ರಾಹುಲ್ ಗಾಂಧಿ ಪತ್ರದ ಬೆನ್ನಲ್ಲೇ ವಿದೇಶಿ ಲಸಿಕೆಗೆ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸಿದ ಕೇಂದ್ರ

Update: 2021-04-14 08:37 GMT

ಹೊಸದಿಲ್ಲಿ: ವಿದೇಶಗಳಲ್ಲಿ ತಯಾರಿಸಲಾದ ಕೋವಿಡ್-19 ಲಸಿಕೆಗಳು ಭಾರತದಲ್ಲೂ ಲಭ್ಯವಾಗುವಂತೆ ಮಾಡಬೇಕೆಂದು ಕೋರಿ  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಕೆಲವೇ ದಿನಗಳಲ್ಲಿ ಕೇಂದ್ರ ಸರಕಾರ ವಿದೇಶಿ ಕೋವಿಡ್ ಲಸಿಕೆಗಳ ತುರ್ತು ಅನುಮೋದನೆ ಸಂಬಂಧಿತ ಪ್ರಕ್ರಿಯೆಗಳನ್ನು ತ್ವರಿತಗೊಳಿಸಲು ನಿರ್ಧರಿಸಿದೆ. ಆದರೆ ರಾಹುಲ್ ಗಾಂಧಿ ಪ್ರಧಾನಿಗೆ ಪತ್ರ ಬರೆದಿದ್ದಕ್ಕೆ ಪ್ರತಿಕ್ರಿಯಿಸಿದ್ದ ಕೆಲವು ಬಿಜೆಪಿ ನಾಯಕರು ಅವರು ಫಾರ್ಮಾ ಕಂಪೆನಿಗಳ ಪರ ಲಾಬಿ ನಡೆಸುತ್ತಿದ್ದಾರೆಂದು  ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಸರಕಾರದ ಕ್ರಮದ ಕುರಿತು ಮಾರ್ಮಿಕವಾಗಿ ಇಂದು  ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ "ಮೊದಲು ನಿಮ್ಮನ್ನು ಅವರು ನಿರ್ಲಕ್ಷ್ಯಿಸುತ್ತಾರೆ, ನಂತರ ನಿಮ್ಮನ್ನು ವ್ಯಂಗ್ಯವಾಡುತ್ತಾರೆ, ನಿಮ್ಮ ಜತೆ ಜಗಳವಾಡುತ್ತಾರೆ ಹಾಗೂ ಕೊನೆಗೆ ನೀವು ಗೆಲ್ಲುತ್ತೀರಿ" ಎಂದು ಟ್ವೀಟ್ ಮಾಡಿದ್ದಾರೆ."ಕೆಲ ಸಮಯದ ಹಿಂದಿನಿಂದಲೇ ವಿದೇಶಗಳಲ್ಲಿ ತಯಾರಿಸಲಾದ ಲಸಿಕೆ ಅನುಮೋದನೆ ಕುರಿತು ಚರ್ಚೆಗಳು ನಡೆಯುತ್ತಿದ್ದವು. ಸರಕಾರ ಈ ಹಿಂದೆಯೇ ಯೋಚಿಸಿ ಇದೀಗ ಪ್ರಕಟಿಸಿದ ಒಂದು ನಿರ್ಧಾರದ ಶ್ರೇಯವನ್ನು ರಾಹುಲ್ ಪಡೆಯುತ್ತಿದ್ದಾರೆ" ಎಂದು ಬಿಜೆಪಿ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News