ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News