ನಾಲ್ಕನೇ ಟೆಸ್ಟ್: ಭಾರತ ಟೀ ವಿರಾಮಕ್ಕೆ 183/3

Update: 2021-01-19 05:04 GMT

ಬ್ರಿಸ್ಬೇನ್: ಆಸ್ಟ್ರೇಲಿಯ ವಿರುದ್ಧ ಇಲ್ಲಿ ನಡೆಯುತ್ತಿರುವ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲು 328 ರನ್ ಸವಾಲು ಪಡೆದಿರುವ ಭಾರತ 5ನೇ ಹಾಗೂ ಅಂತಿಮ ದಿನವಾಗಿರುವ ಮಂಗಳವಾರ ಟೀ ವಿರಾಮದ ವೇಳೆಗೆ 63 ಓವರ್ ಗಳಲ್ಲಿ 3 ವಿಕೆಟ್‍ಗಳ ನಷ್ಟಕ್ಕೆ 183 ರನ್ ಗಳಿಸಿ ದಿಟ್ಟ ಹೋರಾಟ ನಡೆಸುತ್ತಿದೆ. 

ಹಿರಿಯ ಬ್ಯಾಟ್ಸ್ ಮನ್ ಚೇತೇಶ್ವರ ಪೂಜಾರ (ಔಟಾಗದೆ) 43 ರನ್ ಹಾಗೂ ವಿಕೆಟ್ ಕೀಪರ್ ರಿಷಬ್  ಪಂತ್ 10 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತಕ್ಕೆ ಈ ಪಂದ್ಯವನ್ನು ಜಯಿಸಿ ಸರಣಿಯನ್ನು ವಶಪಡಿಸಿಕೊಳ್ಳಲು ಇನ್ನೂ 145 ರನ್ ಗಳಿಸಬೇಕಾಗಿದೆ. 

ಗೆಲ್ಲಲು ಕಠಿಣ ಗುರಿ ಬೆನ್ನಟ್ಟಿದ ಭಾರತ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ (7) ವಿಕೆಟ್‍ನ್ನು ಬೇಗನೇ ಕಳೆದುಕೊಂಡಿತು. ಆಗ ತಂಡಕ್ಕೆ ಆಸರೆಯಾದ ಇನ್ನೋರ್ವ ಆರಂಭಿಕ ಬ್ಯಾಟ್ಸ್ ಮನ್ ಶುಭಮನ್ ಗಿಲ್ (91 ರನ್, 146 ಎಸೆತ, 8 ಬೌಂಡರಿ, 2 ಸಿಕ್ಸ್ಸರ್) ಹಾಗೂ ಚೇತೇಶ್ವರ ಪೂಜಾರ 2ನೇ ವಿಕೆಟ್‍ಗೆ 114 ರನ್ ಜೊತೆಯಾಟ ನಡೆಸಿದರು.  ನಾಯಕ ಅಜಿಂಕ್ಯ  ರಹಾನೆ ಕೇವಲ 24 ರನ್ ಗಳಿಸಿ ಔಟಾದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News