ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರಿಗೆ ನಾಳೆ ಮಾರ್ಚ್ ತಿಂಗಳ ವೇತನ ಪಾವತಿ: ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ

Update: 2021-04-11 06:07 GMT
File Photo

ಬೆಂಗಳೂರು, ಎ.11: ಮುಷ್ಕರದ ವೇಳೆಯೂ ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ಧತೆ ತೋರಿದ ನಿಗಮದ ಸಿಬ್ಬಂದಿಗೆ ಎ.12ರಂದು ಮಾರ್ಚ್ ತಿಂಗಳ ವೇತನವನ್ನು ಪಾವತಿ ಮಾಡಲು ಆದೇಶಿಸಲಾಗಿದೆ.

ಮುಷ್ಕರಕ್ಕೆ ಪ್ರಚೋದನೆ ನೀಡಿದ್ದಾಗ್ಯೂ ಸಹ, ಕರ್ತವ್ಯ ನಿರ್ವಹಿಸುತ್ತಿರುವಾಗ ಸಹ ಸಿಬ್ಬಂದಿಯಿಂದ ಜೀವ ಬೆದರಿಕೆ ಇದ್ದಾಗಲೂ,  ಬಸ್ಸುಗಳ ಕಾರ್ಯಾಚರಣೆ ಮಾಡಿ, ಸಾರ್ವಜನಿಕರಿಗೆ ಸಾರಿಗೆ ಸೇವೆ ಒದಗಿಸುವಲ್ಲಿ ಬದ್ಧತೆ ತೋರಿದ ನಿಗಮದ ಸಿಬ್ಬಂದಿಗೆ ಎ.12ರಂದು ಮಾರ್ಚ್ ತಿಂಗಳ ವೇತನವನ್ನು ಪಾವತಿ ಮಾಡಲು ಆದೇಶಿಸಲಾಗಿದೆ ಎಂದು ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

ಕೆಲಸಕ್ಕೆ ಹಾಜರಾಗದ 55 ವರ್ಷ ವಯಸ್ಸಿನವರಿಗೆ ಕಡ್ಡಾಯ ನಿವೃತ್ತಿಯ ಎಚ್ಚರಿಕೆ:

ಈ ನಡುವೆ ಕೆಲಸಕ್ಕೆ ಹಾಜರಾಗದೇ ಇದ್ದರೆ 55 ವರ್ಷ ವಯಸ್ಸಾದ ಸಾರಿಗೆ ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸುವ ಎಚ್ಚರಿಕೆಯ ಸಂದೇಶವನ್ನು ಸರಕಾರ ಕಳುಹಿಸಿದೆ ಎಂದು ಸಾರಿಗೆ ನೌಕರರು ಆರೋಪಿಸುತ್ತಿದ್ದಾರೆ.  

ಬಸ್ ಪಾಸುಗಳ ಅವಧಿ ವಿಸ್ತರಣೆ

ನಿಗಮದ ವಿದ್ಯಾರ್ಥಿ ಬಸ್ ಪಾಸುಗಳು ಹಾಗೂ ವಿಕಲ ಚೇತನರ ಮಾಸಿಕ ಬಸ್ ಪಾಸುಗಳನ್ನು ಹೊಂದಿರುವವರಿಗೆ ಮುಷ್ಕರದ ಅವಧಿಯ ದಿನಗಳಿಗೆ ಸರಿಸಮಾನವಾಗಿ, ಬಸ್ ಪಾಸುಗಳ ಅವಧಿಯನ್ನು ವಿಸ್ತರಿಸಿ ಆದೇಶಿಸಲಾಗಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News