×
Ad

ಮಾದಕ ವಸ್ತು ಮಾರಾಟ: ಮೂವರ ಬಂಧನ, 32 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ

Update: 2021-04-11 17:24 IST

ಬೆಂಗಳೂರು, ಎ.11: ಮಾದಕ ವಸ್ತು ಗಾಂಜಾ ಮಾರಾಟ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿರುವ ಇಲ್ಲಿನ ಕೋರಮಂಗಲ ಠಾಣಾ ಪೊಲೀಸರು ಮೂವರನ್ನು ಬಂಧಿಸಿ 32 ಲಕ್ಷ ಮೌಲ್ಯದ 106 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ.

ಕನಕಪುರದ ಕುಪ್ಪದೊಡ್ಡಿಯ ರವಿಕುಮಾರ್(25), ಚಾಮರಾಜನಗರದ ಚಿಕ್ಕಲಕೂರುವಿನ ಮಾರಪ್ಪ(24) ಹಾಗೂ ಒಡಿಸ್ಸಾದ ರಾಜಕಿಶೋರ್ ನಾಯಕ್ (26) ಬಂಧಿತ ಆರೋಪಿಗಳೆಂದು ಡಿಸಿಪಿ ಶ್ರೀನಾಥ್ ಮಹದೇವ ಜೋಶಿ ತಿಳಿಸಿದ್ದಾರೆ.

ಮಾ.26ರಂದು ಕೋರಮಂಗಲದ 8ನೆ ಬ್ಲಾಕಿನ 2ನೆ ಮುಖ್ಯರಸ್ತೆಯ ಫೋರಂ ಬೇಕರಿ ಹಿಂಭಾಗದ ರಸ್ತೆ ಬಳಿ ಗಾಂಜಾ ಮಾರಾಟಕ್ಕೆ ಆರೋಪಿಗಳು ಬರುವ ಖಚಿತ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ, ಇವರಿಂದ ಮಾರಾಟಕ್ಕೆ ತಂದಿದ್ದ 23 ಕೆ.ಜಿ 100 ಗ್ರಾಂ ತೂಕದ ಮಾದಕವಸ್ತು ಗಾಂಜಾ ಜಪ್ತಿ ಮಾಡಲಾಗಿದೆ ಎಂದರು.

ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮಾರಾಟ ಮಾಡಲು ಅಕ್ರಮವಾಗಿ ಬೇಗೂರಿನ, ಮೈಲಸಂದ್ರ ಬಳಿಯ ಚೈತ್ರ ಮೊಡೋಸ್ ಲೇಔಟ್‍ನ ಮನೆಯೊಂದರಲ್ಲಿ ಸಂಗ್ರಹಿಸಿಟ್ಟಿದ್ದ ಒಟ್ಟು 83 ಕೆ.ಜಿ. 855 ಗ್ರಾಂ ತೂಕದ ಒಟ್ಟು ಅಂದಾಜು 32 ಲಕ್ಷರೂ. ಮೌಲ್ಯದ ಗಾಂಜಾ ಹಾಗೂ ಬೈಕ್‍ನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News