ಚೊಚ್ಚಲ ಏಕದಿನ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಕೃನಾಲ್ ಪಾಂಡ್ಯ

Update: 2021-03-23 14:26 GMT

ಹೊಸದಿಲ್ಲಿ: ಕೃನಾಲ್ ಪಾಂಡ್ಯ ಚೊಚ್ಚಲ ಏಕದಿನ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಸಿಡಿಸಿದ ಸಾಧನೆ ಮಾಡಿದರು. ಇಂಗ್ಲೆಂಡ್ ವಿರುದ್ಧದ ಪುಣೆಯಲ್ಲಿ ಮಂಗಳವಾರ ನಡೆದಿರುವ ಮೊದಲ ಏಕದಿನ ಪಂದ್ಯದಲ್ಲಿ ಪಾಂಡ್ಯ ಈ ದಾಖಲೆ ನಿರ್ಮಿಸಿದರು.

ಪಾಂಡ್ಯ ಕೇವಲ 26  ಎಸೆತಗಳಲ್ಲಿ 50 ರನ್ ಪೂರೈಸಿದರು. 31 ಎಸೆತಗಳಲ್ಲಿ ಔಟಾಗದೆ 58 ರನ್ ಗಳಿಸಿದರು. ಇದರಲ್ಲಿ 7 ಬೌಂಡರಿ, 2 ಸಿಕ್ಸರ್ ಗಳಿದ್ದವು.

ಪಾಂಡ್ಯ 50 ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಪಂದ್ಯದಲ್ಲಿ 50 ರನ್ ಗಳಿಸಿದ ಭಾರತದ 14ನೇ ಆಟಗಾರ ಹಾಗೂ 50ಕ್ಕೂ ಅಧಿಕ ರನ್ ಗಳಿಸಿದ 15ನೇ ಆಟಗಾರನಾಗಿದ್ದಾರೆ.

ಇನಿಂಗ್ಸ್ ಅಂತ್ಯದಲ್ಲಿ ಅಬ್ಬರಿಸಿದ ಕೃನಾಲ್ ಪಾಂಡ್ಯ ಅವರು ರಾಹುಲ್ ಗೆ(62,43 ಎಸೆತ)ಉತ್ತಮ ಸಾಥ್ ನೀಡಿದರು.

ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡಿದ್ದ ಕೃನಾಲ್ ಇಂದು ಸಹೋದರ ಹಾರ್ದಿಕ್ ಪಾಂಡ್ಯ ಅವರಿಂದ ಏಕದಿನ ಕ್ಯಾಪ್ ಸ್ವೀಕರಿಸಿದಾಗ ಭಾವುಕರಾಗಿ ಕಣ್ಣೀರಿಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News