ಈ ರಾಜ್ಯದಲ್ಲಿ ಲಸಿಕೆ ಸ್ವೀಕರಿಸಿದ 8 ಮಂದಿಗೆ ಕೊರೋನ ಪಾಸಿಟಿವ್

Update: 2021-03-19 07:58 GMT

ಚಂಡೀಗಡ: ಜನವರಿಯಲ್ಲಿ ದೇಶದಲ್ಲಿ ಲಸಿಕೆ ನೀಡಿಕೆ ಅಭಿಯಾನ ಆರಂಭವಾದ ಬಳಿಕ ಪಂಜಾಬ್ ನಲ್ಲಿ ಲಸಿಕೆ ಸ್ವೀಕರಿಸಿದ್ದ 8 ಮಂದಿಗೆ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಅಂಕಿ-ಅಂಶದಿಂದ ತಿಳಿದುಬಂದಿದೆ.

ಲಸಿಕೆ ಪಡೆದಿರುವ 8 ಮಂದಿಯ ಪೈಕಿ ಆರು ಮಂದಿಗೆ ಮೊದಲ ಡೋಸ್ ಸ್ವೀಕರಿಸಿದ ಬಳಿಕ ಕೊರೋನ ಸೋಂಕು ತಗಲಿದೆ. ಇನ್ನಿಬ್ಬರಿಗೆ ಎರಡನೇ ಡೋಸ್ ತೆಗೆದುಕೊಂಡ ಬಳಿಕ ಕೊರೋನ ಪಾಸಿಟಿವ್ ಆಗಿದೆ. ಆದರೆ, ಎರಡನೇ ಡೋಸ್ ತೆಗೆದುಕೊಂಡವರು 14 ದಿನಗಳ ಅವಧಿಯನ್ನು ಇನ್ನಷ್ಟೇ ಪೂರೈಸಬೇಕಾಗಿದೆ. ದೇಹದಲ್ಲಿ ಪ್ರತಿಕಾಯದ ಅಭಿವೃದ್ದಿಗೆ 14 ದಿನಗಳ ಅಗತ್ಯವಿದೆ.

ಲಸಿಕೆಯ ಮೊದಲ ಡೋಸ್ ಸ್ವೀಕರಸಿದ ಬಳಿಕ ಆರು ಮಂದಿಗೆ ಕೊರೋನ ಪಾಸಿಟಿವ್ ಆಗಿದೆ.  ಮೊಹಾಲಿಯಿಂದ ಎರಡು, ಪಟಿಯಾಲ, ಟರ್ನ್ ಟರನ್, ಲುಧಿಯಾನ ಹಾಗೂ ಸಂಗ್ರೂರ್ ನಿಂದ ತಲಾ ಒಂದು ಪ್ರಕರಣ ವರದಿಯಾಗಿದೆ. ಎರಡನೇ ಡೋಸ್ ಸ್ವೀಕರಿಸಿದ ಬಳಿಕ ಇಬ್ಬರಿಗೆ ಪಾಸಿಟಿವ್ ಆಗಿದ್ದು, ಈ ಇಬ್ಬರು ಲುಧಿಯಾನ ಹಾಗೂ ಮೊಹಾಲಿ ನಿವಾಸಿಯಾಗಿದ್ದಾರೆ. ಎಲ್ಲರಿಗೂ ಕೋವಿಶೀಲ್ಡ್ ಲಸಿಕೆಯನ್ನು ಹಾಕಲಾಗಿತ್ತು ಎಂದು ಪಂಜಾಬಿನ ಕೋವಿಡ-19 ನೋಡಲ್ ಅಧಿಕಾರಿ ಡಾ.ರಾಜೇಶ್ ಭಾಸ್ಕರ್ ತಿಳಿಸಿದ್ದಾರೆ.

ಡಾ.ಭಾಸ್ಕರ್ ಗೆ ಎರಡನೇ ಡೋಸ್ ಸ್ವೀಕರಿಸಿದ ಬಳಿಕ ಕೊರೋನ ವೈರಸ್ ಕಾಣಿಸಿಕೊಂಡಿತ್ತು.

ನಾನು ಎರಡನೇ ಡೋಸ್ ಸ್ವೀಕರಿಸಿ ಒಂದು ವಾರ ಕಳೆದಿದೆ. ಎರಡನೇ ಡೋಸ್ ಸ್ವೀಕರಿಸಿದ ಬಳಿಕ ಪ್ರತಿಕಾಯಗಳು ಅಭಿವೃದ್ದಿಯಾಗಲು ಕನಿಷ್ಠ 14 ದಿನಗಳ ಅವಧಿ ಬೇಕಾಗುತ್ತದೆ. ಡೋಸ್-2 ಸ್ವೀಕರಿಸಿದ 14 ದಿನಗಳ ಬಳಿಕ ವ್ಯಕ್ತಿಗೆ ಪಾಸಿಟಿವ್ ಆಗಿರುವ ಕೇಸ್ ಗಳು ಇನ್ನೂ ವರದಿಯಾಗಿಲ್ಲ ಎಂದು ಡಾ.ಭಾಸ್ಕರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News