ಕೊರೋನ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಪೂರೈಸುತ್ತಿರುವ ಶಾನವಾಝ್ ಶೇಖ್

Update: 2021-04-21 06:08 GMT
Photo: ndtv.com

ಮುಂಬೈ: ಕೊರೋನ ಕಾಲದಲ್ಲಿ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಅತ್ಯಂತ ಅಗತ್ಯವಾಗಿರುವ ಆಕ್ಸಿಜನ್ ಅನ್ನು ಉಚಿತವಾಗಿ ಪೂರೈಸುವ ಯೋಜನೆಯ ಮೂಲಕ ಮಹಾನಗರದ ಮಾಲ್ವಾಣಿಯಲ್ಲಿ  ಶಾನವಾಝ್ ಶೇಖ್ ಆಪತ್ಪಾಂಧವನಾಗಿದ್ದಾರೆ.

ಶೇಖ್ ಅವರು ಕಳೆದ ವರ್ಷ ಕೊರೋನ ವೈರಸ್ ಕಾಣಿಸಿಕೊಂಡಾಗಲೇ ಉಚಿತವಾಗಿ ಆಕ್ಸಿಜನ್ ಪೂರೈಸುವ ಯೋಜನೆಯನ್ನು ಆರಂಭಿಸಿದ್ದರು. ಈ ವರ್ಷವೂ ಆ ಯೋಜನೆಯನ್ನು ಮುಂದುವರಿಸುವ ಮೂಲಕ ಹಲವಾರು  ಜೀವವನ್ನು ಉಳಿಸಲು ಶ್ರಮಿಸುತ್ತಿದ್ದಾರೆ. 

ಕಳೆದ ವರ್ಷ ನಾವು 5-6 ಜನರಿಗೆ ಆಕ್ಸಿಜನ್ ತಲುಪಿಸಿದ್ದೆವು. ಈ ಬಾರಿ ಬೇಡಿಕೆ ಜಾಸ್ತಿ ಇದೆ. ನಮ್ಮ ನಗರದಲ್ಲಿ ಆಕ್ಸಿಜನ್ ಕಡಿಮೆ ಇದೆ. ಮೊದಲು 50 ಕರೆಗಳು ಬರುತ್ತಿದ್ದವು. ಈಗ 5000ಕ್ಕೂ ಅಧಿಕ ಕಾಲ್ ಗಳು ಬರುತ್ತಿವೆ. ಎಷ್ಟು ಸಾಧ್ಯವೋ ಅಷ್ಟು ಆಕ್ಸಿಜನ್ ತಲುಪಿಸಲು ಪ್ರಯತ್ನಿಸುತ್ತಿದ್ದೇವೆ. ಯಾರಿಗೆ ಎಮರ್ಜನ್ಸಿ ಇದೆಯೋ ಅವರಿಗೆ ನಮ್ಮ ತಂಡ ಆಕ್ಸಿಜನ್ ತಲುಪಿಸುತ್ತಿದೆ. ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಲಿಂಡರ್ ಪೂರೈಸುತ್ತಿದ್ದೇವೆ. ಕಳೆದ ವರ್ಷ ವಲಸಿಗರಿಗಾಗಿ ಸಾಕಷ್ಟು ಕೆಲಸ ಮಾಡಿದ್ದೆವು. ಕಳೆದ ವರ್ಷ ಈ ಯೋಜನೆ ಆರಂಭಿಸಲು ಹಣ ಸಂಗ್ರಹಿಸಿದ್ದೆವು. ನನ್ನ ವಾಹನವನ್ನು  ಮಾರಾಟ  ಮಾಡಿ ಹಣ ಹೊಂದಿಸಿದ್ದೆ ಎಂದು NDTVಗೆ ಶೇಖ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News