ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಪಾಂಡು ಕೋವಿಡ್‌ ನಿಂದ ನಿಧನ

Update: 2021-05-06 06:36 GMT

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಹಾಸ್ಯನಟ ಪಾಂಡು ಕೋವಿಡ್‌ ಬಾಧಿತರಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 7೪ರ ಹರೆಯದ ಪಾಂಡು ಇತ್ತೀಚೆಗೆ ಕೋವಿಡ್‌ ಸೋಂಕಿತರಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಪಾಂಡುರವರ ಪತ್ನಿ ಸದ್ಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಕಳೆದ 24 ಗಂಟೆಗಳಲ್ಲಿ ಭಾರತವು 4,12,262 ಹೊಸ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ್ದು, 3,29,113 ಮಂದಿ ಗುಣಮುಖರಾಗಿದ್ದು, 3,980 ಸಾವುಗಳು ವರದಿಯಾಗಿದೆ.

ಪಾಂಡು 1970 ರಲ್ಲಿ ಜೈಶಂಕರ್-ಮುತ್ತುರಾಮನ್ ಅಭಿನಯದ ʼಮಾನವನ್ʼ ಸಿನಿಮಾದಲ್ಲಿ ನಟನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 'ಗಿಲ್ಲಿ', 'ಕಾದಲ್ ಕೊಟ್ಟೈ', 'ಪೋಕ್ಕಿರಿ' ಮತ್ತು 'ಏಝಯಿನ್ ಸಿರಿಪ್ಪಿಲ್' ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. 'ಇಂದ ನಿಲೈ ಮಾರುಮ್' ಅವರು ನಟಿಸಿದ ಕೊನೆಯ ಚಿತ್ರವಾಗಿದೆ.

ಪಾಂಡುರವರು 'ಕ್ಯಾಪಿಟಲ್ ಲೆಟರ್ಸ್' ಎಂಬ ವಿನ್ಯಾಸ ಕಂಪನಿಯನ್ನು ನಡೆಸುತ್ತಿದ್ದರು. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟಾ ಕಝಗಂ (ಎಡಿಎಂಕೆ) ಧ್ವಜ ಮತ್ತು ತಮಿಳುನಾಡು ಪ್ರವಾಸೋದ್ಯಮ ಲಾಂಛನವನ್ನು ಪಾಂಡು ವಿನ್ಯಾಸ ಮಾಡಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News