ತೆಲಂಗಾಣದಲ್ಲಿ ಜಗನ್ ಮೋಹನ್ ರೆಡ್ಡಿ ಸಹೋದರಿ ಶೈಲಜಾರಿಂದ ಜುಲೈ 8ಕ್ಕೆ ಹೊಸ ಪಕ್ಷ ಸ್ಥಾಪನೆ

Update: 2021-04-10 11:54 GMT

ಹೈದರಾಬಾದ್: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಪುತ್ರಿ ವೈ.ಎಸ್.ಶರ್ಮಿಳಾ ರೆಡ್ಡಿ ಅವರು ತಮ್ಮ ತಂದೆಯ ಜನ್ಮ ದಿನವಾದ ಜುಲೈ 8 ರಂದು ತೆಲಂಗಾಣದಲ್ಲಿ ತಮ್ಮ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಶರ್ಮಿಳಾ ಅವರ ಹೆಜ್ಜೆಗೆ ಅವರ ತಾಯಿ ವೈ.ಎಸ್.ವಿಜಯಲಕ್ಷ್ಮಿ ಸಮ್ಮತಿ ನೀಡಿದ್ದಾರೆ. ತಮ್ಮ ಮಗಳು ತೆಲಂಗಾಣದ ಜನರ ಸೇವೆ ಮುಂದಾಗಿರುವುದಕ್ಕೆ ಸಂತೋಷವಾಗಿದೆ ಎಂದು ಹೇಳಿದ್ದಾರೆ. ತನ್ನ ಮಗಳಿಗೆ ತನ್ನ ತಂದೆಯಂತೆಯೇ ಧೈರ್ಯವಿದೆ ಎಂದು ಅವರು ಹೇಳಿದರು.

ಶರ್ಮಿಳಾ ಅವರು ರಾಜ್ಯದಲ್ಲಿ ರಾಜಕೀಯವಾಗಿ ಸಕ್ರಿಯರಾಗುವ ಬಗ್ಗೆ ಸಾರ್ವಜನಿಕ ಘೋಷಣೆ ಮಾಡಿದ ನಂತರ ಜಗನ್ ಮೋಹನ್ ರೆಡ್ಡಿ ಅವರು ತೆಲಂಗಾಣದಲ್ಲಿ ತಮ್ಮ ತಂಗಿಯ ರಾಜಕೀಯ ಯೋಜನೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ಶರ್ಮಿಳಾ ಅವರು ಪಕ್ಷದ ಹೆಸರು, ಲಾಂಛನ, ಧ್ವಜ ಹಾಗೂ ಸಿದ್ಧಾಂತವನ್ನು ಜುಲೈ 8 ರಂದು ಅನಾವರಣಗೊಳಿಸಲಿದ್ದಾರೆ. ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ 2023 ರಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News