ಚೊಚ್ಚಲ ಪಂದ್ಯ ಆಡುವ ಅವಕಾಶ ಪಡೆದ ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ

Update: 2021-03-23 08:03 GMT
ಪ್ರಸಿದ್ಧ ಕೃಷ್ಣ

ಪುಣೆ: ಭಾರತ-ಇಂಗ್ಲೆಂಡ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಮಂಗಳವಾರ ಇಲ್ಲಿ ನಡೆಯಲಿದ್ದು, ಟಾಸ್ ಜಯಿಸಿದ ಇಂಗ್ಲೆಂಡ್ ನಾಯಕ ಇಯಾನ್ ಮೊರ್ಗನ್  ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಕರ್ನಾಟಕದ ವೇಗದ ಬೌಲರ್ ಪ್ರಸಿದ್ಧ ಕೃಷ್ಣ ಹಾಗೂ ಗುಜರಾತ್ ನ ಆಲ್ ರೌಂಡರ್ ಕೃನಾಲ್ ಪಾಂಡ್ಯ ಇದೇ ಮೊದಲ ಬಾರಿ ಏಕದಿನ ಕ್ಯಾಪ್ ಧರಿಸಿದರು.

ಪುಣೆಯ ಸ್ಟೇಡಿಯಂನಲ್ಲಿ ರನ್ ಹೊಳೆ ಹರಿಯುವ ನಿರೀಕ್ಷೆ ಇದೆ. 2017ರ ಜನವರಿ 15ರಂದು ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಒಟ್ಟು 706 ರನ್ ಹರಿದುಬಂದಿತ್ತು. ಭಾರತವು 7 ವಿಕೆಟ್ ಗೆ 356 ರನ್ ಗಳಿಸಿದ್ದರೆ, ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ 7 ವಿಕೆಟ್ ಗೆ 350 ರನ್ ಗಳಿಸಿತ್ತು.

ಏಕದಿನ ಕ್ರಿಕೆಟಿನ ಹೆಡ್ ಟು ಹೆಡ್ ದಾಖಲೆಯಲ್ಲಿ ಭಾರತವು ಇಂಗ್ಲೆಂಡ್ ಗಿಂತ ಮುಂದಿದೆ. ಭಾರತವು 53ರಲ್ಲಿ ಜಯ ಸಾಧಿಸಿದ್ದರೆ, ಇಂಗ್ಲೆಂಡ್ 42ರಲ್ಲಿ ಗೆಲುವು ಪಡೆದಿದೆ.
ವಿರಾಟ್ ಕೊಹ್ಲಿ ಪುಣೆಯಲ್ಲಿ ನಡೆದಿದ್ದ ಏಕದಿನ ಕ್ರಿಕೆಟ್ ನಲ್ಲಿ ಎರಡು ಬಾರಿ ಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್ ಮನ್. 2017ರಲ್ಲಿ ಇಂಗ್ಲೆಂಡ್(122) ಹಾಗೂ 2018ರಲ್ಲಿ ವೆಸ್ಟ್ ಇಂಡೀಸ್(107) ವಿರುದ್ಧ  ಶತಕ ಸಿಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News