ಶುಭ್ ಮನ್ ಗಿಲ್ ಅತ್ಯುತ್ತಮ ಪ್ರದರ್ಶನಕ್ಕೆ ಹಿರಿಯ ಕ್ರಿಕೆಟಿಗರಿಂದ ಪ್ರಶಂಸೆ

Update: 2021-01-19 06:53 GMT

ಬ್ರಿಸ್ಬೇನ್,ಜ.19: ಬ್ರಿಸ್ಬೇನ್ ನ ಗಾಬಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯಾಟದಲ್ಲಿ ಭಾರತ ತಂಡವು ಸವಾಲಿನ ಮೊತ್ತವನ್ನು ತಲುಪುವ ನಿರೀಕ್ಷೆಯಲ್ಲಿದೆ. ಇನ್ನಿಂಗ್ಸ್ ಆರಂಭಿಸಿದ ಅನುಭವಿ ಆಟಗಾರ ರೋಹಿತ್ ಶರ್ಮಾ 7 ರನ್ ಗಳಿಸಿ ಪೆವಿಲಿಯನ್ ಸೇರಿದ ಬಳಿಕ ಯುವ ಆಟಗಾರ ಶುಭ್ ಮನ್ ಗಿಲ್, ಚೇತೇಶ್ವರ ಪೂಜಾರರೊಂದಿಗೆ ಸೇರಿಕೊಂಡು 114 ರನ್ ಗಳ ಜೊತೆಯಾಟ ನಡೆಸಿದರು.

ಒಟ್ಟು 146 ಎಸೆತಗಳನ್ನು ಎದುರಿಸಿದ ಶುಭ್ ಮನ್ ಗಿಲ್ 91 ರನ್ ಗಳಿಸಿದರು. 8 ಬೌಂಡರಿಗಳು ಹಾಗೂ 2 ಸಿಕ್ಸರ್ ಗಳು ಅವರ ಇನ್ನಿಂಗ್ಸ್ ನಲ್ಲಿ ಮೂಡಿ ಬಂತು. ನಾಲ್ಕನೇ ಇನ್ನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ ಅತಿ ಕಿರಿಯ ಭಾರತೀಯ ಆಟಗಾರನಾಗಿ ಗಿಲ್ ಸಾಧನೆಗೈದರು. ಗಿಲ್ ರ ಅತ್ಯುತ್ತಮ ಪ್ರದರ್ಶನವನ್ನು ಪ್ರಶಂಸಿಸಿ ಆಕಾಶ್‌ ಚೋಪ್ರ, ಮುಹಮ್ಮದ್ ಕೈಫ್ ಸೇರಿದಂತೆ ಹಲವು ಹಿರಿಯ ಆಟಗಾರರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News