ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವವರ ರ‍್ಯಾಲಿಗಳಿಗೆ ನಿಷೇಧ: ಚುನಾವಣಾ ಆಯೋಗ ಎಚ್ಚರಿಕೆ

Update: 2021-04-10 09:03 GMT

ಹೊಸದಿಲ್ಲಿ: ಕೋವಿಡ್-19 ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದರೆ ಪ್ರಚಾರ ರ‍್ಯಾಲಿಗಳು  ಹಾಗೂ ಅಭಿಯಾನಗಳನ್ನು ನಿಷೇಧಿಸಲಾಗುವುದೆಂದು ಚುನಾವಣಾ ಆಯೋಗ ಶುಕ್ರವಾರ ರಾಜಕೀಯ ಪಕ್ಷಗಳನ್ನು ಎಚ್ಚರಿಸಿದೆ.

ಪಶ್ಚಿಮ ಬಂಗಾಳದಲ್ಲಿ ಇಂದು ನಾಲ್ಕನೇ ಹಂತದ ಚುನಾವಣೆ ನಡೆಯುತ್ತಿದ್ದು ಅದಕ್ಕಿಂತ ಒಂದು ದಿನ ಮುಂಚಿತವಾಗಿ ಈ ಎಚ್ಚರಿಕೆ ಬಂದಿದೆ. ಆದರೆ ಮೂರು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಚುನಾವಣೆಗಳು ನಡೆದಾಗ ಈ ಎಚ್ಚರಿಕೆ ಆಯೋಗದಿಂದ ಬಂದಿರಲಿಲ್ಲ.

"ಮಾಸ್ಕ್ ಗಳನ್ನು ಧರಿಸದೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಚುನಾವಣಾ ಪ್ರಚಾರ ಸಭೆಗಳು ನಡೆಯುತ್ತಿರುವುದು ಆಯೋಗದ ಗಮನಕ್ಕೆ ಬಂದಿದೆ. ತಾರಾ ಪ್ರಚಾರಕರೂ ಸೇರಿದಂತೆ ರಾಜಕೀಯ ನಾಯಕರುಗಳು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ, ಈ ಮೂಲಕ ಅವರೂ ಸೋಂಕಿಗೆ ತುತ್ತಾಗುವ ಅಪಾಯವಿದೆಯಲ್ಲದೆ ಇತರರನ್ನೂ ಅಪಾಯಕ್ಕೆ ದೂಡುತ್ತಿದ್ದಾರೆ. ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಅಭ್ಯರ್ಥಿಗಳು/ತಾರಾ ಪ್ರಚಾರಕರು/ ರಾಜಕೀಯ ನೇತಾರರ ವಿರುದ್ಧ  ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ" ಎಂದು ಆಯೋಗ ತನ್ನ ನೋಟಿಸ್‍ನಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News