ಬಡ ದೇಶಗಳಿಗೆ ಲಸಿಕೆ ಲಭ್ಯತೆಯಲ್ಲಿ ಹೆಚ್ಚಳ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕಾರ

Update: 2021-02-27 15:28 GMT

ವಿಶ್ವಸಂಸ್ಥೆ, ಫೆ. 27: ಸಂಘರ್ಷಪೀಡಿತ ಅಥವಾ ಬಡ ದೇಶಗಳಲ್ಲಿ ಕೋವಿಡ್-19 ಲಸಿಕೆಗಳ ಲಭ್ಯತೆಯನ್ನು ಹೆಚ್ಚಿಸಬೇಕು ಎಂಬ ನಿರ್ಣಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಶುಕ್ರವಾರ ಸರ್ವಾನುಮತದಿಂದ ಅಂಗೀಕರಿಸಿದೆ.

ಅಪರೂಪದ ವಿದ್ಯಮಾನವೊಂದರಲ್ಲಿ, ಭದ್ರತಾ ಮಂಡಳಿಯ ಎಲ್ಲ 15 ಸದಸ್ಯರು ನಿರ್ಣಯವನ್ನು ಸಹಪ್ರಾಯೋಜಿಸಿದ್ದಾರೆ ಎಂದು ರಾಜತಾಂತ್ರಿಕರು ಹೇಳಿದ್ದಾರೆ.

 ‘‘ನಾವೆಲ್ಲರೂ ಒಂದೇ ಬೆದರಿಕೆ ಮತ್ತು ಒಂದೇ ಸಾಂಕ್ರಾಮಿಕವನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಅಂತರ್‌ರಾಷ್ಟ್ರೀಯ ಸಹಕಾರ ಮತ್ತು ಬಹುಪಕ್ಷೀಯ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ’’ ಎಂದು ಓರ್ವ ರಾಜತಾಂತ್ರಿಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News