ಮ್ಯಾನ್ಮಾರ್: ಸೇನಾಡಳಿತದ ವಿರುದ್ಧ ಪ್ರತಿಭಟನೆ ತೀವ್ರ

Update: 2021-02-21 16:01 GMT

  ಯಾಂಗೊನ್,ಫೆ.21: ಮ್ಯಾನ್ಮಾರ್‌ನಲ್ಲಿ ಸೇನಾಕ್ರಾಂತಿಯನ್ನು ವಿರೋಧಿಸಿ ದೇಶಾದ್ಯಂತ ರವಿವಾರ ಪ್ರತಿಭಟನೆಗಳು ಭುಗಿಲೆದ್ದಿವೆ. ಮ್ಯಾನ್ಮಾರ್‌ನ ಎರಡನೆ ಅತಿ ದೊಡ್ಡ ನಗರವಾದ ಯಾಂಗೊನ್‌ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಭದ್ರತಾಪಡೆಗಳು ಇಬ್ಬರನ್ನು ಗುಂಡಿಕ್ಕಿ ಹತ್ಯೆಗೈದಿರುವುದನ್ನು ಖಂಡಿಸಿ ಭಾರೀ ಸಂಖ್ಯೆಯ ಜನರು ರವಿವಾರ ಬೀದಿಗಿಳಿದಿದ್ದಾರೆ.

 ಸೇನಾಕ್ರಾಂತಿಯ ವಿರುದ್ಧ ಫೆಬ್ರವರಿ 9ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಮ್ಯಾ ತ್ವಾರ್ಟ್ ಖೈನ್ ಎಂಬ ಯುವತಿಯ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ರವಿವಾರ ನಡೆಸಲಾಯಿತು. ಸುಮಾರು 1 ಸಾವಿರಕ್ಕೂ ಅಧಿಕ ಮಂದಿ ರವಿವಾರ ಕಾರುಗಳು ಹಾಗೂ ಮೋಟಾರ್‌ಬೈಕ್‌ಗಳಲ್ಲಿ ಆಗಮಿಸಿ ಆಕೆಯ ಮೃತದೇಹವನ್ನು ಇರಿಸಲಾಗಿದ್ದ ಆಸ್ಪತ್ರೆಯ ಆವರಣದಲ್ಲಿ ಜಮಾಯಿಸಿದ್ದರು. ಮೃತದೇಹವನ್ನು ಪಡೆದುಕೊಳ್ಳಲು ಬಂದಿದ್ದ ಯುವತಿಯ ಬಂಧುಗಳಿಗೂ ಪ್ರವೇಶವನ್ನು ನಿರಾಕರಿಸಲಾಯಿತು. ಬೃಹತ್ ಪ್ರತಿಭಟನೆಯ ಆನಂತರ ಆಕೆಯ ಮೃತದೇಹವನ್ನು ಅಧಿಕಾರಿಗಳು ಹಸ್ತಾಂತರಿಸಿದರು. ಆನಂತರ ಪ್ರತಿಭಟನಕಾರರು ಆಕೆಯ ಮೃತದೇಹ ನಗರದ ಮುಖ್ಯರಸ್ತೆಗಳಲ್ಲಿ ಆಕೆಯ ಮೃತದೇಹದ ಅಂತಿಮಯಾತ್ರೆಯನ್ನು ನಡೆಸಿ, ಅಂತ್ಯಸಂಸ್ಕಾರ ನೆರವೇರಿಸಿದರು.

ಮ್ಯಾನ್ಮಾರ್‌ನ ರಾಜಧಾನಿ ಯಾಂಗೊನ್‌ನಲ್ಲಿಯೂ ಶನಿವಾರ ಸಾವಿರಾರು ಜನರು, ಭದ್ರತಾಪಡೆಗಳ ಗುಂಡಿಗೆ ಬಲಿಯಾದ ಯುವತಿಗೆ ಗೌರವ ವ್ಯಕ್ತಪಡಿಸಿ, ಪ್ರದರ್ಶನ ನಡೆಸಿದರು.

 ಶನಿವಾರ ಪೊಲೀಸರ ಗುಂಡಿಗೆ ಇಬ್ಬರು ಪ್ರತಿಭಟನಕಾರರು ಬಲಿಯಾದ ಘಟನೆ ನಡೆದಿರುವ ಮಾಂಡಲಾಯ್ ನಗರದಲ್ಲಿಯೂ ರವಿವಾರ ಭಾರೀ ಪ್ರತಿಭಟನೆ ನಡೆದಿದೆ. ಅಲ್ಲಿ ನಡೆಯುತ್ತಿರುವ ನಾಗರಿಕ ಅಸಹಕಾರ ಚಳವಳಿಯಲ್ಲಿ ರೈಲ್ವೆ ಕಾರ್ಮಿಕರು, ಟ್ರಕ್ ಚಾಲಕರು ಹಾಗೂ ಸರಕಾರಿ ನೌಕರರು ಪಾಲ್ಗೊಂಡಿದ್ದಾರೆ.

ಶನಿವಾರ ಅಸಹಕಾರ ಚಳವಳಿಯಲ್ಲಿ ನಡೆಸುತ್ತಿದ್ದ ಕಾರ್ಮಿಕರಿ, ದೋಣಿಯಲ್ಲಿ ದಾಸ್ತಾನು ಹೇರುವಂತೆ ಪೊಲೀಸರು ಬಲವಂತಪಡಿಸಲು ಯತ್ನಿಸಿದಾಗ ಉಂಟಾದ ಘರ್ಷಣೆಯಲ್ಲಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದರು.

ಮ್ಯಾನ್ಮಾರ್‌ನಲ್ಲಿ ವಿಕಿಪಿಡೀಯಾ ಬಂದ್

  ಮ್ಯಾನ್ಮಾರ್,ಫೆ.21 ಸೇನಾದಂಗೆಯ ಬಳಿಕ ಮ್ಯಾನ್ಮಾರ್‌ನಲ್ಲಿ ಇಂಟರ್‌ನೆಟ್‌ಗೆ ಸೆನ್ಸಾರ್ ಶಿಪ್ ವಿಧಿಸುವ ತನ್ನ ಕಾರ್ಯಾಚರಣೆಯ ಭಾಗವಾಗಿ ಸೇನಾಡಳಿತವು ಅಂತರ್ಜಾಲ ತಾಣದ ವಿಶ್ವಕೋಶವಾದ ವಿಕಿಪಿಡೀಯಾದ ಎಲ್ಲಾ ಭಾಷಾ ಆವೃತ್ತಿಗಳಿಗೂ ನಿಷೇಧ ಹೇರಿದೆ. ಕಳೆದ ಆರು ದಿನಗಲಲ್ಲಿ ದೇಶದ ವಿವಿಧೆಡೆ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆಯೆಂದು ಅಂತಾರ್ಜಾಲದ ಕಣ್ಗಾವಲು ಸೇವಾ ಸಂಸ್ಥೆ ನೆಟ್‌ಬ್ಲಾಕ್ಸ್ ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News