ಜಾಗತಿಕ ಭದ್ರತೆಗೆ ಐಸಿಸ್ ಒಡ್ಡಿರುವ ಬೆದರಿಕೆಯಲ್ಲಿ ಮತ್ತೆ ಹೆಚ್ಚಳ: ವಿಶ್ವಸಂಸ್ಥೆ ಎಚ್ಚರಿಕೆ

Update: 2021-02-12 18:36 GMT

ವಿಶ್ವಸಂಸ್ಥೆ (ನ್ಯೂಯಾರ್ಕ್), ಫೆ. 12: ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಐಸಿಸ್ ಭಯೋತ್ಪಾದಕ ಗುಂಪು ಒಡ್ಡಿರುವ ಬೆದರಿಕೆ ಮತ್ತೆ ಹೆಚ್ಚಿದೆ ಹಾಗೂ 2021ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ದಾಳಿಗಳನ್ನು ಸಂಘಟಿಸುವ ಸಾಮರ್ಥ್ಯವನ್ನು ಅದು ಮರುಗಳಿಸಬಹುದಾಗಿದೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಘಟಕದ ಮುಖ್ಯಸ್ಥ ಭದ್ರತಾ ಮಂಡಳಿಯನ್ನು ಎಚ್ಚರಿಸಿದ್ದಾರೆ.

ಇಂಥ ದಾಳಿಗಳನ್ನು ವಿಫಲಗೊಳಿಸಲು ಜಗತ್ತು ಸನ್ನದ್ಧಗೊಳ್ಳಬೇಕಾಗಿದೆ ಎಂದು ವಿಶ್ವಸಂಸ್ಥೆಯ ಭಯೋತ್ಪಾದನೆ ನಿಗ್ರಹ ಕಚೇರಿಯ ಅಧೀನ ಮಹಾಕಾರ್ಯದರ್ಶಿ ವ್ಲಾದಿಮಿರ್ ವೊರೊನ್‌ಕೊವ್ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯೊಂದರಲ್ಲಿ ತಿಳಿಸಿದ್ದಾರೆ.

‘‘ಜಾಗತಿಕ ಶಾಂತಿ ಮತ್ತು ಭದ್ರತೆಗೆ ಐಸಿಸ್ ಒಡ್ಡಿರುವ ಬೆದರಿಕೆ ಮತ್ತೆ ಹೆಚ್ಚುತ್ತಿದೆ. ಕೋವಿಡ್-19 ಸಾಂಕ್ರಾಮಿಕ ತಂದಿರುವ ಸಂಕಷ್ಟ ಮತ್ತು ಒಡ್ಡಿರುವ ಸವಾಲುಗಳ ಹೊರತಾಗಿಯೂ ಸದಸ್ಯ ರಾಷ್ಟ್ರಗಳು ಈ ಬೆದರಿಕೆಯನ್ನು ಎದುರಿಸಲು ಸಂಘಟಿತರಾಗಿ ಎಚ್ಚರಿಕೆಯಿಂದಿರಬೇಕು’’ ಎಂದು ಅವರು ತನ್ನ ವರದಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News