ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆ: ಬಿಸಿಸಿಐಗೆ ಆಗುವ ನಷ್ಟ ಎಷ್ಟು ಕೋಟಿ ಗೊತ್ತಾ ?

Update: 2021-05-04 14:48 GMT

ಮುಂಬೈ: ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ ಕೋವಿಡ್-19ನಿಂದಾಗಿ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿರುವ ಕಾರಣ ಪ್ರಸಾರ ಮತ್ತು ಪ್ರಾಯೋಜಕತ್ವದಲ್ಲಿ ನಿಗದಿಪಡಿಸಲಾಗಿದ್ದ 2,000 ಕೋಟಿ ರೂ.ಗೂ ಅಧಿಕ ಆದಾಯವನ್ನು ಬಿಸಿಸಿಐ ಕಳೆದುಕೊಂಡಿದೆ.

ಕಳೆದ ಒಂದೆರಡು ದಿನಗಳಲ್ಲಿ ಅಹಮದಾಬಾದ್ ಮತ್ತು ಹೊಸದಿಲ್ಲಿಯ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗಳಲ್ಲಿ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡ ನಂತರ ಬಿಸಿಸಿಐ ಅನಿವಾರ್ಯವಾಗಿ ಐಪಿಎಲ್ ಅನ್ನು ಮುಂದೂಡಬೇಕಾಯಿತು.

"ಈ ವರ್ಷದ ಐಪಿಎಲ್ ಅನ್ನು ಮಧ್ಯದಲ್ಲೇ ಮುಂದೂಡಿಕೆ ಮಾಡಿದ್ದರಿಂದ ನಾವು 2,000 ರಿಂದ 2,500 ಕೋಟಿ ರೂ. ರೂ.ಗಳ ನಷ್ಟ ಅನುಭವಿಸಿದ್ದೇವೆ” ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಪರಿಸ್ಥಿತಿಗಳ ಬಗ್ಗೆ ಪಿಟಿಐಗೆ ತಿಳಿಸಿದ್ದಾರೆ.

52 ದಿನಗಳ 60 ಪಂದ್ಯಗಳ ಪಂದ್ಯಾವಳಿ ಮೇ 30 ರಂದು ಅಹಮದಾಬಾದ್‌ನಲ್ಲಿ ಮುಕ್ತಾಯವಾಗಬೇಕಾಗಿತ್ತು. ಆದಾಗ್ಯೂ, ಕೋವಿಡ್ ನಿಂದಾಗಿ ಐಪಿಎಲ್ ಮುಂದೂಡಲ್ಪಡುವ ಮೊದಲು 24 ದಿನಗಳಲ್ಲಿ 29 ಪಂದ್ಯಗಳು ಪೂರ್ಣಗೊಂಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News