​'ನಾಸಾ' ಉನ್ನತ ಹುದ್ದೆಗೆ ಭಾರತೀಯ ಮೂಲದ ಭವ್ಯಾ ಲಾಲ್

Update: 2021-02-02 04:11 GMT

ವಾಷಿಂಗ್ಟನ್: ಭಾರತ ಮೂಲದ ಭವ್ಯಾ ಲಾಲ್ ಅವರನ್ನು ನಾಸಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಿಬ್ಬಂದಿ ವಿಭಾಗದ ಹಂಗಾಮಿ ಮುಖ್ಯಸ್ಥೆಯಾಗಿ ನೇಮಕ ಮಾಡಲಾಗಿದೆ.

ಜೋ ಬೈಡನ್ ಅವರ ಅಧ್ಯಕ್ಷೀಯ ವರ್ಗಾವಣೆ ಏಜೆನ್ಸಿಯ ಅವಲೋಕನ ತಂಡದ ಸದಸ್ಯೆಯಾಗಿದ್ದ ಲಾಲ್, ಇಡೀ ವರ್ಗಾಂತರ ಪ್ರಕ್ರಿಯೆಯ ಮೇಲ್ವಿಚಾರಣೆ ಜವಾಬ್ದಾರಿ ಹೊಂದಿದ್ದರು.

ಇನ್‌ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಅನಾಲಿಸಿಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಪಾಲಿಸಿ ಇನ್‌ಸ್ಟಿಟ್ಯೂಟ್ (ಎಸ್‌ಟಿಪಿಐ)ನಲ್ಲಿ ಇವರು 2005ರಿಂದ 2020ರವರೆಗೆ ಸಂಶೋಧನಾ ತಂಡದ ಸದಸ್ಯರಾಗಿದ್ದರು. ಎಂಜಿನಿಯರಿಂಗ್ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಪಾರ ಅನುಭವ, ಇವರ ನೇಮಕದೊಂದಿಗೆ ಸಂಸ್ಥೆಗೆ ಲಭ್ಯವಾಗಲಿದೆ ಎಂದು ನಾಸಾ ಪ್ರಕಟಣೆ ಹೇಳಿದೆ.

ಎಸ್‌ಟಿಪಿಐನಲ್ಲಿ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ವಿಭಾಗ ಮತ್ತು ರಾಷ್ಟ್ರೀಯ ಬಾಹ್ಯಾಕಾಶ ಮಂಡಳಿಯ ಬಾಹ್ಯಾಕಾಶ ತಂತ್ರಜ್ಞಾನ, ಕಾರ್ಯತಂತ್ರ ಮತ್ತು ನೀತಿ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ನಾಸಾ, ರಕ್ಷಣಾ ವಿಭಾಗ ಹಾಗೂ ಬೇಹುಗಾರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ನ್ಯಾಷನಲ್ ಅಕಾಡಮಿ ಆಫ್ ಸೈನ್ಸ್‌ನ ಐದು ಅತ್ಯುನ್ನತ ಸಮಿತಿಗಳ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News