ರವಿಚಂದ್ರನ್ ಅಶ್ವಿನ್‌ಗೆ 400ನೇ ವಿಕೆಟ್

Update: 2021-02-26 05:45 GMT

ಅಹಮದಾಬಾದ್: ಭಾರತದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗುರುವಾರ ಟೆಸ್ಟ್ ಕ್ರಿಕೆಟ್‌ನಲ್ಲಿ 400 ವಿಕೆಟ್ ಪಡೆದ ಭಾರತದ ನಾಲ್ಕನೇ ಮತ್ತು ವಿಶ್ವದ ಆರನೇ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧ ಡೇ ನೈಟ್ ಮೂರನೇ ಟೆಸ್ಟ್‌ನ ಎರಡನೇ ದಿನವಾಗಿರುವ ಗುರುವಾರ ಅಶ್ವಿನ್ ಅವರು ಜೋಫ್ರಾ ಆರ್ಚರ್ ವಿಕೆಟ್ ಪಡೆೆಯುವುದರೊಂದಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 400ನೇ ವಿಕೆಟ್ ಪಡೆದ ಸಾಧನೆ ಮಾಡಿದರು.

 ತನ್ನ 77ನೇ ಟೆಸ್ಟ್ ಆಡಿದ 34ರ ಹರೆಯದ ಆಫ್ ಸ್ಪಿನ್ನರ್ ಅಶ್ವಿನ್ 400 ವಿಕೆಟ್ ಪೂರೈಸಿದ ವಿಶ್ವದ 16ನೇ ಬೌಲರ್ ಎನಿಸಿಕೊಂಡಿದ್ದಾರೆ.

ಮಾಜಿ ನಾಯಕ ಅನಿಲ್ ಕುಂಬ್ಳೆ (619), ಕಪಿಲ್ ದೇವ್, (434), ಹರ್ಭಜನ್ ಸಿಂಗ್ (417) 400 ಟೆಸ್ಟ್ ವಿಕೆಟ್ ಪಡೆದ ಭಾರತದ ಬೌಲರ್‌ಗಳು.

 72ನೇ ಟೆಸ್ಟ್‌ನಲ್ಲಿ ಶ್ರೀಲಂಕಾದ ಶ್ರೇಷ್ಠ ಮುತ್ತಯ್ಯ ಮುರಳೀಧರನ್ 400 ವಿಕೆಟ್‌ಗಳ ಮೈಲುಗಲ್ಲು ತಲುಪಿದ್ದರು. ಆ ಬಳಿಕ ವೇಗವಾಗಿ ಈ ಮೈಲಿಗಲ್ಲು ತಲುಪಿದ ವಿಶ್ವದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.

ಅಶ್ವಿನ್‌ಮೊದಲಇನಿಂಗ್ಸ್‌ನಲ್ಲಿ26ಕ್ಕೆ 3 ಮತ್ತು48ಕ್ಕೆ 4 ವಿಕೆಟ್‌ಸೇರಿದಂತೆಈ ಟೆಸ್ಟ್‌ನಲ್ಲಿ7 ವಿಕೆಟ್‌ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News