ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ʼಅದಾನಿʼ ಪೆವಿಲಿಯನ್‌ ಹಾಗೂ ʼರಿಲಯನ್ಸ್‌‌ʼ ಎಂಡ್!

Update: 2021-02-24 11:47 GMT

ಅಹ್ಮದಾಬಾದ್:‌ ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿನ ಸರ್ದಾರ್‌ ಪಟೇಲ್‌ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಕ್ರೀಡಾಂಗಣ ಎಂದು ಹೆಸರಿಡಲಾಗಿದೆ. ಕೊನೆಯ ಕ್ಷಣದವರೆಗೂ ಈ ಕುರಿತಾದಂತೆ ಯಾವುದೇ ಮಾಹಿತಿಯೂ ಹೊರ ಬಿದ್ದಿರಲಿಲ್ಲ. ಇದೀಗ ʼನರೇಂದ್ರ ಮೋದಿʼ ಸ್ಟೇಡಿಯಂನಲ್ಲಿ ʼಅದಾನಿ ಪೆವಿಲಿಯನ್‌ʼ ಮತ್ತು ʼರಿಲಯನ್ಸ್‌ ಎಂಡ್‌ʼ ಇರುವುದು ಸದ್ಯ ಸಾಮಾಜಿಕ ತಾಣದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

"ರಾಹುಲ್‌ ಗಾಂಧಿ ಪಾರ್ಲಿಮೆಂಟ್‌ ನಲ್ಲಿ ಹೇಳಿದ್ದ ʼಹಮ್‌ ದೋ ಹಮಾರೆ ದೋʼ ಎಂಬ ಹೇಳಿಕೆಯು ಇಲ್ಲಿ ಅನ್ವರ್ಥವಾಗಿದೆ ಎಂದು ಬಳಕೆದಾರರೋರ್ವರು ವ್ಯಂಗ್ಯವಾಡಿದ್ದಾರೆ. "ಎಲ್ಲವೂ ಆಯಿತು, ಇನ್ನು ಗುಜರಾತ್‌ ಅನ್ನುಮೋದಿಸ್ತಾನ್‌ ಎಂದೂ ರಾಜ್‌ ಕೋಟ್‌ ಅನ್ನು ರಿಲಯನ್ಸ್‌ ಕೋಟ್‌ ಎಂದು ಮರುನಾಮಕರಣ ಮಾಡಲಿಕ್ಕಿದೆಯೇ?", ಇಬ್ಬರು ಬಂಡವಾಳಶಾಹಿಗಳ ಹೆಸರಿರುವ ಸ್ಟೇಡಿಯಂಗೆ ಮೋದಿ ಹೆಸರಿಟ್ಟದ್ದು ಒಳ್ಳೆಯದಾಯಿತು, ಇಲ್ಲವಾದಲ್ಲಿ ಸರ್ದಾರ್‌ ಪಟೇಲರಿಗೆ ಅವಮಾನವಾಗುತ್ತಿತ್ತು." ಎಂದು ಬಳಕೆದಾರರು ಟ್ವೀಟಿಸಿದ್ದಾರೆ.

"1933 ನಲ್ಲಿ ಸ್ಟಟ್ಗಾರ್ಟ್‌ ನಲ್ಲಿದ್ದ ಸ್ಟೇಡಿಯಂಗೆ ಹಿಟ್ಲರ್‌ ತನ್ನದೇ ಹೆಸರಿಟ್ಟಿದ್ದ. ಆದರೆ ಮಹಾಯುದ್ಧದ ಬಳಿಕ ಆ ಹೆಸರನ್ನು ಬದಲಾಯಿಸಲಾಯಿತು. ನರೇಂದ್ರ ಮೋದಿ ಸರ್ದಾರ್‌ ಪಟೇಲ್‌ ರನ್ನು ಅವಮಾನಿಸಿದ್ದಾರೆ ಎಂದು ಬಳಕೆದಾರರೋರ್ವರು ಟ್ವೀಟಿಸಿದ್ದಾರೆ. "ಸರ್ದಾರ್‌ ಪಟೇಲರು ಆರೆಸ್ಸೆಸ್‌ ಅನ್ನು ನಿಷೇಧಿಸಿದ್ದರಿಂದ ಅವರ ಮೇಲೆ ಈ ರೀತಿಯಾಗಿ ಸೇಡು ತೀರಿಸುತ್ತಿದ್ದಾರೆ." "ಎಲ್ಲವನ್ನೂ ಬದಲಾಯಿಸಿ ಮುಗಿಯಿತು. ಇನ್ನು ಸರ್ದಾರ್‌ ಪಟೇಲರ ಪ್ರತಿಮೆಗೆ ಮೋದಿಯ ಮುಖವನ್ನಿಡುವುದೊಂದೇ ಬಾಕಿ ಎಂದು ಹಲವರು ಟ್ವೀಟ್ ಮಾಡಿದ್ದಾರೆ.

Narendra Modi Stadium actually has a Reliance end and Adani end

Posted by Dhruv Rathee on Wednesday, 24 February 2021

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News