ಸಿರಿಯ: ಇರಾನ್ ಬೆಂಬಲಿತ ಗುಂಪುಗಳ ಮೇಲೆ ಅವೆುರಿಕ ದಾಳಿ

Update: 2021-02-26 16:48 GMT
ಸಾಂದರ್ಭಿಕ ಚಿತ್ರ

ವಾಶಿಂಗ್ಟನ್, ಫೆ. 26: ಸಿರಿಯದ ಪೂರ್ವ ಭಾಗದಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳು ಬಳಸುವ ನೆಲೆಗಳ ಮೇಲೆ ಅಮೆರಿಕ ಸೇನೆ ಗುರುವಾರ ದಾಳಿ ನಡೆಸಿದೆ. ಇರಾಕ್‌ನಲ್ಲಿರುವ ಅಮೆರಿಕ ಸೇನೆಯ ನೆಲೆಗಳ ಮೇಲೆ ಇತ್ತೀಚೆಗೆ ನಡೆದ ರಾಕೆಟ್ ದಾಳಿಗಳಿಗೆ ಅಮೆರಿಕ ಈ ಮೂಲಕ ಎಚ್ಚರಿಕೆಯನ್ನು ನೀಡಿದೆ.

ಐದು ವಾರಗಳ ಹಿಂದೆ ಬೈಡನ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇರಾಕ್ ಬೆಂಬಲಿತ ಗುಂಪುಗಳ ಮೇಲೆ ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿರುವುದು ಇದೇ ಮೊದಲ ಬಾರಿಯಾಗಿದೆ.

ಇರಾಕ್ ಬೆಂಬಲಿತ ಗುಂಪುಗಳು ಬಳಸುತ್ತಿರುವ ಸಿರಿಯ-ಇರಾಕ್ ಗಡಿ ನಿಯಂತ್ರಣ ಕೇಂದ್ರದ ಮೇಲೆ ವಾಯುದಾಳಿ ನಡೆಸಲಾಗಿದ್ದು, ಹಲವು ನೆಲೆಗಳನ್ನು ನಾಶಪಡಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ತಿಳಿಸಿದೆ.

‘‘ಇರಾಕ್‌ನಲ್ಲಿರುವ ಅಮೆರಿಕ ಮತ್ತು ಮಿತ್ರ ದೇಶಗಳ ಸಿಬ್ಬಂದಿ ಮೇಲೆ ನಡೆದ ದಾಳಿಗಳು ಹಾಗೂ ಆ ಸಿಬ್ಬಂದಿಗಳು ಈಗಲೂ ಎದುರಿಸುತ್ತಿರುವ ಬೆದರಿಕೆಗಳಿಗೆ ಪ್ರತಿಯಾಗಿ ದಾಳಿ ನಡೆಸಲಾಗಿದೆ’’ ಎಂದು ಅವೆುರಿಕ ರಕ್ಷಣಾ ಇಲಾಖೆಯ ವಕ್ತಾರ ಜಾನ್ ಕರ್ಬಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ದಾಳಿಯಲ್ಲಿ ಸಾವು-ನೋವು ಸಂಭವಿಸಿದೆಯೇ ಎಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಲಿಲ್ಲ.

ಆದರೆ, ಇರಾಕ್‌ನಿಂದ ಮದ್ದುಗುಂಡುಗಳನ್ನು ಹೊತ್ತು ತರುತ್ತಿದ್ದ ಮೂರು ಟ್ರಕ್‌ಗಳ ಮೇಲೆ ಸಿರಿಯದ ಬುಕಮಲ್ ನಗರದ ಸಮೀಪ ನಡೆದ ದಾಳಿಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ ಎಂದು ಸಿರಿಯ ಮಾನವಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News