100 ಟೆಸ್ಟ್ ಆಡಿದ ಭಾರತದ ಎರಡನೇ ವೇಗದ ಬೌಲರ್ ಎನಿಸಿಕೊಂಡ ಇಶಾಂತ್ ಶರ್ಮಾ

Update: 2021-02-24 12:44 GMT

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ ಬುಧವಾರ ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಿಂಕ್ ಚೆಂಡಿನಲ್ಲಿ ಮೊದಲ ಓವರ್ ಎಸೆದಿರುವ ಇಶಾಂತ್ ಶರ್ಮಾ 100 ಟೆಸ್ಟ್ ಪಂದ್ಯಗಳನ್ನಾಡಿದ ಭಾರತದ ಎರಡನೇ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇಶಾಂತ್ ಈ ಮೈಲುಗಲ್ಲನ್ನು ತಲುಪಿದ ಭಾರತದ ನಾಲ್ಕನೇ ಬೌಲರ್ ಎಂಬ ಕೀರ್ತಿಗೂ ಭಾಜನರಾದರು. ದಿಲ್ಲಿ ವೇಗದ ಬೌಲರ್ ಇಶಾಂತ್ ಮಾಜಿ ನಾಯಕ ಕಪಿಲ್ ದೇವ್ ಬಳಿಕ 100 ಪಂದ್ಯವನ್ನಾಡಿರುವ ಭಾರತದ ಎರಡನೇ ವೇಗದ ಬೌಲರ್ ಎನಿಸಿಕೊಂಡಿದ್ದಾರೆ.

ಮಾಜಿ ನಾಯಕ ಅನಿಲ್ ಕುಂಬ್ಳೆ(132), ಕಪಿಲ್ ದೇವ್(131) ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ (103)ಭಾರತದ ಪರ 100ಕ್ಕೂ ಅಧಿಕ ಪಂದ್ಯಗಳನ್ನಾಡಿದ್ದಾರೆ.

ಇಶಾಂತ್ ಶರ್ಮಾ ಬುಧವಾರ ಆರಂಭವಾದ ಮೂರನೇ ಟೆಸ್ಟ್ ನ 2ನೇ ಓವರ್ ನಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮನ್ ಡಾಮ್ ಸಿಬ್ಲಿ ಅವರನ್ನು ಔಟ್ ಮಾಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News