ಬುಲಂದ್‌ಶಹರ್ ಗುಂಪು ಘರ್ಷಣೆ ಆರೋಪಿಗೆ ಉತ್ತರಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಗೆಲುವು

Update: 2021-05-04 13:03 GMT

ಹೊಸದಿಲ್ಲಿ: ಪೊಲೀಸ್ ಅಧಿಕಾರಿಯೊಬ್ಬರು ಕೊಲ್ಲಲ್ಪಟ್ಟಿದ್ದ 2018 ರ ಬುಲಂದ್‌ಶಹರ್ ಗುಂಪು ಘರ್ಷಣೆಯ  ಪ್ರಮುಖ ಆರೋಪಿ ಯೋಗೇಶ್ ರಾಜ್ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ಜಯ ಗಳಿಸಿದ್ದಾನೆ.

2018 ರಲ್ಲಿ ಇನ್ಸ್‌ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಅವರು ಬುಲಂದ್‌ಶಹರ್‌ನ ಸಯಾನಾ ಗ್ರಾಮದಲ್ಲಿ ಗೋಹತ್ಯೆ ನಡೆದಿದೆ ಎಂಬ ವದಂತಿಯ ಬಳಿಕ ನಡೆದ ಹಿಂಸಾಚಾರದಲ್ಲಿ ಕೊಲ್ಲಲ್ಪಟ್ಟಿದ್ದರು. ಈ ಪ್ರಕರಣದಲ್ಲಿ ಯೋಗೇಶ್ ರಾಜ್ ಅವರನ್ನು ಬಂಧಿಸಲಾಗಿತ್ತು.

ಬುಲಂದ್‌ಶಹರ್ ಗುಂಪು ಘರ್ಷಣೆಯ ಪ್ರಮುಖ ಆರೋಪಿ ಯೋಗೇಶ್ ವಾರ್ಡ್ ಸಂಖ್ಯೆ 5 ರಿಂದ ಜಿಲ್ಲಾ ಪಂಚಾಯತ್ ಸದಸ್ಯ ಹುದ್ದೆಗೆ ಅಭ್ಯರ್ಥಿಯಾಗಿದ್ದ. ಈತ ತಮ್ಮ ಪ್ರತಿಸ್ಪರ್ಧಿ ಪಕ್ಷೇತರ ಅಭ್ಯರ್ಥಿ ನಿರ್ಧೋಷ್ ಚೌಧರಿಯನ್ನು 2,150 ಮತಗಳಿಂದ ಸೋಲಿಸಿದ್ದ. ಚಲಾವಣೆಯಾದ 27,763 ಮತಗಳಲ್ಲಿ ಯೋಗೇಶ್ 10,352 ಮತ ಪಡೆದರೆ, ನಿರ್ಧೋಷ್ ಚೌಧರಿ 8,269 ಮತಗಳನ್ನು ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News