3ನೇ ಟ್ವೆಂಟಿ -20ಪಂದ್ಯ: ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ಜಯ

Update: 2021-03-03 18:25 GMT

ವೆಲ್ಲಿಂಗ್ಟನ್, ಮಾ.3:ವೆಲ್ಲಿಂಗ್ಟನ್ ಪ್ರಾದೇಶಿಕ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೂರನೇ ಟ್ವೆಂಟಿ-20 ಪಂದ್ಯದಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು 64 ರನ್‌ಗಳಿಂದ ಆಸ್ಟ್ರೇಲಿಯ ಮಣಿಸಿದೆ.

ಸ್ಪಿನ್ನರ್ ಆ್ಯಸ್ಟನ್ ಅಗರ್ 4 ಓವರ್‌ಗಳಲ್ಲಿ 30ಕ್ಕೆ 6 ವಿಕೆಟ್ ಉಡಾಯಿಸುವ ಮೂಲಕ ಆಸ್ಟ್ರೇಲಿಯದ ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲಿಂಗ್ ಮೂಲಕ ದಾಖಲೆ ನಿರ್ಮಿಸಿದರು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಆಸ್ಟ್ರೇಲಿಯ ಮೊದಲ ಜಯ ದಾಖಲಿಸಿದೆ.

ಆಸ್ಟ್ರೇಲಿಯ ನಾಯಕ ಆ್ಯರನ್ ಫಿಂಚ್ 69 ರನ್, ಮ್ಯಾಕ್ಸ್‌ವೆಲ್ 70ರನ್ ನೆರವಿನಲ್ಲಿ ಆಸ್ಟ್ರೇಲಿಯ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟದಲ್ಲಿ 208 ರನ್ ಗಳಿಸಿತ್ತು. ಗೆಲುವಿಗೆ 209 ರನ್‌ಗಳ ನೆರವು ಪಡೆದ ನ್ಯೂಝಿಲ್ಯಾಂಡ್ 17.1 ಓವರ್‌ಗಳಲ್ಲಿ 144 ರನ್‌ಗಳಿಗೆ ಆಲೌಟಾಗಿದೆ.

ಆರಂಭಿಕ ಬ್ಯಾಟ್ಸ್‌ಮನ್ ಮಾರ್ಟಿನ್ ಗಪ್ಟಿಲ್ (43) ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರು.

ಟಾಸ್ ಜಯಿಸಿದ ನ್ಯೂಝಿಲ್ಯಾಂಡ್ ತಂಡವು ಆಸ್ಟ್ರೇಲಿಯವನ್ನು ಬ್ಯಾಟಿಂಗ್‌ಗೆ ಇಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News