ಫೆ.1: 6ರಿಂದ ಪಿಯು ತರಗತಿ ಆರಂಭಿಸಲು ತೀರ್ಮಾನ- ಸಚಿವ ಸುರೇಶ್ ಕುಮಾರ್

Update: 2021-01-28 11:40 GMT

ಬೆಂಗಳೂರು : ಫೆ.1ರಿಂದ 6ನೇ ತರಗತಿಯಿಂದ ಮೊದಲ ಪಿಯುಸಿ ತರಗತಿ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. 

ಆರೋಗ್ಯ ಸಚಿವರ ಜೊತೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ‌‌ ನಡೆಸಲಾಗಿದ್ದು, ಚರ್ಚೆಯ ಆಧಾರದಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಫೆ.1 ರಿಂದ 10, 12 ನೇ‌ ತರಗತಿಗೆ ಸಂಬಂಧಿಸಿದಂತೆ ಹಾಗೂ 9, 11 ನೇ ತರಗತಿಗಳು ಪೂರ್ಣ ದಿನ ನಡೆಯಲಿವೆ. 6-8 ನೇ ತರಗತಿಗಳಿಗೆ ಸಂಬಂಧಿಸಿದಂತೆ ವಿದ್ಯಾಗಮ ಮುಂದುವರೆಯಲಿವೆ. ತಾಂತ್ರಿಕ ಸಲಹಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಉಳಿದ ತರಗತಿಗಳನ್ನ ಪ್ರಾರಂಭಿಸುವ ಬಗ್ಗೆ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುತ್ತದೆ. ಆಫ್ ಲೈನ್/ಆನ್ ಲೈನ್ ಆಯ್ಕೆ‌ ಮುಂದುವರೆಯಲಿದೆ ಎಂದು ಅವರು ಮಾಹಿತಿ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News