ಐದು ರಾಜ್ಯಗಳ ಚುನಾವಣೆ: ಇಂದು ಸಂಜೆ ವೇಳಾಪಟ್ಟಿ ಪ್ರಕಟ

Update: 2021-02-26 06:59 GMT

ಹೊಸದಿಲ್ಲಿ:ತಮಿಳುನಾಡು, ಕೇರಳ, ಪಶ್ಚಿಮಬಂಗಾಳ, ಅಸ್ಸಾಂ ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಚುನಾವಣಾ ಆಯೋಗ ಇಂದು ಸಂಜೆ 4:30ರ ಸುಮಾರಿಗೆ ವೇಳಾಪಟ್ಟಿಯನ್ನು  ಪ್ರಕಟಿಸಲಿದೆ.

ಈ ರಾಜ್ಯಗಳಲ್ಲಿ ಎಪ್ರಿಲ್-ಮೇ ನಲ್ಲಿ ಚುನಾವಣೆ ಎದುರಾಗಲಿದೆ.

ಬಿಹಾರ ಚುನಾವಣೆಯ ಬಳಿಕ ಕೊರೋನ ಸಮಯದಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ.

ಪಶ್ಚಿಮಬಂಗಾಳದ 294 ಸೀಟುಗಳು, ತಮಿಳುನಾಡಿನ 234 ಸೀಟುಗಳು, ಕೇರಳದ 140 ಸೀಟುಗಳು, ಅಸ್ಸಾಂನ 126 ಸೀಟುಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ಸೀಟುಗಳಲ್ಲಿ ಚುನಾವಣೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News