ಟೋಕಿಯೊ ಒಲಿಂಪಿಕ್ಸ್ ಗೆ ವಿದೇಶಿ ಪ್ರೇಕ್ಷಕರನ್ನು ನಿಷೇಧಿಸಲು ಜಪಾನ್ ಚಿಂತನೆ

Update: 2021-03-03 17:54 GMT

ಟೋಕಿಯೊ, ಮಾ.3: ಕೊರೋನ ವೈರಸ್ ಸೋಂಕು ಕಾರಣದಿಂದಾಗಿ ಬೇಸಿಗೆ ಒಲಿಂಪಿಕ್ಸ್‌ಗೆ ವಿದೇಶಿ ಪ್ರೇಕ್ಷಕ ರಿಗೆ ನಿಷೇಧ ಹೇರುವ ನಿಟ್ಟಿನಲ್ಲಿ ಜಪಾನ್ ಸರಕಾರ ಯೋಜಿಸುತ್ತಿದೆ ಎಂದು ವರದಿಯೊಂದು ಬುಧವಾರ ತಿಳಿಸಿದೆ. ಕೋವಿಡ್-19 ಸೋಂಕು ಹರಡುವಿಕೆ ಇನ್ನೂ ಹತೋಟಿಗೆ ಬಾರದಿರುವ ಕಾರಣದಿಂದಾಗಿ ಕ್ರೀಡಾಕೂಟವನ್ನು ನಡೆ ಸುವುದಕ್ಕೆ ಅನೇಕ ಜಪಾನಿಯರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಅಂತರ್‌ರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಮತ್ತು ಸಂಘಟಕರು ಮಾತುಕತೆ ನಡೆಸಿದ ನಂತರ ಈ ತಿಂಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆಂದು ಮೈನಿಚಿ ಪತ್ರಿಕೆ ತಿಳಿಸಿದೆ.

 ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಕಳೆದ ವರ್ಷ ಮುಂದೂಡಲಾಗಿತ್ತು. ಮುಂದಿನ ಜುಲೈ 23ರಿಂದ ನಡೆಸುವ ಬಗ್ಗೆ ಮರು ನಿಗದಿಪಡಿಸಲಾಗಿದೆ.

   ಟೋಕಿಯೊ ಮೆಟ್ರೋ ಪಾಲಿಟನ್ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿ ಯಲ್ಲಿದೆ. ದೊಡ್ಡ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರೇಕ್ಷ ಕರು ಹೆಚ್ಚಿನ ಸಂಖ್ಯೆೆಯಲ್ಲಿ ಸೇರುವುದಕ್ಕೆ ನಿರ್ಬಂಧ ಜಾರಿಗೊಳಿಸಲಾಗಿದೆ. ಕಳೆದ ತಿಂಗಳು ಪ್ರಕಟವಾದ ರಾಯಿಟರ್ಸ್ ಸಮೀಕ್ಷೆಯಲ್ಲಿ ಸುಮಾರು ಮೂರನೇ ಎರಡರಷ್ಟು ಜಪಾನಿನ ಕಂಪೆನಿಗಳು ಸಹ ಕ್ರೀಡಾಕೂಟವನ್ನು ಆಯೋಜಿಸುವುದನ್ನು ವಿರೋಧಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News