ಭಾರತದೊಂದಿಗೆ ಯಾವುದೇ ರೀತಿಯ ವ್ಯಾಪಾರವಿಲ್ಲ: ಇಮ್ರಾನ್

Update: 2021-04-03 16:30 GMT
photo:twitter

ಇಸ್ಲಾಮಾಬಾದ್ (ಪಾಕಿಸ್ತಾನ), ಎ. 3: ಪ್ರಸಕ್ತ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಭಾರತದೊಂದಿಗೆ ಯಾವುದೇ ರೀತಿಯ ವ್ಯಾಪಾರ ಮಾಡುವುದು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಹೇಳಿರುವುದಾಗಿ ‘ಡಾನ್’ ಪತ್ರಿಕೆ ಶನಿವಾರ ವರದಿ ಮಾಡಿದೆ.

ಭಾರತದಿಂದ ಹತ್ತಿ ಮತ್ತು ಸಕ್ಕರೆ ಆಮದು ಮಾಡುವ ವಿಷಯದಲ್ಲಿ ಸಚಿವ ಸಂಪುಟದ ಸದಸ್ಯರೊಂದಿಗೆ ಶುಕ್ರವಾರ ಸಮಾಲೋಚನೆ ನಡೆಸಿದ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಅಗತ್ಯ ವಸ್ತುಗಳ ಆಮದಿಗೆ ಪರ್ಯಾಯ ಅಗ್ಗದ ಮೂಲಗಳನ್ನು ತಕ್ಷಣ ಕಂಡುಹಿಡಿಯುವಂತೆ ವಾಣಿಜ್ಯ ಸಚಿವಾಲಯ ಮತ್ತು ತನ್ನ ಆರ್ಥಿಕ ತಂಡಕ್ಕೆ ಸಚಿವ ಸಂಪುಟದ ಸಭೆಯ ಬಳಿಕ ಅವರು ಸೂಚಿಸಿದ್ದಾರೆ.

 ಅಮೆರಿಕ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಗೌರವಾರ್ಥ ಸಂಸತ್ ಕಟ್ಟಡದ ಮೇಲಿನ ರಾಷ್ಟ್ರಧ್ವಜವನ್ನು ಶುಕ್ರವಾರ ಅರ್ಧ ಮಟ್ಟದಲ್ಲಿ ಹಾರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News