ಹಾಜಿ ಅಬೂಬಕ್ಕರ್ ಕೋಡಿಜಾಲ್

Update: 2021-05-01 09:19 GMT

ಕೊಣಾಜೆ: ಕೋಡಿಜಾಲ್ ನಿವಾಸಿ ಹಾಜಿ ಅಬೂಬಕ್ಕರ್ ಕೋಡಿಜಾಲ್ (70) ಅಲ್ಪಕಾಲದ ಅನಾರೋಗ್ಯದಿಂದಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ನಿಧನರಾದರು.

ಮೃತರು ಧಾರ್ಮಿಕ, ಸಾಮಾಜಿಕ , ರಾಜಕೀಯ ಮುಖಂಡ  ಹಾಜಿ ಇಬ್ರಾಹಿಂ ಕೋಡಿಜಾಲ್ ಅವರ ಸಹೋದರ.

ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಕೋಡಿಜಾಲ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದ ಇವರು ರಿಫಾಯಿ ಜುಮಾ ಮಸ್ಜಿದ್ ಕೋಡಿಜಾಲ್  ಇದರ ಪ್ರಧಾನ ಕಾರ್ಯದರ್ಶಿಯಾಗಿ  ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ದಫನ ಕಾರ್ಯ ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್ ವಠಾರದಲ್ಲಿ ಶನಿವಾರ ಮುಂಜಾನೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ