ಬೀಡಿ ಉದ್ಯಮಿ ಟಿ.ಪಿ.ಸುಲೈಮಾನ್

Update: 2021-03-03 04:53 GMT

ಸುಳ್ಯ, ಮಾ3: ಸುಳ್ಯದ ಬೀಡಿ ಉದ್ಯಮಿ ಟಿ.ಪಿ.ಸುಲೈಮಾನ್ ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 6೦ ವರ್ಷ ವಯಸ್ಸಾಗಿತ್ತು.

ಮಂಡೆಕೋಲುವಿನಲ್ಲಿ ಬೀಡಿ ಬ್ರಾಂಚ್ ಹೋಂದಿರುವ ಅವರು ಇಂದು ಬೀಡಿ ಖರೀದಿಸಿ ಚಹ ಕುಡಿಯುತ್ತಿದ್ದ ವೇಳೆ ಹಠಾತ್ ಕುಸಿದುಬಿದ್ದು ಮೃತಪಟ್ಟಿದ್ದಾರೆ.

  ಸುಳ್ಯ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷರೂ ಆಗಿರುವ ಅವರು ಟಿ.ಪಿ.ಸುಲೈಮಾನ್ ಸುಳ್ಯದ ಗಾಂಧಿನಗರ ನಿವಾಸಿಯಾಗಿದ್ದು, ಸುಳ್ಯ ಸಿ.ಎ. ಬ್ಯಾಂಕ್ ಬಿಲ್ಡಿಂಗ್‌ನಲ್ಲಿ ಕಚೇರಿ ಹೊಂದಿದ್ದರು. ಉತ್ತಮ ಸಂಘಟಕರಾಗಿದ್ದು, ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ