ಕೊರೋನ 2ನೇ ಅಲೆ ಇನ್ನೂ 40 ದಿನ ಇರಲಿದೆ : ಆರೋಗ್ಯ ಸಚಿವ ಡಾ. ಸುಧಾಕರ್
Update: 2021-04-26 11:56 IST
ಬೆಂಗಳೂರು : ಕೊರೋನ 2ನೇ ಅಲೆ ಇನ್ನೂ 40 ದಿನ ಇರುವುದಾಗಿ ತಜ್ಞರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ತಿಳಿಸಿದ್ದಾರೆ.
ಕೊರೋನ ಅಲೆ ಇನ್ನೂ 40 ದಿನ ಇರಲಿದ್ದು, ಅಲ್ಲಿಯವರೆಗೆ ಮನೆಯಲ್ಲೇ ಇರುವುದು ಸೂಕ್ತ. ಮೊದಲ ಅಲೆಗಿಂತ 2ನೆ ಅಲೆಗೆ ಹೆಚ್ಚು ಜನರು ಸೋಂಕಿತರಾಗಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ. ಸುಧಾಕರ್ ಅವರು ತಿಳಿಸಿದರು.