ಚೆನ್ನೈ ಸೂಪರ್ ಕಿಂಗ್ಸ್-ಪಂಜಾಬ್ ಕಿಂಗ್ಸ್ ಮುಖಾಮುಖಿ

Update: 2021-04-16 03:58 GMT

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ 2020ರಲ್ಲಿ ಕಳಪೆ ಅಭಿಯಾನದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2021ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಆರಂಭಿಕ ಪಂದ್ಯವನ್ನು ಕಳೆದುಕೊಂಡಿತು.

ಶುಕ್ರವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲಿದೆ.

   ಮೊದಲ ಪಂದ್ಯದಲ್ಲಿ ಚೆನ್ನೈ ತಂಡ 188 ರನ್ ದಾಖಲಿಸಿತ್ತು. ಆದರೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸುಲಭವಾಗಿ ಮಣಿಸಿತು. ಪೃಥ್ವಿ ಶಾ ಮತ್ತು ಶಿಖರ್ ಧವನ್ ಡೆಲ್ಲಿ ತಂಡದ ಗೆಲುವನ್ನು ಸುಲಭಗೊಳಿಸಿದರು.

      ಪಂಜಾಬ್ ಕಿಂಗ್ಸ್ ತಂಡ ಅದೇ ಸ್ಥಳದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಾಲ್ಕು ರನ್‌ಗಳ ರೋಚಕ ಜಯದೊಂದಿಗೆ ಅಭಿಯಾನ ಆರಂಭಿಸಿತು. ನಾಯಕ ಸಂಜು ಸ್ಯಾಮ್ಸನ್ ಶತಕವು ರಾಜಸ್ಥಾನ್ ರಾಯಲ್ಸ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ನಿರೀಕ್ಷೆ ಮೂಡಿಸಿತ್ತು. ಆದರೆ ಕೊನೆಯ ಎಸೆತದಲ್ಲಿ ಅವರು ಔಟಾದ ಕಾರಣದಿಂದಾಗಿ ರಾಜಸ್ಥಾನ್ ಸೋಲು ಅನುಭವಿಸಿತ್ತು. ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಯಾವುದೇ ರೀತಿಯಿಂದಲೂ ಗೆಲುವಿನ ಹೆಚ್ಚಿ ನ ದಾಖಲೆಗಳನ್ನು ಹೊಂದಿಲ್ಲ. ಆದರೆ ಮುಂಬೈನಲ್ಲಿ ಆಡಿರುವ 2 ಪಂದ್ಯಗಳಲ್ಲಿ ಪಂಜಾಬ್ ತಂಡವು 2014 ರಲ್ಲಿ ಒಂದು ಬಾರಿ ಧೋನಿ ನಾಯಕತ್ವದ ಸಿಎಸ್‌ಕೆ ತಂಡವನ್ನು ಸೋಲಿಸಿತ್ತು.

ಪಿಚ್ ವರದಿ

ವಾಂಖೆಡೆ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟ್ಸ್‌ಮನ್ ಸ್ನೇಹಿಯಾಗಿದೆ. ಟಾಸ್ ಜಯಿಸಿದ ತಂಡ ಫೀಲ್ಡಿಂಗ್ ನಡೆಸಿದರೆ ಗೆಲುವಿಗೆ ಆ ತಂಡಕ್ಕೆ ಅನುಕೂಲವಾದ ವಾತಾವರಣ ಇರುತ್ತದೆ.

 ಸಾಂಭವ್ಯ ತಂಡ:

► ಪಂಜಾಬ್ ಕಿಂಗ್ಸ್: ಲೋಕೇಶ್ ರಾಹುಲ್(ನಾಯಕ ,ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್,ಕ್ರಿಸ್ ಗೇಲ್, ನಿಕೋಲಸ್ ಪೂರನ್, ದೀಪಕ್ ಹೂಡಾ, ಶಾರುಖ್ ಖಾನ್, ಜೆ.ರಿಚರ್ಡ್ಸನ್, ರಿಲೆ ಮೆರೆಡಿತ್ / ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ಅರ್ಷ್‌ದೀಪ್ ಸಿಂಗ್, ಮುಹಮ್ಮದ್ ಶಮಿ.

► ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ, ವಿಕೆಟ್ ಕೀಪರ್) ರುತುರಾಜ್ ಗಾಯಕ್‌ವಾಡ್, ಎಫ್ ಡು ಪ್ಲೆಸಿಸ್, ಮೊಯಿನ್ ಅಲಿ, ಸುರೇಶ್ ರೈನಾ, ಅಂಬಾಟಿ ರಾಯುಡು, ಡ್ವೇನ್ ಬ್ರಾವೊ, ರವೀಂದ್ರ ಜಡೇಜ, ಸ್ಯಾಮ್ ಕರ್ರನ್, ಶಾರ್ದುಲ್ ಠಾಕೂರ್, ದೀಪಕ್ ಚಹರ್.

► ಮೊದಲ ಬ್ಯಾಟಿಂಗ್ ಮಾಡಿದ ತಂಡದ ಸರಾಸರಿ ಸ್ಕೋರ್: 182 (ಕಳೆದ 9 ಐಪಿಎಲ್ ಪಂದ್ಯಗಳಲ್ಲಿ)

► ಗೆಲುವಿನ ಸವಾಲನ್ನು ಬೆನ್ನಟ್ಟಿ ಜಯ : 5, ಸೋಲು - 3, ಟೈ- 1

ಹೆಡ್ TO ಹೆಡ್

► ಆಡಿರುವ ಒಟ್ಟು ಪಂದ್ಯಗಳು: 24, ಗೆಲುವು: ಪಂಜಾಬ್ 9, ಚೆನ್ನೈ ಸೂಪರ್ ಕಿಂಗ್ಸ್ 15

► ತಟಸ್ಥ ಸ್ಥಳಗಳಲ್ಲಿ ಆಡಿದ ಪಂದ್ಯಗಳು: 12, ಗೆಲುವು: ಪಂಜಾಬ್ 4, ಚೆನ್ನೈ 8.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News