ಕೋವಿಡ್ ವಿರುದ್ಧ ಹೋರಾಟಕ್ಕೆ ಬಿಸಿಸಿಐ-ಐಪಿಎಲ್ 100 ಕೋಟಿ ರೂ. ದೇಣಿಗೆ ನೀಡಲಿ: ಸುರಿಂದರ್ ಖನ್ನಾ

Update: 2021-05-05 13:16 GMT

ಮುಂಬೈ: ದೇಶದಲ್ಲಿ ಹೆಚ್ಚುತ್ತಿರುವ ಮಾರಕ ಕೊರೋನದ 2ನೇ ಅಲೆ ವಿರುದ್ದ ಬಿಸಿಸಿಐ-ಐಪಿಎಲ್ ಕನಿಷ್ಠ 100 ಕೋಟಿ ರೂ. ದೇಣಿಗೆ ನೀಡಬೇಕಾಗಿದೆ ಎಂದು ಭಾರತದ ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್ ಮನ್ ಸುರಿಂದರ್ ಖನ್ನಾ ಬುಧವಾರ TIMES OF INDIA ಕ್ಕೆ ತಿಳಿಸಿದ್ದಾರೆ.

ಐಪಿಎಲ್ ಮಧ್ಯದಲ್ಲೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದ್ದರಿಂದ ಬಿಸಿಸಿಐಗೆ ಸುಮಾರು 2,000 ಕೋಟಿ ರೂ.ನಷ್ಟವಾಗಿದೆ ಎಂದು ವರದಿಯಾಗಿದೆ.

ಇದು ಬಿಸಿಸಿಐನ ಲಾಭದ ನಷ್ಟವಾಗಿದೆ, ಅಷ್ಟೆ. ಯಾವುದೇ ಸಂದರ್ಭದಲ್ಲಿ, ಅಧಿಕೃತ ಐಪಿಎಲ್ ಪ್ರಸಾರ ಸಂಸ್ಥೆ (ಸ್ಟಾರ್ ಸ್ಪೋರ್ಟ್ಸ್) ಇಂತಹ ತುರ್ತು ಪರಿಸ್ಥಿತಿಯಲ್ಲಿ  ವಿಮಾ ರಕ್ಷಣೆಯನ್ನು ಹೊಂದಿದೆ. ಬಿಸಿಸಿಐ ಬಳಿ ಸಾಕಷ್ಟು ಹಣ ಸಂಗ್ರಹವಿದೆ.  ಇಂತಹ ಸಮಯದಲ್ಲಿ ಅದು ತನ್ನ ನೈತಿಕ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಸ್ಪಷ್ಟವಾಗಿ, ಸಮಯೋಚಿತವಾಗಿ ನಿರ್ವಹಿಸಬೇಕು "ಎಂದು ಖನ್ನಾ ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News