ಕೊರೋನ ಸಾಂಕ್ರಾಮಿಕ ನಡುವೆಯೂ 2.59 ಕೋಟಿ ಪ್ರಯಾಣಿಕರನ್ನು ಸ್ವೀಕರಿಸಿದ ದುಬೈ ವಿಮಾನ ನಿಲ್ದಾಣ

Update: 2021-02-15 17:16 GMT

ದುಬೈ (ಯುಎಇ), ಫೆ. 15: ಕೋವಿಡ್-19 ಸಾಂಕ್ರಾಮಿಕ ಸ್ಫೋಟದ ಹೊರತಾಗಿಯೂ, 2020ರಲ್ಲಿ 2.59 ಕೋಟಿ ಪ್ರಯಾಣಿಕರನ್ನು ಸ್ವೀಕರಿಸುವ ಮೂಲಕ ದುಬೈಯ ವಿಮಾನ ನಿಲ್ದಾಣಗಳು ಪ್ರಬಲ ಚೇತರಿಕೆ ತೋರಿಸಿವೆ ಎಂದು ದುಬೈ ವಿಮಾನ ನಿಲ್ದಾಣಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೌಲ್ ಗ್ರಿಫಿತ್ ಸೋಮವಾರ ಹೇಳಿದ್ದಾರೆ. ಭವಿಷ್ಯದಲ್ಲಿ ಈ ವಿಮಾನ ನಿಲ್ದಾಣಗಳ ಚಟುವಟಿಕೆಗಳು ಕೊರೋನ ಪೂರ್ವ ಮಟ್ಟಕ್ಕೆ ಬರುವ ವಿಶ್ವಾಸವಿದೆ ಎಂದಿದ್ದಾರೆ.

‘‘ಪ್ರಯಾಣ ಉದ್ದಿಮೆಯಲ್ಲಿ ಹಿಂದೆಂದೂ ನೋಡದಂಥ ಸವಾಲುಗಳನ್ನು ನಾವು 2020ರಲ್ಲಿ ಎದುರಿಸಿದ್ದೇವೆ. ಈ ಸವಾಲುಗಳ ಹೊರತಾಗಿಯೂ, ಆ ವರ್ಷದ ಕೊನೆಯ ಹೊತ್ತಿಗೆ ನಮ್ಮ ವಿಮಾನ ನಿಲ್ದಾಣಗಳ ಮೂಲಕ 2.59 ಕೋಟಿ ಪ್ರಯಾಣಿಕರು ಹಾದು ಹೋಗಿದ್ದಾರೆ’’ ಎಂದು ಪೌಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News