“ಕೊರೋನ ವೈರಸ್ ಮೂಲ ಇನ್ನೂ ಗುರುತಿಸಲಾಗಿಲ್ಲ”

Update: 2021-02-09 18:36 GMT

ವುಹಾನ್ (ಚೀನಾ), ಫೆ. 9: ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಕೊರೋನ ವೈರಸ್‌ನ ಪ್ರಾಣಿ ಮೂಲವನ್ನು ಇನ್ನೂ ಗುರುತಿಸಲಾಗಿಲ್ಲ ಎಂದು ಚೀನಾದಲ್ಲಿ ಸಾಂಕ್ರಾಮಿಕದ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಯ ಪರಿಣಿತರ ತಂಡ ಹೇಳಿದೆ.

ವೈರಸ್ ಮೊದಲು ಪ್ರಾಣಿಯೊಂದರಲ್ಲಿ ಕಾಣಿಸಿಕೊಂಡಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾಗಳ 34 ಪರಿಣತರ ಜಂಟಿ ತಂಡ ಭಾವಿಸಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪರಿಣತ ಲಿಯಾಂಗ್ ವನಿಯನ್ ವುಹಾನ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಆದರೆ, ಆ ಪ್ರಾಣಿಯನ್ನು ಇನ್ನಷ್ಟೇ ಗುರುತಿಸಬೇಕಾಗಿದೆ ಎಂದರು.

ಕೊರೋನ ವೈರಸ್‌ನ ಮೊದಲ ಸೋಂಕು ವುಹಾನ್ ನಗರದಲ್ಲಿ ಪತ್ತೆಯಾಗಿತ್ತು. 2019 ಡಿಸೆಂಬರ್‌ನಲ್ಲಿ ಮೊದಲ ಅಧಿಕೃತ ಪ್ರಕರಣಗಳು ದಾಖಲಾಗುವ ಮೊದಲು ನಗರದಲ್ಲಿ ವೈರಸ್ ಹರಡುತ್ತಿದ್ದುದ್ದನ್ನು ಸಾಬೀತುಪಡಿಸುವ ಪುರಾವೆ ಇಲ್ಲ ಎಂದು ಲಿಯಾಂಗ್ ಹೇಳಿದರು.

ವೈರಸ್ ಚೀನಾದಲ್ಲಿ ಪತ್ತೆಯಾಗುವ ಮೊದಲು ಇತರ ಪ್ರದೇಶಗಳಲ್ಲಿ ಹರಡಿರಬಹುದು ಎಂಬ ಇಂಗಿತವನ್ನೂ ಅವರು ವ್ಯಕ್ತಪಡಿಸಿದರು.

 ‘ಪ್ರಯೋಗಾಲಯದಿಂದ ಸೋರಿಕೆ ಅತ್ಯಂತ ಅಸಂಭವ’

ಕೊರೋನ ವೈರಸ್ ಪ್ರಯೋಗಾಲಯವೊಂದರಿಂದ ಹೊರಬಂತು ಎಂಬ ಸಿದ್ಧಾಂತವನ್ನು ವಿಶ್ವ ಆರೋಗ್ಯ ಸಂಸ್ಥೆಯ ಪರಿಣಿತರ ತಂಡವು ತಳ್ಳಿಹಾಕಿದೆ.

ಚೀನಾದ ವುಹಾನ್ ನಗರದಲ್ಲಿರುವ ವೈರಸ್ ಪ್ರಯೋಗಾಲಯದಿಂದ ಕೊರೋನ ವೈರಸ್ ಸೋರಿಕೆಯಾಗಿರುವುದು ‘ಅತ್ಯಂತ ಅಸಂಭವ’ ಎಂದು ಪರಿಣತರ ತಂಡದ ಮುಖ್ಯಸ್ಥ ಪೀಟರ್ ಬೆನ್ ಎಂಬಾರೆಕ್ ಹೇಳಿದರು.

ತನಿಖೆಯಲ್ಲಿ ಹೊಸ ವಿಷಯಗಳು ಹೊರಬಂದಿವೆ ಎಂದು ಹೇಳಿದ ಡಾ. ಎಂಬಾರೆಕ್, ಆದರೆ, ಹೊಸ ಮಾಹಿತಿಗಳು ಸಾಂಕ್ರಾಮಿಕದ ಚಿತ್ರಣವನ್ನು ನಾಟಕೀಯವಾಗಿಯೇನೂ ಬದಲಾಯಿಸುವುದಿಲ್ಲ ಎಂದು ವುಹಾನ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News