ರೈತರ ಪರ ಧ್ವನಿ ಎತ್ತುವವರನ್ನು ಗುರಿ ಮಾಡಲು ಮೋದಿ ಸರಕಾರದಿಂದ ಕೇಂದ್ರ ಸಂಸ್ಥೆಗಳ ಬಳಕೆ: ರಾಹುಲ್ ಗಾಂಧಿ

Update: 2021-03-04 12:24 GMT

ಹೊಸದಿಲ್ಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲವಾಗಿ ಧ್ವನಿ ಎತ್ತುವ ಜನರನ್ನು ಗುರಿ ಮಾಡಲು ನರೇಂದ್ರ ಮೋದಿ ಸರಕಾರವು ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.

ತೆರಿಗೆ ವಂಚಿಸಿದ ಆರೋಪದಲ್ಲಿ ಆದಾಯ ತೆರಿಗೆ ಇಲಾಖೆ ಯು ಬಾಲಿವುಡ್ ನಟಿ ತಾಪ್ಸಿ  ಪೊನ್ನು ಹಾಗೂ ಚಿತ್ರ ನಿರ್ಮಾಪಕರಾದ ಅನುರಾಗ್ ಕಶ್ಯಪ್, ವಿಕ್ರಮಾದಿತ್ಯ ಮೋಟ್ವಾನ್, ವಿಕಾಸ್ ಬಾಲ್ ಹಾಗೂ ಮಧು ಮಂಟೆನಾಗೆ ಸೇರಿರುವ ನಿವಾಸಗಳಿಗೆ ದಾಳಿ ನಡೆಸಿದ ಮರುದಿನ ಕಾಂಗ್ರೆಸ್ ನಾಯಕ ಈ ಹೇಳಿಕೆ ನೀಡಿದ್ದಾರೆ.

ಕೇಂದ್ರ ಸರಕಾರವು ಆದಾಯ ತೆರಿಗೆ ಇಲಾಖೆಯನ್ನು ತನ್ನಿಷ್ಟದಂತೆ ಕುಣಿಸುತ್ತಿದೆ. ರೈತರನ್ನು ಬೆಂಬಲಿಸುತ್ತಿರುವ ಜನರ ಮೇಲೆ ಕೇಂದ್ರ ಹಾಗೂ ಅದರ ನಿಯಂತ್ರಣದಲ್ಲಿರುವ ಸಂಸ್ಥೆಗಳು ಗುರಿ ಮಾಡುತ್ತಿವೆ ಎಂದು ರಾಹುಲ್ ಹೇಳಿದರು.

ಬಿಜೆಪಿ ನೇತೃತ್ವದ ಸರಕಾರವನ್ನು ಟೀಕಿಸುವ ಹಿಂದಿ ಟ್ವೀಟ್ ಜೊತೆಗೆ “ಮೋದಿರೈಡ್ಸ್ ಪ್ರೊಫಾರ್ಮರ್ಸ್’ಹ್ಯಾಶ್ ಟ್ಯಾಗನ್ನು ಬಳಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News