ಅಬ್ದುರ್ರಶೀದ್

Update: 2021-04-04 11:30 GMT

‌ಮಂಗಳೂರು, ಎ.4:  ವಾಮಂಜೂರು-ಮೂಡುಶೆಡ್ಡೆ ಪರಿಸರದ ನಿವಾಸಿ ಅಬ್ದುರ್ರಶೀದ್ (81) ರವಿವಾರ ಮಧ್ಯಾಹ್ನ ಗಂಜಿಮಠದಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ನಿಧನರಾದರು.

ಕಳೆದೊಂದು ವರ್ಷದಿಂದ ಅವರು ಅನಾರೋಗ್ಯದಿಂದಿದ್ದರು. ಅವರ ಪತ್ನಿ ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಅವರು ಊರಿಗೆ ಬಂದ ಬಳಿಕ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. ನಗರದ ಬೋಳಾರದಲ್ಲಿರುವ ಶಾದಿಮಹಲ್‌ನ ಸ್ಥಾಪಕ ಸದಸ್ಯರಾಗಿದ್ದ ಅವರು ವಾಮಂಜೂರಿನ ಅಲ್‌ಹಮ್ದು ಚಾರಿಟೆಬಲ್ ಟ್ರಸ್ಟ್‌ನ ಉಪಾಧ್ಯಕ್ಷರಾಗಿದ್ದರು. ಜಮಾಅತೆ ಇಸ್ಲಾಮೀ ಹಿಂದ್‌ನ ಸಕ್ರಿಯ ಸದಸ್ಯರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ