ಸರಕಾರ ರಚಿಸಲು ನೆತನ್ಯಾಹುಗೆ ನೀಡಿದ ಸಮಯಾವಕಾಶ ಮುಕ್ತಾಯ

Update: 2021-05-05 18:39 GMT

ಜೆರುಸಲೇಮ್, ಮೇ 5: ಅತಂತ್ರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ, ಸರಕಾರ ರಚಿಸಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ನೀಡಲಾಗಿದ್ದ ಸಮಯಾವಕಾಶ ಬುಧವಾರ ಮುಕ್ತಾಯಗೊಂಡಿದೆ. ಈಗ ಅಧಿಕಾರಕ್ಕೆ ಬರಲು ಅವರ ಎದುರಾಳಿಗಳಿಗೆ ಅವಕಾಶ ಲಭಿಸಿದೆ.

ಮಾರ್ಚ್ 23ರಂದು ನಡೆದ ಚುನಾವಣೆಯಲ್ಲಿ ಅತಂತ್ರ ಜನಾದೇಶ ಹೊರಬಿದ್ದಿತ್ತು. ಅದು ಇಸ್ರೇಲ್‌ನಲ್ಲಿ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ನಡೆದ ನಾಲ್ಕನೇ ಚುನಾವಣೆಯಾಗಿತ್ತು. ಹಾಗಾಗಿ, ನೂತನ ಸಮ್ಮಿಶ್ರ ಸರಕಾರವೊಂದನ್ನು ರಚಿಸಲು ನೆತನ್ಯಾಹುಗೆ 28 ದಿನಗಳ ಕಾಲಾವಕಾಶವನ್ನು ನೀಡಲಾಗಿತ್ತು. 71 ವರ್ಷದ ನೆತನ್ಯಾಹು ಭ್ರಷ್ಟಾಚಾರ ಪ್ರಕರಣವೊಂದನ್ನು ಎದುರಿಸುತ್ತಿದ್ದಾರೆ.

ಅವರ ಬಲಪಂಥೀಯ ಲಿಕುಡ್ ಪಕ್ಷ ಗರಿಷ್ಠ ಸ್ಥಾನಗಳನ್ನು ಗೆದ್ದಿತ್ತು. ಆದರೆ, 120 ಸದಸ್ಯ ಬಲದ ಸಂಸತ್‌ನಲ್ಲಿ ಸರಳ ಬಹುಮತಕ್ಕೆ ಅಗತ್ಯವಾಗಿರುವ 61 ಸ್ಥಾನಗಳನ್ನು ಕಲೆಹಾಕಲು ಲಿಕುಡ್ ಮತ್ತು ಅದರ ಮಿತ್ರಪಕ್ಷಗಳಿಗೆ ಸಾಧ್ಯವಾಗಿಲ್ಲ.

ನೂತನ ಸರಕಾರವೊಂದನ್ನು ರಚಿಸುವ ಬಗ್ಗೆ ಇತರ ರಾಜಕೀಯ ನಾಯಕರೊಂದಿಗೆ ಸಮಾಲೋಚಿಸುವುದಾಗಿ ಇಸ್ರೇಲ್ ಅಧ್ಯಕ್ಷ ರಿವ್ಲಿನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News