ದಕ್ಷಿಣ ಸುಡಾನ್: ವಿಮಾನ ಪತನ; ಕನಿಷ್ಠ 10 ಸಾವು

Update: 2021-03-03 16:59 GMT

ಜುಬ (ದಕ್ಷಿಣ ಸುಡಾನ್), ಮಾ. 3: ದಕ್ಷಿಣ ಸುಡಾನ್ ಜಾಂಗ್‌ಲೈ ರಾಜ್ಯದಲ್ಲಿ ವಿಮಾನವೊಂದು ರನ್‌ವೇಯಲ್ಲಿ ಪತನಗೊಂಡಿದ್ದು,  ಇಬ್ಬರು ಪೈಲಟ್‌ಗಳು ಸೇರಿದಂತೆ ವಿಮಾನದಲ್ಲಿದ್ದ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ ಎಂದು ವಲಯದ ಗವರ್ನರ್ ಹೇಳಿದ್ದಾರೆ.

ಮಂಗಳವಾರ ಮಧ್ಯಾಹ್ನ ಪಿಯರಿ ವಿಮಾನ ನಿಲ್ದಾಣದಿಂದ ಜುಬಕ್ಕೆ ಹಾರಾಟ ನಡೆಸುತ್ತಿದ್ದಾಗ ವಾಣಿಜ್ಯ ವಿಮಾನ ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲರೂ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.

ವಿಮಾನದಲ್ಲಿ ಸುಮಾರು 24 ಮಂದಿ ಇದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News