ದ್ವಿತೀಯ ಟೆಸ್ಟ್: ಭಾರತಕ್ಕೆ ಭರ್ಜರಿ ಜಯ, ಸರಣಿ ಸಮಬಲ

Update: 2021-02-16 07:17 GMT

ಚೆನ್ನೈ: ಆತಿಥೇಯ ಭಾರತ ತಂಡ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 317 ರನ್‍ಗಳಿಂದ ಭರ್ಜರಿ ಜಯ ಸಾಧಿಸಿದ್ದು, 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಈ ಗೆಲುವಿನೊಂದಿಗೆ ವಿರಾಟ್ ಕೊಹ್ಲಿ ನಾಯಕನಾಗಿ ಸತತ ಸೋಲಿನಿಂದ ಹೊರಬಂದರು.

ನಾಲ್ಕನೇ ದಿನವಾದ ಮಂಗಳವಾರ ಗೆಲುವಿಗೆ 482 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 54.2 ಓವರ್ ಗಳಲ್ಲಿ 164 ರನ್ ಗಳಿಸಿ ಆಲೌಟಾಗಿದೆ.

ಇಂಗ್ಲೆಂಡ್ ಪರವಾಗಿ ಆಲ್ ರೌಂಡರ್ ಮೊಯಿನ್ ಅಲಿ(43) ಸರ್ವಾಧಿಕ ಸ್ಕೋರ್ ಗಳಿಸಿದರೆ, ನಾಯಕ ಜೋ ರೂಟ್(33), ಲಾರೆನ್ಸ್(26), ಬನ್ರ್ಸ್ (25) ಎರಡಂಕೆಯ ಸ್ಕೋರ್ ಗಳಿಸಿದರು.

ಭಾರತದ ಬೌಲಿಂಗ್ ವಿಭಾಗದಲ್ಲಿ ಅಕ್ಷರ್ ಪಟೇಲ್(5-60) , ರವಿಚಂದ್ರನ್ ಅಶ್ವಿನ್(3-53) ಹಾಗೂ ಕುಲದೀಪ್ ಯಾದವ್ (2-25) 10 ವಿಕೆಟ್ ಗಳನ್ನು ಹಂಚಿಕೊಂಡಿದ್ದಾರೆ. ಗುಜರಾತ್ ಆಟಗಾರ ಪಟೇಲ್ ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದು ಮಿಂಚಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News