ಹಂತ-ಹಂತಗಳ ದಿಗ್ಬಂಧನ ತೆರವು ಯೋಜನೆ ನಮ್ಮಲ್ಲಿಲ್ಲ: ಇರಾನ್

Update: 2021-04-03 16:19 GMT

ಟೆಹರಾನ್ (ಇರಾನ್), ಎ. 3: ಅಮೆರಿಕ ವಿಧಿಸಿರುವ ದಿಗ್ಬಂಧನಗಳನ್ನು ಹಂತಗಳಲ್ಲಿ ತೆರವುಗೊಳಿಸುತ್ತಾ 2015ರ ಪರಮಾಣು ಒಪ್ಪಂದಕ್ಕೆ ಮರಳುವ ‘ಹಂತ-ಹಂತಗಳ ಯೋಜನೆ’ ನಮ್ಮಲ್ಲಿಲ್ಲ ಎಂದು ಇರಾನ್‌ನ ವಿದೇಶ ಸಚಿವಾಲಯ ಹೇಳಿದೆ.

‘‘ಅಮೆರಿಕ ವಿಧಿಸಿರುವ ಎಲ್ಲ ದಿಗ್ಬಂಧನಗಳನ್ನು ತೆರವುಗೊಳಿಸಬೇಕು ಎನ್ನುವುದು ಇರಾನ್‌ನ ಸ್ಪಷ್ಟ ನೀತಿಯಾಗಿದೆ’’ ಎಂದು ವಿದೇಶ ಸಚಿವಾಲಯದ ವಕ್ತಾರ ಸಯೀದ್ ಖತೀಬ್‌ಝಾದೆ ಸರಕಾರಿ ಒಡೆತನದ ‘ಪ್ರೆಸ್ ಟಿವಿ’ಗೆ ಶನಿವಾರ ತಿಳಿಸಿದರು.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಹಾಗೂ ಮರು ವಿಧಿಸಿರುವ ಎಲ್ಲ ದಿಗ್ಬಂಧನಗಳೂ ತೆರವುಗೊಳ್ಳಬೇಕು ಎಂದು ಅವರು ನುಡಿದರು.

2015ರಲ್ಲಿ ಪರಮಾಣು ಒಪ್ಪಂದಕ್ಕೆ ಇರಾನ್, ಚೀನಾ, ರಶ್ಯ, ಜರ್ಮನಿ, ಬ್ರಿಟನ್, ಫ್ರಾನ್ಸ್ ಮತ್ತು ಅಮೆರಿಕ ಸಹಿ ಹಾಕಿದ್ದವು. ಆದರೆ, 2018ರಲ್ಲಿ ಈ ಒಪ್ಪಂದದಿಂದ ಅಮೆರಿಕವನ್ನು ಹೊರತಂದ ಅಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ಹೊಸದಾಗಿ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News