ಕೋವಿಡ್ ಹೆಸರಲ್ಲಿ ದರೋಡೆ ಸಲ್ಲದು

Update: 2021-02-20 04:50 GMT

ಮಾನ್ಯರೇ,

ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಖಾಸಗಿ ಆಸ್ಪತ್ರೆಗಳು ಸರಕಾರಕ್ಕೆ ರೂ. 700 ಕೋಟಿ ಬಿಲ್ ಸಲ್ಲಿಸಿವೆ. ಅದನ್ನು ನೀಡಲು ಸರಕಾರ ಕೂಡ ಸಮ್ಮತಿ ಸೂಚಿಸಿದೆ. ಆದರೆ ಲಾಕ್‌ಡೌನ್ ಸಡಿಲಿಕೆ ಆದ ನಂತರ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡುತ್ತಿಲ್ಲ ಎಂದು ಸಾರ್ವಜನಿಕ ಆರೋಪ ಕೇಳಿ ಬರುತ್ತಿದೆ. ಆದರೆ ಇಷ್ಟೊಂದು ದೊಡ್ಡಪ್ರಮಾಣದ ಬಿಲ್ ಸಲ್ಲಿಸಲು ಹೇಗೆ ಸಾಧ್ಯ ಅನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಅದರಲ್ಲೂ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ರಾಜ್ಯದಲ್ಲಿ ಕೋವಿಡ್ ಪೀಡಿತರಾಗುತ್ತಿರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಜೊತೆಗೆ ಸರಕಾರದ ನಿಯಮಗಳು ಬಹುತೇಕ ಸಡಿಲ ಆಗಿದ್ದು, ರೋಗಿಗಳಿಗೆ ಹೋಂ ಐಸೋಲೇಶನ್‌ಗೆ ಅವಕಾಶ ನೀಡಲಾಗಿದೆ.

ಆದರೆ ಖಾಸಗಿ ಆಸ್ಪತ್ರೆಗಳು ಮಾತ್ರ ತಮ್ಮ ಬಿಲ್ಲಿನ ಮೊತ್ತವನ್ನು ಬೇಕಾಬಿಟ್ಟಿ ಹಾಕಿ ಸಲ್ಲಿಸುತ್ತಿರುವುದು, ಅದನ್ನು ಭರಿಸಲು ಸರಕಾರ ಮುಂದಾಗುತ್ತಿರುವುದು ಖಂಡಿತ ಸರಿಯಲ್ಲ. ಇದರ ಬಗ್ಗೆ ಸೂಕ್ತ ತನಿಖೆಕೈಗೊಳ್ಳಬೇಕಾದ ತುರ್ತು ಇದೆ.

ಕೊರೋನ ಹೆಸರಲ್ಲಿ ಸಾರ್ವಜನಿಕರ ತೆರಿಗೆ ದುಡ್ಡು ಅನಗತ್ಯ ಮತ್ತು ಅಕ್ರಮವಾಗಿ ಖರ್ಚು ಮಾಡಲಾಗುತ್ತಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸರಕಾರದ ನಡೆಯ ಬಗ್ಗೆ ಅಸಮಾಧಾನಗೊಂಡಿರುವ ಸಾರ್ವಜನಿಕರಿಗೆ ಸರಕಾರ ಸರಿಯಾದ ಉತ್ತರ ನೀಡಬೇಕಾಗಿದೆ.

Writer - -ಸುರೇಶ್, ಕೊಪ್ಪಳ

contributor

Editor - -ಸುರೇಶ್, ಕೊಪ್ಪಳ

contributor

Similar News