ಸುಶೀಲ್‌ ಕುಮಾರ್‌ ಮೋದಿ ಸಹೋದರ ಕೋವಿಡ್‌ ನಿಂದ ಮೃತ್ಯು

Update: 2021-05-02 11:39 GMT

ಪಾಟ್ನಾ: ದೇಶದಾದ್ಯಂತ ಕೊರೋನ ಎರಡನೇ ಅಲೆಯು ತೀವ್ರವಾಗಿದ್ದು, ಹಲವಾರು ಮಂದಿ ಮೃತಪಡುತ್ತಿದ್ದಾರೆ. ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ದಿನವೊಂದಕ್ಕೆ ಕೋವಿಡ್‌ ಸೋಂಕಿತರಾಗುತ್ತಿದ್ದಾರೆ. ಬಿಹಾರದಲ್ಲೂ ಕೋವಿಡ್‌ ತೀವ್ರತೆಯು ಹೆಚ್ಚಾಗಿದ್ದು, ಈ ನಡುವೆ ಕೋವಿಡ್‌ ಬಾಧಿತರಾಗಿ ತಮ್ಮ ಸಹೋದರ ಮೃತಪಟ್ಟಿರುವುದಾಗಿ ಬಿಜೆಪಿ ನಾಯಕ ಸುಶೀಲ್‌ ಕುಮಾರ್‌ ಮೋದಿ ಟ್ವೀಟ್‌ ಮಾಡಿದ್ದಾರೆ.

ರಾಜ್ಯಸಭಾ ಸಂಸದ, ಬಿಹಾರದ ಮಾಜಿ ಮುಖ್ಯಮಂತ್ರಿಯಾಗಿದ್ದ ಅವರು ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ, "ನನ್ನ ಕಿರಿಯ ಸಹೋದರ ಅಶೋಕ್‌ ಕುಮಾರ್‌ ಮೋದಿ (೬೫) ಇಂದು 2:45ರ ವೇಳೆಗೆ ಕೋವಿಡ್‌ ನಿಂದ ಮೃತಪಟ್ಟಿದ್ದಾರೆ. ವೈದ್ಯರು ಅವರನ್ನು ಉಳಿಸಲು ಮಾಡಿದ ಎಲ್ಲಾ ರೀತಿಯ ಪ್ರಯತ್ನ ವಿಫಲಗೊಂಡಿದ್ದು, ನಮಗೆ ಆತನನ್ನು ರಕ್ಷಿಸಲು ಸಾಧ್ಯವಾಗಿಲ್ಲ" ಎಂದು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News