ಕೋವಿಡ್ ಬಾಧಿತ ಭಾರತದಿಂದ ಆಗಮಿಸುವ ಆಸ್ಟ್ರೇಲಿಯಾ ನಾಗರಿಕರಿಗೆ 5 ವರ್ಷಗಳ ಜೈಲು ಸಜೆ, ದಂಡ

Update: 2021-05-01 10:39 GMT

ಸಿಡ್ನಿ: ಭಾರತದಲ್ಲಿರುವ ಆಸ್ಟ್ರೇಲಿಯದ ನಾಗರಿಕರು ಸೋಮವಾರದ ನಂತರ ಸ್ವದೇಶಕ್ಕೆ ವಾಪಸಾಗುವುದನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ನಿಯಮಗಳನ್ನು ಪಾಲಿಸದವರಿಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 

ಶುಕ್ರವಾರ ತಡವಾಗಿ ಹೊರಡಿಸಲಾಗಿರುವ ತುರ್ತು ನಿರ್ಣಯದಲ್ಲಿ ಮೊದಲ ಬಾರಿ ಆಸ್ಟ್ರೇಲಿಯವು ತನ್ನ ನಾಗರಿಕರು ಸ್ವದೇಶಕ್ಕೆ ಮರಳುವುದನ್ನು ಕ್ರಿಮಿನಲ್ ಅಪರಾಧವನ್ನಾಗಿಸಿದೆ.

ವಿಶ್ವದ ಎರಡನೇ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹಾಗೂ ಸಾವು ಉಲ್ಬಣವಾಗಿರುವ ಕಾರಣ ಆಸ್ಟ್ರೇಲಿಯವು ಪ್ರಯಾಣಿಕರನ್ನು ತಡೆಯುವ ಕಠಿಣ ಕ್ರಮಕ್ಕೆ ಮುಂದಾಗಿದೆ.

ಈ ನಿರ್ಬಂಧವು ಮೇ 3ರಿಂದ ಜಾರಿಗೆ ಬರುತ್ತವೆ. ಪ್ರಯಾಣ ನಿಷೇಧವನ್ನು ಉಲ್ಲಂಘಿಸಿದರೆ 66,000 ಆಸ್ಟ್ರೇಲಿಯನ್ ಡಾಲರ್ ದಂಡ ಹಾಗೂ ಐದು ವರ್ಷ ಜೈಲು ಶಿಕ್ಷೆ, .ಜೈಲು ಶಿಕ್ಷೆ ಹಾಗೂ ದಂಡ ಎರಡನ್ನು ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.

"ಸರಕಾರವು ಈ ನಿರ್ಧಾರಗಳನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ಆಸ್ಟ್ರೇಲಿಯದ ಸಾರ್ವಜನಿಕ ಆರೋಗ್ಯ ಹಾಗೂ ಕ್ವಾರಂಟೈನ್ ಪದ್ಧತಿಯ ಸಮಗ್ರತೆಯನ್ನು ಕಾಪಾಡುವುದು ನಿರ್ಣಾಯಕವಾಗಿದೆ''  ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಪ್ರಕಟನೆಯೊಂದರಲ್ಲಿ ತಿಳಿಸಿದ್ದಾರೆ 

ಭಾರತದಲ್ಲಿ ಅಂದಾಜು 9000 ಆಸ್ಟ್ರೇಲಿಯನ್ನರು ಇದ್ದಾರೆ. ಅವರಲ್ಲಿ 600ಕ್ಕೂ ಅಧಿಕ ಜನರನ್ನು ಅಸುರಕ್ಷಿತರು ಎಂದು ವರ್ಗೀಕರಿಸಲಾಗಿದೆ ಎಂದು 'ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್'  ಪತ್ರಿಕೆ ವರದಿ ಮಾಡಿದೆ.  

ರಾಷ್ಟ್ರೀಯ ಸಚಿವ ಸಂಪುಟದ ಸಭೆಯ ನಂತರ ಆರೋಗ್ಯ ಸಚಿವಾಲಯ ಶುಕ್ರವಾರ ಈ ನಿರ್ಧಾರವನ್ನು ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News